Advertisement

ಕೇಂದ್ರ ಬಜೆಟ್‌ನಲ್ಲಿ ಕೃಷಿ-ಶಿಕ್ಷಣಕ್ಕೆ ಒತ್ತು: ನವೀನ್‌ ಬಣ್ಣನೆ

03:45 PM Feb 13, 2022 | Team Udayavani |

ಚಿತ್ರದುರ್ಗ: ದೇಶದ ಸ್ವಾತಂತ್ರÂದಶತಮಾನೋ ತ್ಸವದ ಹೊತ್ತಿಗೆ ಆರ್ಥಿಕತೆಹೇಗಿರಬೇಕು ಎನ್ನುವ ಕಲ್ಪನೆ ಇಟ್ಟುಕೊಂಡುಅಮೃತ ಮಹೋತ್ಸವದ ಸಂದರ್ಭದಲ್ಲಿಕೇಂದ್ರ ಬಜೆಟ್‌ ಮಂಡನೆಯಾಗಿದೆ ಎಂದುವಿಧಾನ ಪರಿಷತ್‌ ಸದಸ್ಯ ಕೆ.ಎಸ್‌.ನವೀನ್‌ಹೇಳಿದರು.

Advertisement

ನಗರದ ಬಿಜೆಪಿ ಕಚೇರಿಯಲ್ಲಿ ಶನಿವಾರಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಬಜೆಟ್‌ನಲ್ಲಿ ಕೃಷಿ ಹಾಗೂ ಶಿಕ್ಷಣಕ್ಕೆ ಒತ್ತುನೀಡಿದ್ದು, ಮುಂದುವರೆದ ದೇಶಗಳಮಾದರಿಯಲ್ಲಿ ಡಿಜಿಟಲ್‌ ಕಲಿಕೆಗಾಗಿ 200ಟಿವಿ ಚಾನೆಲ್‌ಗ‌ಳನ್ನು ಆರಂಭಿಸಲು ವಿತ್ತಸಚಿವೆ ನಿರ್ಮಲಾ ಸೀತಾರಾಮನ್‌ ಅನುದಾನಮೀಸಲಿಟ್ಟಿದ್ದಾರೆ ಎಂದರು.ಈ ಬಜೆಟ್‌ ಸರ್ವ ಸ್ಪರ್ಶಿಯಾಗಿದ್ದು, ದೇಶದಎಲ್ಲ ವರ್ಗಗಳಿಗೂ ಅನುಕೂಲವಾಗಲಿದೆ.

ಜಲಜೀವನ್‌ ಮಿಷನ್‌ ಯೋಜನೆಯಡಿ ಈವರ್ಷ 3.8 ಕೋಟಿ ಮನೆಗಳಿಗೆ ಶುದ್ಧ ಕುಡಿವನೀರು ಪೂರೈಸಲಾಗುವುದು. ನಳಕ್ಕೆ ಮೀಟರ್‌ಅಳವಡಿಸುವುದು ಕರ ವಸೂಲಿಗೆ ಅಲ್ಲ,ನೀರಿನ ಬಜೆಟ್‌ ಲೆಕ್ಕ ಇಡಲು. ಪ್ರತಿ ವ್ಯಕ್ತಿಗೆ 55ಲೀಟರ್‌ ನೀರು ಒದಗಿಸಲು. 2025ರೊಳಗೆಎಲ್ಲರಿಗೂ ಸೂರು ಒದಗಿಸುವ ಮಹತ್ವಕಾಂಕ್ಷೆಹೊಂದಿದ್ದು, 80 ಲಕ್ಷ ಮನೆಗಳ ನಿರ್ಮಾಣಕ್ಕೆ48 ಸಾವಿರ ಕೋಟಿ ಮೀಸಲಿಡಲಾಗಿದೆ.2 ಲಕ್ಷ ಅಂಗನವಾಡಿಗಳನ್ನು ಮೇಲ್ದರ್ಜೆಗೆಏರಿಸಲಾಗುತ್ತಿದೆ.

ಬೆಂಬಲ ಬೆಲೆ ಯೋಜನೆಗೆ 2.37 ಲಕ್ಷ ಕೋಟಿ ರೂ. ಮೀಸಲಿಡಲಾಗಿದೆ.ಕುಗ್ರಾಮಗಳ ಅಭಿವೃದ್ಧಿಗೆ 20 ಸಾವಿರ ಕೋಟಿರೂ. ಮೀಸಲಿಟ್ಟಿದ್ದು, ಅಂತ್ಯದ ಗ್ರಾಮದವರೆಗೆರಸ್ತೆ ನಿರ್ಮಿಸಲಾಗುವುದು. ಈ ಹಿಂದೆಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಪ್ರತಿ ದಿನಸರಾಸರಿ 3 ಕಿಮೀ ರಸ್ತೆ ನಿರ್ಮಿಸಲಾಗುತ್ತಿತ್ತು.ಈಗ ಅದನ್ನು 70 ಕಿಮೀ ಮಾಡಲಾಗುತ್ತಿದೆ.ಈ ವರ್ಷ 20 ಸಾವಿರ ಕಿಮೀ ರಸ್ತೆನಿರ್ಮಿಸುವ ಉದ್ದೇಶವಿದೆ. ಇದರಲ್ಲಿ ನಮ್ಮಜಿಲ್ಲೆಯ ಹೊಸದುರ್ಗ-ಹೊಳಲ್ಕೆರೆ ನಡುವೆದ್ವಿಪಥ ಮಾಡಲಾಗುವುದು. ಹಿರಿಯೂರು-ಹುಳಿಯಾರು ನಡುವೆಯೂ ಹೆದ್ದಾರಿನಿರ್ಮಾಣ ಆಗಲಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next