Advertisement

ಬೀದಿಗೆ ಬಿದ್ದ ಹೊಸದುರ್ಗ ಟಿಕೆಟ್‌ ಫೈಟ್‌

04:18 PM Jan 19, 2022 | Team Udayavani |

ಚಿತ್ರದುರ್ಗ: ವಿಧಾನಸಭಾ ಚುನಾವಣೆಗೆಇನ್ನೊಂದು ವರ್ಷ ಬಾಕಿ ಇರುವಾಗಲೇಜಿಲ್ಲೆಯಲ್ಲಿ ಟಿಕೆಟ್‌ ಫೈಟ್‌ ಶುರುವಾಗಿದೆ.ಹೊಸದುರ್ಗ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ವಿಚಾರ ಸಂಕ್ರಾಂತಿಯಿಂದ ಬೀದಿಗೆ ಬಿದ್ದಿದೆ. ಈವಾರ್‌ನಲ್ಲಿ ಪಕ್ಷದ ಕಾರ್ಯಕರ್ತರು ಮೂಕ ಪ್ರೇಕ್ಷಕರಾಗಿದ್ದಾರೆ.ಜಿಲ್ಲೆಯ 6 ತಾಲೂಕುಗಳಲ್ಲೂ ಬಿಜೆಪಿ, ಕಾಂಗ್ರೆಸ್‌,ಜೆಡಿಎಸ್‌ ಪಕ್ಷಗಳಿಂದ ಟಿಕೆಟ್‌ ಆಕಾಂಕ್ಷಿಗಳ ದಂಡೇ ಇದೆ.

Advertisement

ಈಗಾಗಲೇ ಪ್ರತ್ಯಕ್ಷ-ಪರೋಕ್ಷವಾಗಿ ವರಿಷ್ಠರಮೇಲೆ ಒತ್ತಡ ಹಾಕುವುದು, ಅಧಿ ಕೃತವಾಗಿ ನಾನುಆಕಾಂಕ್ಷಿ ಎಂದು ಹೇಳದಿದ್ದರೂ, ನಡವಳಿಕೆಗಳಿಂದನಾನೂ ಆಕಾಂಕ್ಷಿ ಎಂಬ ಭಾವನೆ ಮೂಡಿಸುತ್ತಾಅನೇಕರು ತೆರೆಮರೆ ಪ್ರಯತ್ನದಲ್ಲಿದ್ದಾರೆ.ಆದರೆ, ರಾಜ್ಯ ಖನಿಜ ನಿಗಮದ ಅಧ್ಯಕ್ಷ ಎಸ್‌.ಲಿಂಗಮೂರ್ತಿ ಹಾಗೂ ಹಾಲಿ ಶಾಸಕ ಗೂಳಿಹಟ್ಟಿಶೇಖರ್‌ ನಡುವಿನ ಫೈಟ್‌ ಬಹಿರಂಗವಾಗಿಯೇ ನಡೆಯುತ್ತಿದ್ದು, ದಿನದಿಂದ ದಿನಕ್ಕೆ ಕಾವೇರುತ್ತಲೇ ಇದೆ. ಜ.14 ಮಕರ ಸಂಕ್ರಾಂತಿಯಂದು ನನ್ನನಿರ್ಧಾರ ಪ್ರಕಟಿಸುತ್ತಿದ್ದೇನೆ. ಮುಂಬರುವವಿಧಾನಸಭಾ ಚುನಾವಣೆಗೆ ನಾನು ಬಿಜೆಪಿ ಟಿಕೆಟ್‌ ಆಕಾಂಕ್ಷಿ ಎಂದು ಎಸ್‌.ಲಿಂಗಮೂರ್ತಿ ಪತ್ರಿಕಾ ಪ್ರಕಟಣೆ ಹೊರಡಿಸಿದರು.

ಇದರಿಂದ ಕೆರಳಿದ ಶಾಸಕ ಗೂಳಿಹಟ್ಟಿ ಶೇಖರ್‌, ಕಾರ್ಯಕರ್ತರು,ಅಭಿಮಾನಿಗಳು ಗೊಂದಲಕ್ಕೆ ಒಳಗಾಗುವುದುಬೇಡ. 2023ರ ವಿಧಾನಸಭಾ ಚುನಾವಣೆಗೂ ನಾನು ಸ್ಪರ್ಧೆ ಮಾಡುವುದು ಖಚಿತ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ವಿಡಿಯೋ ಹರಿಬಿಟ್ಟರು. 2018ರ ವಿಧಾನಸಭಾ ಚುನಾವಣೆಯಲ್ಲಿ 90 ಸಾವಿರಕ್ಕಿಂತಹೆಚ್ಚು ಮತದಾರರು ನನಗೆಆಶೀರ್ವಾದ ಮಾಡಿದ್ದಾರೆ.ಅವರೆಲ್ಲರೂ ಪಕ್ಷದಿಂದ ಟಿಕೆಟ್‌ ಕೇಳಲು, ಚುನಾವಣೆಗೆ ಸ್ಪರ್ಧೆಮಾಡಲು ಅರ್ಹರಾಗಿದ್ದಾರೆ.ಆದರೆ, ವರಿಷ್ಠರು ಘೋಷಣೆ ಮಾಡುವ ಮೊದಲೇ ನಾನು ಅಭ್ಯರ್ಥಿ ಎಂದು ಹೇಳುವ ಸಂಸ್ಕೃತಿ ಬಿಜೆಪಿಯಲ್ಲಿಲ್ಲ ಎನ್ನುವ ಮೂಲಕ ಲಿಂಗಮೂರ್ತಿಅವರಿಗೆ ಟಾಂಗ್‌ ಕೊಟ್ಟಿದ್ದಾರೆ.

