ಚಿತ್ರದುರ್ಗ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ನಿರ್ದೇಶಕರ ಸ್ಥಾನಗಳಿಗೆ ನಗರದ ಸೆಂಟ್ ಜೋಸೆಫ್ ಕಾನ್ವೆಂಟ್ ಶಾಲೆಯಲ್ಲಿ ಮತದಾನ ನಡೆಯಿತು.
ಪದವಿ ಕಾಲೇಜು, ಪದವಿ ಪೂರ್ವ ಕಾಲೇಜು, ಪ್ರೌಢಶಿಕ್ಷಣ, ಪ್ರಾಥಮಿಕ ಶಿಕ್ಷಣ, ಖಜಾನೆ, ನ್ಯಾಯಾಂಗ, ರಾಜ್ಯ ಲೆಕ್ಕಪತ್ರ ಇಲಾಖೆ, ಆರೋಗ್ಯ, ಜಿಲ್ಲಾ ಆಸ್ಪತ್ರೆ, ಪಶು ಸಂಗೋಪನೆ, ಭೂಮಾಪನ ಇಲಾಖೆ ಸೇರಿದಂತೆ 18 ಇಲಾಖೆಗಳ 29 ನಿರ್ದೇಶಕರ ಸ್ಥಾನಗಳಿಗೆ ಒಟ್ಟು 66 ಮಂದಿ ಕಣದಲ್ಲಿದ್ದರು.
ರಾಜ್ಯ ಲೆಕ್ಕಪತ್ರ ಇಲಾಖೆ, ಖಜಾನೆ, ಪದವಿ ಪೂರ್ವ ಕಾಲೇಜು, ಪದವಿ ಕಾಲೇಜು, ಭೂಮಾಪನ ಇಲಾಖೆ, ಪಶು ಸಂಗೋಪನೆ, ತಾಂತ್ರಿಕ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ, ಪೊಲೀಸ್ ಇಲಾಖೆ, ನಗರ ಯೋಜನೆ ಮತ್ತು ರಾಷ್ಟ್ರೀಯ ಹೆದ್ದಾರಿ ವಿಭಾಗ, ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ ತಲಾ ಒಂದು ಸ್ಥಾನ, ಜಿಲ್ಲಾ ಆಸ್ಪತ್ರೆ 2, ವಾಣಿಜ್ಯ ತೆರಿಗೆ 2, ನ್ಯಾಯಾಂಗ 2, ಪ್ರೌಢಶಿಕ್ಷಣ 2, ಆರೋಗ್ಯ ಇಲಾಖೆಗೆ 3, ಕಂದಾಯ ಇಲಾಖೆ 3, ಪ್ರಾಥಮಿಕ ಶಿಕ್ಷಣ 4 ಸೇರಿದಂತೆ 18 ಇಲಾಖೆಗಳಿಂದ 29 ನಿರ್ದೇಶಕರ ಸ್ಥಾನಗಳಿಗೆ 66 ಮಂದಿ ಕಣದಲ್ಲಿದ್ದರು.
ಬೆಳಗ್ಗೆ 11 ರಿಂದ ಮಧ್ಯಾಹ್ನ 4 ರವರೆಗೆ ಮತದಾನ ನಡೆಯಿತು. ಸಂಜೆ 4:30 ರಿಂದ ಎಣಿಕೆ ಕಾರ್ಯ ನಡೆಯಿತು. ಪ್ರಾಥಮಿಕ ಶಿಕ್ಷಣದಿಂದ 1300 ಮಂದಿ ಸೇರಿದಂತೆ ಒಟ್ಟು 18 ಇಲಾಖೆಗಳಿಂದ 2720 ಮಂದಿ ಮತದಾರರಿದ್ದು, ಶೇ. 95ಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಮತದಾನ ನಡೆಯಿತು.
