Advertisement
ನಗರದ ಜಿಪಂ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ಕಂದಾಯಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಭೂಸ್ವಾಧಿಧೀನದ ನೋಟಿಸ್ ತಲುಪುವ ಮೊದಲೇ ಕಾಮಗಾರಿ ಆರಂಭಿಸಲಾಗಿದೆ ಎಂದು ರೈತರು ಪ್ರತಿಭಟನೆ ನಡೆಸಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಸಂಗಪ್ಪ ಗಮನ ಸೆಳೆದರು. ಆ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, ಜಮೀನು ಕಳೆದುಕೊಳ್ಳುವ ರೈತರ ಸಭೆ ನಡೆಸಿ ಅವರಲ್ಲಿರುವ ಗೊಂದಲ ನಿವಾರಿಸಿ ಎಂದರು.
Related Articles
Advertisement
ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲು ಹೊಳಲ್ಕೆರೆಯ ಚಿಕ್ಕಜಾಜೂರು, ಎಚ್.ಡಿ. ಪುರ, ಬಿ. ದುರ್ಗ, ಹೊಸದುರ್ಗ ತಾಲೂಕಿನ ಆನಿವಾಳ, ಮತ್ತೋಡು, ಶ್ರೀರಾಂಪುರಗಳಲ್ಲಿ ಜಮೀನು ನೀಡುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಸ್ಮಶಾನ ಅಭಿವೃದ್ಧಿಗಾಗಿ ಆಯ್ದ ಇಲಾಖೆಗಳಲ್ಲಿ ಅನುದಾನ ನೀಡಲಾಗುತ್ತಿದೆ. ಸಮಾಜಕಲ್ಯಾಣ ಇಲಾಖೆಗೂ ಅನುದಾನ ಬಂದಿದ್ದು, ಸ್ಮಶಾನ ಅಭಿವೃದ್ಧಿ ಕಾರ್ಯವನ್ನು ಶೀಘ್ರ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ| ಕೆ.ಎಲ್ ವಿಶ್ವನಾಥ್ ಮಾತನಾಡಿ, ಜಿಲ್ಲೆಯಲ್ಲಿ ಆಯುಷ್ ಕಾಲೇಜು ನಿರ್ಮಿಸಲು 10 ಎಕರೆ ಜಮೀನು ನೀಡುವಂತೆ ಕೋರಿದರು. ಜೊತೆಗೆ ಹೋಮಿಯೋಪತಿ ಕಾಲೇಜು ನಿರ್ಮಿಸಲು ಮೊಳಕಾಲ್ಮೂರಿನಲ್ಲಿ 5 ಎಕರೆ ಭೂಮಿ ನೀಡಬೇಕು. ಹೊಸದುರ್ಗದ ದೊಡ್ಡತೇಕಲವಟ್ಟಿ ಆಯುರ್ವೇದ ಆಸ್ಪತ್ರೆಗೆ 4 ಎಕರೆ ಜಮೀನು ಪಡೆದಿದ್ದು, ಜಿಲ್ಲಾಧಿಕಾರಿಗಳಿಂದ ಅನುಮೋದನೆದೊರೆಯಬೇಕಿದೆ ಎಂದರು. ಸಭೆಯಲ್ಲಿ ಉಪವಿಭಾಗಾಧಿಕಾರಿ ಪ್ರಸನ್ನಕುಮಾರ್, ಅಪರ ಜಿಲ್ಲಾಧಿ ಕಾರಿ ಸಂಗಪ್ಪ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.