ಲಿಂಗಮೂರ್ತಿ ವಾದ ಏನು?: ಇತ್ತ ಲಿಂಗಮೂರ್ತಿಕೂಡಾ 2018ರ ಚುನಾವಣೆಯಲ್ಲಿ ನಾನು ಟಿಕೆಟ್‌ತ್ಯಾಗ ಮಾಡಿದ್ದೇನೆ. ರಾಜ್ಯದಲ್ಲಿ ಬಿಜೆಪಿ ಅಧಿ ಕಾರಕ್ಕೆಬರಬೇಕು, ಹೊಸದುರ್ಗದಲ್ಲಿ ಬಿಜೆಪಿ ಅಭ್ಯರ್ಥಿಆಯ್ಕೆಯಾಗಬೇಕು ಎಂಬ ಕಾರಣಕ್ಕೆ ಒಮ್ಮತದಅಭ್ಯರ್ಥಿ ಆಯ್ಕೆ ಮಾಡಿದ್ದೇವೆ. ಆದರೆ, ಕ್ಷೇತ್ರಕ್ಕೆಸಾಮಾಜಿಕ ನ್ಯಾಯ ಸಿಗಬೇಕಿದೆ. ಸಾಮಾನ್ಯಕ್ಷೇತ್ರವಾಗಿರುವುದರಿಂದ ಈ ಚುನಾವಣೆಯಲ್ಲಿನನಗೆ ಸ್ಪರ್ಧೆ ಮಾಡಲು ಪಕ್ಷದ ವರಿಷ್ಠರು ಅವಕಾಶಮಾಡಿಕೊಡುತ್ತಾರೆ. ಈ ಹಿಂದೆ ಸ್ಪರ್ಧೆ ಮಾಡಿಪರಾಭವಗೊಂಡ ಎರಡೂ ಚುನಾವಣೆಗಳಲ್ಲಿ40 ಸಾವಿರಕ್ಕಿಂತ ಹೆಚ್ಚು ಮತ ಪಡೆದಿದ್ದೇನೆ ಎಂಬಸಮರ್ಥನೆ ಇಟ್ಟಿದ್ದಾರೆ.

ಈ ನಡುವೆ ಗರಗದ ಪಾಂಡುರಂಗಪ್ಪಹಾಗೂ ಮಂಜುನಾಥ್‌ ಇಬ್ಬರೂ ಪಕ್ಷೇತರಅಭ್ಯರ್ಥಿಗಳಾಗಿ ಕಣಕ್ಕಿಳಿಯಲು ತಯಾರಿನಡೆಸುತ್ತಿದ್ದಾರೆ. ಅಭ್ಯರ್ಥಿಗಳು ಹೆಚ್ಚಾದಂತೆಗೆಲುವಿನ ಅಂತರ ಕಡಿಮೆ ಆಗುತ್ತದೆ ಎನ್ನುವುದುಈ ಹಿಂದಿನ ಚುನಾವಣಾ ಫಲಿತಾಂಶಗಳಿಂದಸಾಬೀತಾಗಿದೆ. ಇಲ್ಲಿ ನೇರಾ ಹಣಾಹಣಿ ಅಥವಾತ್ರಿಕೋನ ಸ್ಪರ್ಧೆ ನಡೆದಾಗ ಗೆಲುವಿನ ಲೆಕ್ಕಾಚಾರಕಷ್ಟವಾಗಿರುತ್ತದೆ. ಅಭ್ಯರ್ಥಿಗಳು ಹೆಚ್ಚಾದಾಗ ಮತವಿಭಜನೆಯಾಗಲಿದೆ. ಇಂತಹ ಸಂದರ್ಭಗಳಲ್ಲಿಅಚ್ಚರಿಯ ಆಯ್ಕೆಗಳೂ ನಡೆದಿವೆ.

Advertisement

ತಿಪ್ಪೆಸ್ವಾಮಿ ನಾಕೀಕೆರೆ

Advertisement

Udayavani is now on Telegram. Click here to join our channel and stay updated with the latest news.

Next