ತಾಂತ್ರಿಕ ಶಿಕ್ಷಣ ಇಲಾಖೆಯಿಂದ ಪ್ರದೀಪ್‌ಕುಮಾರ್, ಪದವಿ ಕಾಲೇಜಿನಿಂದ ರಾಜೇಂದ್ರ ಚಕ್ರವರ್ತಿ, ಖಜಾನೆಯಿಂದ ಇಲಾಖೆಯಿಂದ ನರಸಿಂಹ, ಪದವಿ ಪೂರ್ವ ಕಾಲೇಜಿನಿಂದ ವೇದಮೂರ್ತಿ, ಪ್ರೌಢಶಿಕ್ಷಣ ಇಲಾಖೆಯಿಂದ ಸಂತೋಷ್ ಮತ್ತು ಶ್ರೀನಿವಾಸ್, ರಾಜ್ಯ ಲೆಕ್ಕಪತ್ರ ಇಲಾಖೆಯಿಂದ ಮಂಜುನಾಥ್, ಪಶು ಸಂಗೋಪನೆ ಇಲಾಖೆಯಿಂದ ಅಜ್ಜಯ್ಯ, ನ್ಯಾಯಾಂಗ ಇಲಾಖೆಯಿಂದ ರಾಘವೇಂದ್ರ ಮತ್ತು ಹುಲಿಕುಂಟೆಪ್ಪ, ವಾಣಿಜ್ಯ ತೆರಿಗೆ ಇಲಾಖೆಯಿಂದ ಹನುಮಂತಪ್ಪ, ಲೋಕೇಶ್ವರಪ್ಪ ವಿಜಯದ ಪತಾಕೆ ಹಾರಿಸಿದ್ದಾರೆ.
ಭೂಮಾಪನ ಇಲಾಖೆಯಿಂದ ಮಂಜುನಾಥ್, ಆರೋಗ್ಯ ಇಲಾಖೆಯಿಂದ ಸಿದ್ದೇಶ್ವರಪ್ಪ, ಬಾಗೇಶ್ ಉಗ್ರಾಣ ಮತ್ತು ಗುರುಮೂರ್ತಿ, ಜಿಲ್ಲಾ ಆಸ್ಪತ್ರೆಯಿಂದ ಮುರುಳೀಧರ್ ಮತ್ತು ನರಸಿಂಹರೆಡ್ಡಿ, ಸಮಾಜ ಕಲ್ಯಾಣ ಇಲಾಖೆಯಿಂದ ನಾಗರಾಜ್, ಪೊಲೀಸ್ ಇಲಾಖೆಯಿಂದ ಸಿದ್ದೇಶ್, ನಗರ ಯೋಜನೆ ಮತ್ತು ರಾಷ್ಟ್ರೀಯ ಹೆದ್ದಾರಿ ವಿಭಾಗದಿಂದ ಚಂದ್ರನಾಯಕ್, ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದಿಂದ ಶಿವಮೂರ್ತಿ, ಪ್ರಾಥಮಿಕ ಶಿಕ್ಷಣದಿಂದ ವೆಂಕಟಾಪತಿ, ಎಸ್.ವೀರಣ್ಣ, ಬಿ.ವೀರೇಶ್, ಮಹ್ಮದ್ ತಾಜೀರ್ ಬಾಷ ಗೆಲುವು ಸಾಧಿಸಿದರು.
ಜೂನ್ 17 ರಿಂದ ಚಿತ್ರದುರ್ಗ ಜಿಲ್ಲೆಯ ಐದು ತಾಲೂಕುಗಳ ಅಧ್ಯಕ್ಷ, ಉಪಾಧ್ಯಕ್ಷ ಸೇರಿದಂತೆ ಮತ್ತಿತರ ಪದಾಧಿಕಾರಿಗಳ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಜುಲೈ 1ರಿಂದ ಜಿಲ್ಲಾಧ್ಯಕ್ಷ, ಖಜಾಂಚಿ ಮತ್ತು ರಾಜ್ಯ ಪರಿಷತ್ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.