ಚಿತ್ರದುರ್ಗ: ಸುಡುಗಾಡು ಸಿದ್ಧರು, ಅಲೆಮಾರಿಗಳು ಕಾಯಂ ವಿಳಾಸ, ನೆಲೆಗೆಮನವಿ ಮಾಡಿದ್ದಾರೆ. ಈ ನಿಟ್ಟಿನಲ್ಲಿಜಿಲ್ಲಾಧಿ ಕಾರಿಗಳು ನಿವೇಶನ ಒದಗಿಸಲುಕ್ರಮ ಕೈಗೊಂಡು ವರದಿ ಸಲ್ಲಿಸುವಂತೆತೋಟಗಾರಿಕೆ ಇಲಾಖೆ ಸಚಿವ ಮುನಿರತ್ನ ಸೂಚಿಸಿದರು.
ಬಯಲುಸೀಮೆ ಪ್ರದೇಶಾಭಿವೃದ್ಧಿಮಂಡಳಿಯ ಇ-ಆμàಸ್ ಉದ್ಘಾಟನೆ ಸಂದರ್ಭದಲ್ಲಿ ಸುಡುಗಾಡು ಸಿದ್ಧರನ್ನುಭೇಟಿಯಾದ ನಂತರ ಅವರುಮಾತನಾಡಿದರು.
ಭದ್ರವಾದ ನೆಲೆ,ಮಕ್ಕಳಿಗೆ ಶಿಕ್ಷಣಕ್ಕೆ ವ್ಯವಸ್ಥೆ ಮಾಡುವಂತೆಕೇಳಿಕೊಂಡಿದ್ದಾರೆ. ಮಾನವೀಯತೆ ಇರುವಯಾರೇ ಆಗಲಿ ಇವರಿಗೆ ಸ್ಪಂದಿಸಬೇಕು.ಜಿಲ್ಲೆಯ 6 ತಾಲೂಕುಗಳಲ್ಲಿ ಸುಡುಗಾಡುಸಿದ್ಧರಿಗೆ ನಿವೇಶನ, ಸರ್ಕಾರದ ಸೌಲಭ್ಯಶೀಘ್ರ ಸಿಗುವಂತೆ ಮಾಡಬೇಕು ಎಂದರು.ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಮಾತನಾಡಿ,ಇಂಗಳದಾಳು ಬಳಿ 2 ಎಕರೆ ಜಾಗದಲ್ಲಿಸುಡುಗಾಡು ಸಿದ್ಧರ ಕುಟುಂಬಗಳಿಗೆನಿವೇಶನ ಅಭಿವೃದ್ಧಿಗೆ ಇಂದು ಭೂಮಿಪೂಜೆನಡೆಯಬೇಕಾಗಿತ್ತು. ಆದರೆ ಜಾಗದ ಕುರಿತುಮಹಿಳೆಯೊಬ್ಬರು ನ್ಯಾಯಾಲಯದಮೆಟ್ಟಿಲೇರಿದ್ದಾರೆ. ಆದ್ದರಿಂದ ಇಂದುಕಾರ್ಯಕ್ರಮ ರದ್ದಾಗಿದೆ.
ಸ್ವಲ್ಪ ಸಮಯಹಿಡಿಯುತ್ತದೆ, ಆತಂಕ ಬೇಡ. ಬೇರೆ ಜಾಗಅಥವಾ ವಿವಾದ ಬಗೆಹರಿಸಿ ನಿವೇಶನಮಾಡಿಕೊಡುತ್ತೇವೆ ಎಂದು ಭರವಸೆನೀಡಿದರು.ಸಮುದಾಯದ ಕೆ.ಎಂ. ನಾಗರಾಜುಹಾಗೂ ತಿಪ್ಪಮ್ಮ ಮಾತನಾಡಿ, ಸುಮಾರು30 ವರ್ಷಗಳಿಂದ ಟೆಂಟುಗಳಲ್ಲಿ ವಾಸಮಾಡುತ್ತಿದ್ದೇವೆ. ಮಕ್ಕಳಿಗೆ ಶಿಕ್ಷಣಕೊಡಿಸಬೇಕು, ಒಂದು ಭದ್ರ ನೆಲೆಕಟ್ಟಿಕೊಳ್ಳಬೇಕು. ಸರ್ಕಾರ ನಮಗೆ ಸಹಾಯಮಾಡಬೇಕು ಎಂದು ಮನವಿ ಮಾಡಿದರು.ಹಿರಿಯೂರು ಶಾಸಕಿ ಪೂರ್ಣಿಮಾಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯಕೆ.ಎಸ್. ನವೀನ್, ಜಿಲ್ಲಾ ಧಿಕಾರಿ ಕವಿತಾಎಸ್. ಮನ್ನಿಕೇರಿ ಇದ್ದರು.