Advertisement

ಕೋಟೆ ಅಭಿವೃದ್ಧಿಗೆ 8.11 ಕೋಟಿ ರೂ. ಮಂಜೂರು

02:59 PM Sep 27, 2021 | Team Udayavani |

ಚಿತ್ರದುರ್ಗ: ಐತಿಹಾಸಿಕ ಏಳುಸುತ್ತಿನ ಕೋಟೆಯಲ್ಲಿ ಪ್ರವಾಸಿಗರಿಗೆ ವಿವಿಧ ಸೌಲಭ್ಯಕಲ್ಪಿಸಲು ಕೇಂದ್ರ ಸರ್ಕಾರದ ಪುರಾತತ್ವಇಲಾಖೆಯಿಂದ 8.11 ಕೋಟಿ ರೂ.ಅನುದಾನ ಮಂಜೂರಾಗಿದೆ ಎಂದು ಶಾಸಕಜಿ.ಎಚ್‌. ತಿಪ್ಪಾರೆಡ್ಡಿ ತಿಳಿಸಿದರು.

Advertisement

ನಗರದ ಪ್ರವಾಸಿಮಂದಿರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಕೋಟೆ ಅಭಿವೃದ್ಧಿಗೆ ಬಹಳ ವರ್ಷಗಳ ನಂತರ ದೊಡ್ಡ ಮೊತ್ತದಅನುದಾನ ಲಭ್ಯವಾಗಿದೆ. ಈ ಮೂಲಕಕೋಟೆಯನ್ನು ಮತ್ತಷ್ಟು ಪ್ರವಾಸಿಸ್ನೇಹಿಯನ್ನಾಗಿ ಮಾಡಬಹುದು ಎಂದರು.

2019ರಿಂದ ನಡೆದ ಪತ್ರವ್ಯವಹಾರದಿಂದಾಗಿ ಆರಂಭದಲ್ಲಿ 3 ಕೋಟಿರೂ. ಅನುದಾನ ಮಂಜೂರಾಗಿತ್ತು. ಆನಂತರ ಅದನ್ನು 8.11 ಕೋಟಿ ರೂ.ಗಳಿಗೆ ಹೆಚ್ಚಿಸಿ ಮಂಜೂರಾತಿ ನೀಡಲಾಗಿದೆ.ಇದರಲ್ಲಿ ಈಗಾಗಲೇ 1.43 ಕೋಟಿ ರೂ.ಬಿಡುಗಡೆಯಾಗಿದ್ದು ಟೆಂಡರ್‌ ಹಂತದಲ್ಲಿದೆ.ಇದರೊಟ್ಟಿಗೆ ಕೋಟೆ ಹೊರ ಭಾಗದರಸ್ತೆಗಳು, ಲಾಡಿjಂಗ್‌ ಸೇರಿದಂತೆ ಸುಮಾರು15 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಕಾಮಗಾರಿಗಳು ನಡೆಯುತ್ತಿವೆ ಎಂದು ವಿವರಿಸಿದರು.

ಯಾವ ಕಾಮಗಾರಿಗೆ ಎಷ್ಟು ಅನುದಾನ?:ದಿನೇ ದಿನೇ ಕೋಟೆಗೆ ಪ್ರವಾಸಿಗರ ಸಂಖ್ಯೆಹೆಚ್ಚಾಗುತ್ತಿರುವುದನ್ನು ಮನಗಂಡುಸರ್ಕಾರ ಅನುದಾನ ಮಂಜೂರು ಮಾಡಿದೆ.ಕೋಟೆಯೊಳಗಿನ ಶೌಚಾಲಯಗಳಬ್ಲಾಕ್‌-94.19 ಲಕ್ಷ ರೂ., ಕೆಫೆಟೇರಿಯಾ,ಕುಡಿಯುವ ನೀರಿನ ಬ್ಲಾಕ್‌-60.28 ಲಕ್ಷ,ಕುಡಿಯುವ ನೀರಿನ ಯೂನಿಟ್‌-36.94ಲಕ್ಷ, ಲ್ಯಾಂಡ್‌ ಸ್ಕೇಪಿಂಗ್‌-69.79 ಲಕ್ಷ,ಬೆಟ್ಟದ ಮೇಲೆ ಲ್ಯಾಂಡ್‌ ಸ್ಕೇಪಿಂಗ್‌-26.81 ಲಕ್ಷ, ಪಾತ್‌ ವೇ-3.35 ಕೋಟಿರೂ., ಸೈನ್‌ ಬೋರ್ಡ್ಸ್‌ -35.27 ಲಕ್ಷ,ಡಿಸ್ಪೆ$Éà-1.3 ಕೋಟಿ ರೂ. ಸೇರಿದಂತೆ ಇನ್ನಿತರೆ ಕಾಮಗಾರಿಗಳಿಗೆ 8.11 ಕೋಟಿರೂ. ಬಿಡುಗಡೆಯಾಗಿದೆ ಎಂದು ಶಾಸಕರು ಮಾಹಿತಿ ನೀಡಿದರು.

ನಗರದಲ್ಲಿ ಕೋಟೆಗೆ ತೆರಳಲು ಸ್ಟೇಡಿಯಂರಸ್ತೆ ಮೂಲಕ ಸಾಗಿ, ಮಾಸ್ತಮ್ಮ ಲೇಔಟ್‌,ಹರೀಶ್ಚಂದ್ರ ಘಾಟ್‌ ಪಕ್ಕದ ರಸ್ತೆ ಮೂಲಕನೇರವಾಗಿ ಕೋಟೆ ತಲುಪುವಂತೆ ವಿಶಾಲವಾಗಿರಸ್ತೆ ಅಭಿವೃದ್ಧಿ ಮಾಡಿಸಲಾಗುವುದು ಎಂದುಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.ಸುದ್ದಿಗೋಷ್ಠಿಯಲ್ಲಿ ಪುರಾತತ್ವಇಲಾಖೆಯ ಅ ಧಿಕಾರಿ ಕಿಶೋರ್‌ ರೆಡ್ಡಿ,ತಹಶೀಲ್ದಾರ್‌ ಸತ್ಯನಾರಾಯಣ, ನಗರಸಭೆಸದಸ್ಯ ಶಶಿಧರ ಇತರರು ಇದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next