ಚಿತ್ರದುರ್ಗ: ಜಿಲ್ಲೆಯಲ್ಲಿ ಬಿಜೆಪಿ ಬಲವಾಗಿದ್ದು,ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಚುನಾವಣೆಯಲ್ಲಿ ಗೆದ್ದು ಜಿಪಂ ನಮ್ಮ ಹಿಡಿತಕ್ಕೆಸಿಗುವಂತೆ ನೋಡಿಕೊಳ್ಳಬೇಕಿದೆ. ಇದಕ್ಕಾಗಿ ಪಕ್ಷಮುಖಂಡರು, ಕಾರ್ಯಕರ್ತರು ಶ್ರಮಿಸಬೇಕುಎಂದು ಕೃಷಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿಸಚಿವ ಬಿ.ಸಿ. ಪಾಟೀಲ್ ಕರೆ ನೀಡಿದರು.
ನಗರದ ಬಿಜೆಪಿ ಪಕ್ಷದ ಕಚೇರಿಯಲ್ಲಿ ನಡೆದಪಂಡಿತ್ ದೀನದಯಾಳ್ ಉಪಾಧ್ಯಾಯರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರುಮಾತನಾಡಿದರು.
ಜಿಲ್ಲೆಯಲ್ಲಿ ಪಕ್ಷವನ್ನು ಸಂಘಟಿಸಬೇಕಿದೆ. ಮಾಜಿಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉತ್ತಮಆಡಳಿತ ನೀಡಿದ್ದಾರೆ. ಅದೇ ರೀತಿ ಮುಖ್ಯಮಂತ್ರಿಬಸವರಾಜ ಬೊಮ್ಮಾಯಿ ಕೂಡ ಉತ್ತಮಆಡಳಿತ ನೀಡುತ್ತಿದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲಿಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರುನಮ್ಮ ಪಕ್ಷದವರೇ ಇರುವುದರಿಂದ ನಮಗೆಅನುಕೂಲವಾಗಲಿದೆ.
ಜಿಲ್ಲೆಯ ಆರು ತಾಪಂ ಹಾಗೂಜಿಪಂ ಬಿಜೆಪಿ ವಶವಾಗಬೇಕು. ಇದು ಕಾರ್ಯಕರ್ತರಚುನಾವಣೆಯಾಗಿದ್ದು, ಗೆಲುವಿಗೆ ಎಲ್ಲರೂ ಒಟ್ಟಾಗಿಶ್ರಮಿಸಬೇಕು ಎಂದರು.ಚಿತ್ರದುರ್ಗ ಜಿಲ್ಲೆ ನನಗೆ ಹೊಸದಲ್ಲ.ಹಿರಿಯೂರಿನಿಂದ ದಾವಣಗೆರೆವರೆಗೂ ಪೋಲಿಸ್‌ಆಧಿಕಾರಿಯಾಗಿ ಕೆಲಸ ಮಾಡಿದ್ದೇನೆ.
ಹಾಗಾಗಿಜಿಲ್ಲೆಯ ಸಂಪೂರ್ಣ ಮಾಹಿತಿ ಇದೆ. ಹಿರೇಕೇರೂರಿಗೆಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರಿ ಮೂಲಕವೇಹೋಗುತ್ತಿದ್ದೆ. ಆಗ ನನಗೆ ಚಿತ್ರದುರ್ಗ ಜಿಲ್ಲೆಉಸ್ತುವಾರಿ ಸಿಗುತ್ತದೆ ಎಂಬ ಪರಿಕಲ್ಪನೆಯೂ ಇರಲಿಲ್ಲ,ಈಗ ಮುಖ್ಯಮಂತ್ರಿಗಳು ಉಸ್ತುವಾರಿ ನೀಡಿದ್ದಾರೆ.ಇನ್ನೂ ಒಂದೂಕಾಲು ವರ್ಷ ಸಮಯ ಇದ್ದು,ಈ ಅವಧಿಯಲ್ಲಿ ಸಾಧ್ಯವಾದಷ್ಟು ಅಭಿವೃದ್ಧಿ ಕೆಲಸಮಾಡುವುದಾಗಿ ತಿಳಿಸಿದರು.