Advertisement

ಅಂಗಡಿ ಮುಂಗಟ್ಟುಗಳಲ್ಲಿ ವ್ಯಾಪಾರ ಅಷ್ಟಕಷ್ಟೆ

08:02 PM Jan 23, 2022 | Team Udayavani |

ಚಿತ್ರದುರ್ಗ: ಸರ್ಕಾರ ವಾರಾಂತ್ಯದ ಕರ್ಫ್ಯೂವಿ ಧಿಸಿದ್ದರೂ ಮಾಹಿತಿಯಿಲ್ಲದೆ ಜನ ಬೀದಿಗೆಬರುವುದು ಸಾಮಾನ್ಯ. ಅದೇ ರೀತಿ ಸರ್ಕಾರವಾರಾಂತ್ಯ ಕರ್ಫ್ಯೂ ಹಿಂಪಡೆದಿದ್ದರೂ ಅನೇಕರುಮನೆಯಲ್ಲೇ ಇದ್ದರು. ಅಂಗಡಿ ಮುಂಗಟ್ಟಗಳುಅಷ್ಟೇ ಎನ್ನುವ ವ್ಯತಿರಿಕ್ತ ವಾತಾವರಣ ಶನಿವಾರಕಂಡುಬಂತು.

Advertisement

ಕೋವಿಡ್‌ ಹಾಗೂ ಒಮಿಕ್ರಾನ್‌ ನಿಯಂತ್ರಣಕ್ಕೆರಾಜ್ಯ ಸರ್ಕಾರ ಕಳೆದ ಮೂರು ವಾರಗಳಿಂದ ವೀಕೆಂಡ್‌ಲಾಕ್‌ ಮಾಡಿತ್ತು. ಇದರಿಂದ ಅನೇಕರು ಬೇಸರವ್ಯಕ್ತಪಡಿಸಿ ವ್ಯವಹಾರಕ್ಕೆ ನಷ್ಟವಾಗುತ್ತದೆ ಎಂದು ವಾದಮಾಡಿದ್ದರು. ಅನೇಕ ಜನಪ್ರತಿನಿಧಿ ಗಳು ಸರ್ಕಾರದನಡೆಯನ್ನು ಟೀಕಿಸಿದ್ದರು. ಇದರಿಂದ ಎಚ್ಚೆತ್ತ ಸರ್ಕಾರವೀಕೆಂಡ್‌ ಲಾಕ್‌ಡೌನ್‌ ಆದೇಶವನ್ನು ಹಿಂಪಡೆದು,ರಾತ್ರಿ ಕರ್ಫ್ಯೂ ಮಾತ್ರ ಮುಂದುವರೆಸಿದೆ.

ಆದರೆ, ಅನೇಕ ವ್ಯಾಪಾರಸ್ಥರು, ಸಾರ್ವಜನಿಕರು,ಆಟೋದವರು ಶನಿವಾರ ಯಾವುದೇ ನಿರ್ಬಂಧಇಲ್ಲದಿದ್ದರೂ ರಸ್ತೆಗೆ ಬರಲಿಲ್ಲ. ಅಂಗಡಿಮುಂಗಟ್ಟುಗಳು ಬೆಳಗಿನಿಂದ ತೆರೆಯಲಿಲ್ಲ.ಆದರೆ, ನಿಧಾನವಾಗಿ ಮಾಹಿತಿ ಗೊತ್ತಾದ ನಂತರಮಧ್ಯಾಹ್ನದ ಹೊತ್ತಿಗೆ ನಗರ ಸಹಜ ಸ್ಥಿತಿಗೆ ಮರಳಿದವಾತಾವರಣ ಕಾಣಬಂತು.

ನಗರದ ಗಾಂ ಧಿ ವೃತ್ತ,ಸಂತೆ ಹೊಂಡದ ರಸ್ತೆ, ಖಾಸಗಿ ಬಸ್‌ ನಿಲ್ದಾಣ,ಹೊಳಲ್ಕೆರೆ ರಸ್ತೆ, ಮೇದೆಹಳ್ಳಿ ರಸ್ತೆ, ಕೆಎಸ್‌ಆರ್‌ಟಿಸಿಬಸ್‌ ನಿಲ್ದಾಣ, ಚಳ್ಳಕೆರೆ ಟೋಲ್‌ಗೇಟ್‌ ಸೇರಿದಂತೆವಿವಿಧ ಜನ ದಟ್ಟಣೆ ಪ್ರದೇಶಗಳು ಬೆಳಗ್ಗೆ ಬಹುತೇಕಬಿಕೋ ಎನ್ನುತ್ತಿದ್ದವು. ಮಧ್ಯಾಹ್ನ ಲವಲವಿಕೆಯಿಂದಕೂಡಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next