Advertisement

ಚಿತ್ರದುರ್ಗ: ಅಕ್ರಮ ಅಕ್ಕಿ ಸಂಗ್ರಹ, ಐವರ ವಿರುದ್ಧ ದೂರು

09:30 AM Nov 19, 2019 | sudhir |

ಚಿತ್ರದುರ್ಗ: ಅಕ್ರಮವಾಗಿ ಗೋದಾಮಿನಲ್ಲಿ ಸಂಗ್ರಹಿಸಿಟ್ಟಿದ್ದ ಸುಮಾರು 60 ಟನ್ ಅಕ್ಕಿಯನ್ನು ರಾಂಪುರ ಪೊಲೀಸರು ವಶಪಡಿಸಿಕೊಂಡಿದ್ದಾರೆ.

Advertisement

ಮೊಳಕಾಲ್ಮೂರು ತಾಲೂಕಿನ ಕೋನಾಪುರ ಗ್ರಾಮದ ಗೋಡಾನ್ ನಲ್ಲಿ ಬಿಸಿಯೂಟ ಹಾಗೂ‌ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದ ಅಕ್ಕಿಯನ್ನು ಭಾರೀ ಪ್ರಮಾಣದಲ್ಲಿ ಸಂಗ್ರಹಿಸಿರುವ ಮಾಹಿತಿ ಆಧರಿಸಿ ತಹಶೀಲ್ದಾರ್ ಬಸವರಾಜ್ ಹಾಗೂ ಮೊಳಕಾಲ್ಮೂರು ಪಿಎಸ್ಐ ಗುಡ್ಡಪ್ಪ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಚಿದಾನಂದಪ್ಪ, ಸಣ್ಣ ಮಾರಣ್ಣ ಸೇರಿ ಐವರ ವಿರುದ್ದ ರಾಂಪುರ ಪೊಲೀಸರು ದೂರು ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next