Advertisement

ಕಷ್ಟಕ್ಕೆ ಸ್ಪಂದಿಸುವ ಮುರುಘಾ ಮಠದ ಸೇವೆ ಅನನ್ಯ

03:43 PM Apr 30, 2020 | Naveen |

ಚಿತ್ರದುರ್ಗ: ಯಾರಾದರೂ ಕಷ್ಟ ಎಂದರೆ ಮೊದಲು ಸ್ಪಂದಿಸುವುದು ಮುರುಘಾಮಠ ಎಂದು ಅಪರ ಜಿಲ್ಲಾಧಿಕಾರಿ ಎ. ಸಂಗಪ್ಪ ಹೇಳಿದರು. ಮುರುಘರಾಜೇಂದ್ರ ಮಠದಲ್ಲಿ ಮಹಿಳಾ ಸೇವಾ ಸಮಾಜ, ದೇವಸ್ಥಾನಗಳ ಅರ್ಚಕರು, ಬಿಎಸ್‌ಎನ್‌ಎಲ್‌ನಲ್ಲಿ ಕೆಲಸ ಮಾಡುತ್ತಿರುವ ಗುತ್ತಿಗೆ ಕಾರ್ಮಿಕರು, ಪಡಿತರ ಚೀಟಿ ಇಲ್ಲದ ನಿವಾಸಿಗಳು, ವಿಜಯನಗರದ ಕೂಲಿ ಕಾರ್ಮಿಕರು ಸೇರಿದಂತೆ ಸುಮಾರು 300 ಕುಟುಂಬಗಳಿಗೆ ದವಸ-ಧಾನ್ಯ ವಿತರಿಸಿ ಅವರು ಮಾತನಾಡಿದರು.

Advertisement

ಮುರುಘಾ ಮಠದ ಸೇವೆ ಇಂದು ನಿನ್ನೆಯದಲ್ಲ, ಹಲವು ಶತಮಾನಗಳಿಂದ ಸಾಗಿಬಂದ ಪರಂಪರೆ ಇದು. ಪೂರ್ವದಿಂದ ಪಶ್ಚಿಮದ ಕಡೆ ಹೋಗುವ ಅನೇಕ ಪ್ರಯಾಣಿಕರು, ಪ್ರವಾಸಿಗರು, ಹಸಿವಾದಾಗ ನೆನಪಿಸಿಕೊಳ್ಳುವುದು ಮಧ್ಯ ಕರ್ನಾಟಕದ ಹೃದಯ ಭಾಗದಲ್ಲಿರುವ ಚಿತ್ರದುರ್ಗದ ಮುರುಘಾ ಮಠವನ್ನು ಎಂದರು. ಡಾ| ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ಬಸವಾದಿ ಶರಣರ ತತ್ವಗಳನ್ನು ಆಚರಿಸುವುದೆಂದರೆ ಹಸಿದವರಿಗೆ ಮೊದಲು ಅನ್ನ ಕೊಡುವುದು. ಶ್ರೀಮಠದಿಂದ ಪ್ರತಿ ವರ್ಷ ಬೇಸಿಗೆಯಲ್ಲಿ ಎಸ್‌ಜೆಎಂ ದಂತ ಮಹಾವಿದ್ಯಾಲಯದ ಹತ್ತಿರ ಮಜ್ಜಿಗೆ ವಿತರಣೆಯನ್ನು ಮಾಡಲಾಗುತ್ತಿತ್ತು. ಈ ವರ್ಷ ಕೋವಿಡ್ ಹಿನ್ನೆಲೆಯಲ್ಲಿ ದವಸ-ಧಾನ್ಯ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.

ಡಿಎ ಚ್‌ ಒ ಡಾ| ಪಾಲಾಕ್ಷ, ಕಾಂಗ್ರೆಸ್‌ ಮುಖಂಡ ಹನುಮಲಿ ಷಣ್ಮುಖಪ್ಪ ಮಾತನಾಡಿದರು. ಜಂಗಮ ಸಮಾಜದ ಮಲ್ಲಿಕಾರ್ಜುನಯ್ಯ, ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ.ಎಂ. ವೀರೇಶ್‌, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ತಾಜ್‌ಪೀರ್‌, ಎಸ್‌.ಜೆ.ಎಂ ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ. ಪರಮಶಿವಯ್ಯ, ಸಿಇಒ ಎಂ.ಜಿ. ದೊರೆಸ್ವಾಮಿ, ವಕೀಲರಾದ ಉಮೇಶ್‌, ಆರ್‌. ಶೇಷಣ್ಣಕುಮಾರ್‌, ಮಹಡಿ ಶಿವಮೂರ್ತಿ, ಪೈಲ್ವಾನ್‌ ತಿಪ್ಪೇಸ್ವಾಮಿ ಚಿತ್ರದುರ್ಗ: ಮುರುಘಾ ಮಠದಲ್ಲಿ 300 ಕುಟುಂಬಗಳಿಗೆ ಆಹಾರ ಧಾನ್ಯ ವಿತರಿಸಲಾಯಿತು. ಮೊದಲಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next