Advertisement

1.43 ಕೋಟಿ ರೂ. ಉಳಿತಾಯ ಬಜೆಟ್‌

03:06 PM Mar 02, 2021 | Team Udayavani |

ಚಿತ್ರದುರ್ಗ: ಚಿತ್ರದುರ್ಗ ನಗರಸಭೆಯ 2021-22ನೇ ಸಾಲಿನ ಆಯವ್ಯಯ ಮಂಡನೆಯಾಗಿದ್ದು, 1.43 ಕೋಟಿ ರೂ. ಉಳಿತಾಯ ಬಜೆಟ್‌ ಮಂಡನೆ ಮಾಡಲಾಗಿದೆ.

Advertisement

ಜಿಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಆಯವ್ಯಯ ಸಾಮಾನ್ಯ ಸಭೆಗೆ ನಗರಸಭೆ ಅಧ್ಯಕ್ಷೆ ತಿಪ್ಪಮ್ಮ ಬಜೆಟ್‌ ಪ್ರತಿಯನ್ನು ತಂದರು. ಅವರ ಪರವಾಗಿ ಉಪಾಧ್ಯಕ್ಷೆ ಶ್ವೇತಾ ವೀರೇಶ್‌ ಓದಿ ಮಂಡಿಸಿದರು.

ನಗರಸಭೆಗೆ ಸರ್ಕಾರ ನೀಡುವ ವಿವಿಧ ಅನುದಾನಗಳು ಹಾಗೂ ಆದಾಯದ ಆಧಾರದಲ್ಲಿ ಬಜೆಟ್‌ ತಯಾರಿಸಿದ್ದು, 1,43,018 ರೂ. ಉಳಿತಾಯದಲೆಕ್ಕದಲ್ಲಿ ಆಯವ್ಯಯ ಮಂಡಿಸಲಾಯಿತು.ನಗರದ ವಿವಿಧ ವಾರ್ಡ್‌ಗಳಲ್ಲಿ ನೀರಿನ ಅಗತ್ಯತೆಗೆ ಅನುಗುಣವಾಗಿ ಬೋರ್‌ವೆಲ್‌, ನೀರು ಸರಬರಾಜುಟ್ಯಾಂಕ್‌ ನಿರ್ಮಾಣ ಹಾಗೂ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ಮಾಣಕ್ಕಾಗಿ 5 ಕೋಟಿ ರೂ. ಮೀಸಲಿಡಲಾಗಿದೆ.

2021-22ನೇ ಸಾಲಿನ 15ನೇ ಹಣಕಾಸು ಯೋಜನೆ, ಎಸ್‌ಎಫ್‌ಸಿ ಮುಕ್ತನಿಧಿ ಮತ್ತು ವಿಶೇಷ ಅನುದಾನಗಳಲ್ಲಿ ರಸ್ತೆ ಅಭಿವೃದ್ಧಿ, ಪಾದಾಚಾರಿಗಳಿಗೆ ಪೇವರ್ ಅಳವಡಿಸಲಾಗುವುದು. ನಗರದಲ್ಲಿ ಅರಣ್ಯೀಕರಣ, ಸೋಲಾರ್‌ ದೀಪಗಳ ಅಳವಡಿಕೆ, ನಗರದ ಸೌಂದರ್ಯಕ್ಕಾಗಿ ಹೂವಿನ ಕುಂಡಗಳು, ಫುಡ್‌ ಫೋರ್ಟ್‌ ನಿರ್ಮಾಣ, ರಸ್ತೆ ಬದಿ ಬೆಂಚ್‌ ಹಾಕುವುದು, ಬಡವರಿಗೆ ವಸತಿ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು ಎಂದು ಬಜೆಟ್‌ನಲ್ಲಿ ಉಲ್ಲೇಖೀಸಲಾಗಿದೆ.

