Advertisement

ಜಾಗೃತಿ ಮೂಡಿಸಿದ್ರೂ ಹೆಚ್ಚಲಿಲ್ಲ ಮತ ಪ್ರಮಾಣ

01:16 PM Apr 19, 2019 | Naveen |

ಚಿತ್ರದುರ್ಗ: ಮಧ್ಯ ಕರ್ನಾಟಕದ ಚಿತ್ರದುರ್ಗ ಮೀಸಲು ಕ್ಷೇತ್ರದಲ್ಲಿ ನೀರಸ ಮತದಾನವಾಗಿದೆ. ಈ ಬಾರಿ ಮತದಾನ ಹೆಚ್ಚಳ ಮಾಡಲೇಬೇಕೆಂಬ ಗುರಿ ಇಟ್ಟುಕೊಂಡಿದ್ದ ಚುನಾವಣಾ ಆಯೋಗ
ಹಾಗೂ ಸ್ವೀಪ್‌ ಸಮಿತಿ ಪ್ರಯತ್ನ ಅಷ್ಟೊಂದು ಫಲಕಾರಿಯಾಗಿಲ್ಲ.

Advertisement

ಜಿಲ್ಲೆಯ ಕೆಲವು ಭಾಗಗಳಲ್ಲಿ ಬೆಳಿಗ್ಗೆ 8 ಗಂಟೆಯಾದರೂ ಮತದಾನ ಆರಂಭವಾಗಿರಲಿಲ್ಲ. ಚಿತ್ರದುರ್ಗದ ಚೋಳಗಟ್ಟ ಮತದಾನ ಕೇಂದ್ರದ ಮತಗಟ್ಟೆ ಸಂಖ್ಯೆ 77ರಲ್ಲಿ ವಿವಿ ಪ್ಯಾಟ್‌ನಲ್ಲಿ ದೋಷ ಕಂಡು ಬಂದಿತ್ತು. ಚುನಾವಣಾ ಅಧಿಕಾರಿಗಳು ಮತ್ತು ಸಿಬ್ಬಂದಿ ರಿಪೇರಿ ಮಾಡಿದ್ದರಿಂದ ಮತದಾನ ವಿಳಂಬವಾಗಿ ಆರಂಭವಾಯಿತು.

ಹಿರಿಯೂರು ನಗರದ ಮತಗಟ್ಟೆ ಸಂಖ್ಯೆ 157ರಲ್ಲಿ ಮತದಾನ ಆರಂಭವಾಗಿ 10 ನಿಮಿಷ ಕಳೆದ ಮೇಲೆ ಮತಯಂತ್ರ ಕೈಕೊಟ್ಟಿತ್ತು. ಬದಲಿ ಮತಯಂತ್ರ ವ್ಯವಸ್ಥೆ ಮಾಡಿದ ಮೇಲೆ ಮತದಾನ ಶುರುವಾಯಿತು.

ಮತದಾನ ಬಹಿಷ್ಕಾರ: ಕುಡಿಯುವ ನೀರು, ಮೂಲ ಸೌಕರ್ಯ
ಕಲ್ಪಿಸುವಂತೆ ಒತ್ತಾಯಿಸಿ ಚಿತ್ರದುರ್ಗ ತಾಲೂಕಿನ ಪಂಜಯ್ಯನಹಟ್ಟಿ ಗ್ರಾಮದ ಬೂತ್‌ ನಂ.29, ಓಬಣ್ಣಹಳ್ಳಿ ಹಾಗೂ
ಹೊಳಲ್ಕೆರೆ ತಾಲೂಕಿನ ನಗರಗಟ್ಟ ಗ್ರಾಮಗಳ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದರು.

ನಗರದ ಹಲವು ಬಡಾವಣೆಗಳು ಸೇರಿದಂತೆ ಜಿಲ್ಲೆಯ ಕೆಲವು ಮತಗಟ್ಟೆಗಳಲ್ಲಿ ಮತದಾರರ ಸಂಖ್ಯೆ ವಿರಳವಾಗಿತ್ತು.
ಇದರಿಂದಾಗಿ ಮಚತಗಟ್ಟೆಗಳು ಬಿಕೋ ಎನ್ನುತ್ತಿದ್ದವು. ಚುನಾವಣಾ ಆಯೋಗವೇ ಮತದಾರರಿಗೆ ಓಟರ್‌ ಸ್ಲಿಪ್‌ ನೀಡಿದ್ದರಿಂದ ಬಹುತೇಕ ಕಡೆ ಬೂತ್‌ ಏಜೆಂಟರು ಕೂಡ ಕಂಡು ಬರಲಿಲ್ಲ. ಮತದಾರರು ನೇರವಾಗಿ ಮತಗಟ್ಟೆಗೆ ಹೋಗಿ ಮತ ಚಲಾಯಿಸಿ ಬರುತ್ತಿದ್ದರು. ಮತದಾರರನ್ನು ಮತಗಟ್ಟೆಗೆ ಕರೆತರಲು ವಾಹನಗಳ ವ್ಯವಸ್ಥೆ ಮಾಡದ ಕಾರಣ ವಯೋವೃದ್ಧರು ಮತಗಟ್ಟೆಗಳತ್ತ ಅಷ್ಟಾಗಿ ಸುಳಿಯಲಿಲ್ಲ.

Advertisement

ಮತದಾರರ ಪರದಾಟ: ಓಟರ್‌ ಸ್ಲಿಪ್‌ ಮತ್ತು ಮತದಾನ ಗುರುತಿನ ಚೀಟಿ ಕಳೆದುಕೊಂಡ ಮತದಾರರು ಚೀಟಿಗಾಗಿ ಪರದಾಡಿದರು. ಮತಗಟ್ಟೆ ಅಧಿಕಾರಿಗಳು ನಾಲ್ಕೈದು ದಿನಗಳ ಮುಂಚಿತವಾಗಿ ಗುರುತಿನ ಚೀಟಿ ವಿತರಿಸಿದ್ದರು. ಕೆಲವು ಮತ ದಾರರು ಚೀಟಿ ಕಳೆದುಕೊಂಡ ಕಾರಣ ಅಧಿಕಾರಿಗಳು ಬದಲಿ ಗುರುತಿನ ಚೀಟಿ ನೀಡಿ ಮತದಾನಕ್ಕೆ ಅವಕಾಶ ಮಾಡಿಕೊಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next