ಶೇ.24.10 ಯೋಜನೆಯಡಿ ಪರಿಶಿಷ್ಟ ಜಾತಿ/ ವರ್ಗದವರ ಕಲ್ಯಾಣಾಭಿವೃದ್ಧಿಗಾಗಿ 2.10 ಕೋಟಿ ರೂ., ಶೇ.7.25 ಯೋಜನೆಯಡಿ ಇತರೆ ಕಡು ಬಡವರ ಕಲ್ಯಾಣಕ್ಕಾಗಿ 70 ಲಕ್ಷ ರೂ., ಶೇ.5 ರ ಯೋಜನೆಯಡಿ ವಿಕಲಚೇತನರ ಕಲ್ಯಾಣಕ್ಕೆ 20 ಲಕ್ಷ ರೂ. ಹಾಗೂ ಶೇ. 1ರ ಯೋಜನೆಯಡಿ ಕ್ರೀಡಾ ಚಟುವಟಿಕೆಗಳ ಪ್ರೋತ್ಸಾಹಕ್ಕೆ 2 ಲಕ್ಷ ರೂ. ಮೀಸಲಿಡಲಾಗಿದೆ ಎಂದು ಶ್ವೇತಾ ವೀರೇಶ್‌ ಹೇಳಿದರು.

Advertisement

ನಗರಸಭೆಯ ನಿರೀಕ್ಷಿತ ಆದಾಯ ಪಟ್ಟಿ: ಸ್ವಯಂ ಘೋಷಿತ ಆಸ್ತಿ ತೆರಿಗೆ 12 ಕೋಟಿ ರೂ, ನೀರಿನಕಂದಾಯ 4 ಕೋಟಿ ರೂ, ನೀರಿನ ಸಂಪರ್ಕ ಶುಲ್ಕ 30 ಲಕ್ಷ ರೂ., ವಾಣಿಜ್ಯ ಸಂಕೀರ್ಣಗಳ ಬಾಡಿಗೆ 75 ಲಕ್ಷರೂ., ಉದ್ಯಮ ಪರವಾನಗಿ ಶುಲ್ಕ 35 ಲಕ್ಷ, ಕಟ್ಟಡಪರವಾನಗಿ ಶುಲ್ಕ 25 ಲಕ್ಷ ರೂ, ವಾರ್ಷಿಕ ಹರಾಜುಬಾಬ್ತು 40 ಲಕ್ಷ ರೂ, ಜಾಹೀರಾತು ತೆರಿಗೆ 5 ಲಕ್ಷ ರೂ., ರಸ್ತೆ ಕಟಿಂಗ್‌ ಶುಲ್ಕ 10 ಲಕ್ಷ ರೂ.

ಸರ್ಕಾರದ ಅನುದಾನಗಳ ವಿವರ: ಎಸ್‌ಎಫ್‌ಸಿ ಅನುದಾನ 4 ಕೋಟಿ, ನಲ್ಮ್ 50 ಲಕ್ಷ ರೂ, ಎಸ್‌ಎಫ್‌ಸಿ ವಿಶೇಷ ಅನುದಾನ 4 ಕೋಟಿ, 15ನೇ ಹಣಕಾಸು ಯೋಜನೆ 9 ಕೋಟಿ, ಬರಪರಿಹಾರ ಅನುದಾನ 20ಲಕ್ಷ ರೂ, ಅಮೃತ್‌ ಯೋಜನೆ ಅನುದಾನ 2 ಕೋಟಿ,ಎಸ್‌ಎಫ್‌ಸಿ ವೇತನ ನಿ ಧಿ 8 ಕೋಟಿ, ಎಸ್‌ಎಫ್‌ಸಿ ವಿದ್ಯುತ್‌ ಅನುದಾನ 15 ಕೋಟಿ ರೂ. 2021-22ನೇ ಸಾಲಿನ ಕರಡು ಆಯವ್ಯಯ ಘೋಷಾÌರೆ: ಪ್ರಾರಂಭಿಕಶಿಲ್ಕು 38,21 ಲಕ್ಷ ರೂ, ರಾಜಸ್ವ ಜಮಾ 53.07 ಲಕ್ಷ ರೂ, ಬಂಡವಾಳ ಜಮಾ 15 ಲಕ್ಷಹಾಗೂ ಅಮಾನತು ಜಮಾ 24,74 ಲಕ್ಷ ರೂ ಸೇರಿದಂತೆ 116.18 ಕೋಟಿರೂ.ಗಳಾದರೆ, ರಾಜಸ್ವ ಪಾವತಿ 44,23 ಕೋಟಿ ರೂ, ಬಂಡವಾಳ ಪಾವತಿ 55,89 ಕೋಟಿ ರೂ, ಹಾಗೂ ಆಮಾನತು ಖಾತೆ ಪಾವತಿ 14,62 ಕೋಟಿ ರೂ. ಗಳಾಗಿದೆ. ಒಟ್ಟಾರೆ ಪಾವತಿ 114.74 ಕೋಟಿ ರೂ. ಗಳಾಗಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next