Advertisement
2009ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್ .ಯಡಿಯೂರಪ್ಪ 1801 ಕೋಟಿ ರೂ. ವೆಚ್ಚದ ನೇರ ರೈಲು ಮಾರ್ಗಕ್ಕೆ ಒಪ್ಪಿಗೆ ನೀಡಿ ರಾಜ್ಯದಿಂದ ಯೋಜನೆಯ ಶೇ. 50ರಷ್ಟು ವೆಚ್ಚ ಭರಿಸಲು ಒಪ್ಪಿಗೆ ಸೂಚಿಸಿದ್ದರು. 2011-12ರಲ್ಲಿ ಯೋಜನೆಗೆ ಮಂಜೂರಾತಿ ದೊರೆತಿದ್ದು, 2019ರೊಳಗೆ ಪೂರ್ಣಗೊಳಿಸಲು ಉದ್ದೇಶಿಸಲಾಗಿತ್ತು. ಆದರೆ ನಿಗ ದಿತ ಅವಧಿ ಗಿಂತ 4 ವರ್ಷ ಹೆಚ್ಚೇಆಗಿದ್ದರೂ, ರೈಲ್ವೆ ಹಳಿ ಅಳವಡಿಸುವ ಕಾಮಗಾರಿ ಆರಂಭವಾಗಿಲ್ಲ. ಆಳುವ ಸರ್ಕಾರಗಳು ಕೇಂದ್ರ ಹಾಗೂ ರಾಜ್ಯದಲ್ಲಿ ಬದಲಾವಣೆಯಾಗಿದ್ದೂ ಹಿನ್ನಡೆಗೆ ಕಾರಣವಾಗಿತ್ತು.
Related Articles
Advertisement
ಭೂಸ್ವಾಧೀನ ಪರಿಸ್ಥಿತಿ ಹೇಗಿದೆ?ಈ ಯೋಜನೆಗೆ ಚಿತ್ರದುರ್ಗ ಜಿಲ್ಲೆಯಲ್ಲೇ ಅತಿ ಹೆಚ್ಚು ಭೂಸ್ವಾಧೀನ ಆಗಬೇಕಿದೆ. ಜಿಲ್ಲೆಯ 1242 ಎಕರೆ ಭೂಸ್ವಾಧೀನವಾಗಬೇಕು. ಇದರಲ್ಲಿ ಚಿತ್ರದುರ್ಗ ಮತ್ತು ಹಿರಿಯೂರು ತಾಲೂಕುಗಳಲ್ಲಿ 890 ಎಕರೆಗೆ ಅವಾರ್ಡ್ ಆಗಿದೆ. ಉಳಿದ 331 ಎಕರೆಯ ಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿದೆ. ಇಲ್ಲಿ ಅವಾರ್ಡ್ ಆಗಿರುವ 890 ಎಕರೆ ಪೈಕಿ 400 ಎಕರೆಯ ಭೂಮಾಲೀಕರಿಗೆ ಪರಿಹಾರ ನೀಡಲಾಗಿದೆ. ಉಳಿದ 490 ಎಕರೆಗೆ ಪರಿಹಾರ ಪಾವತಿ ಕಾರ್ಯ ಪ್ರಗತಿಯಲ್ಲಿದೆ. ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳದ 331 ಎಕರೆ ಹಾಗೂ ಅವಾರ್ಡ್ ಅನುಮೋದನೆ ಆಗಿರುವ 890 ಎಕರೆಯಲ್ಲಿ 250 ಎಕರೆ ಸೇರಿ ಒಟ್ಟು 581 ಎಕರೆಗೆ 325 ಕೋಟಿ ರೂ. ಅನುದಾನ ನೀಡಬೇಕಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ ಯೋಜನೆಗೆ ಅಗತ್ಯವಿರುವ 209 ಎಕರೆಯನ್ನು ಸ್ವಾಧೀನಪಡಿಸಿಕೊಂಡು ರೈಲ್ವೆ ಇಲಾಖೆಗೆ ಹಸ್ತಾಂತರಿಸಲಾಗಿದ್ದು, ಇಲಾಖೆ ಕಾಮಗಾರಿ ಆರಂಭಿಸಿದೆ. ಸಂಚಾರ ಸಮಯ ಉಳಿಯಬೇಕಾದರೆ ದಾವಣಗೆರೆ-ತುಮಕೂರು ನಡುವೆ ನೇರ ಮಾರ್ಗ ಮಾಡುವುದಿದೆ. ಅದಕ್ಕೆ ಬೇಕಾಗುವ
ಭೂಮಿಯನ್ನು ರಾಜ್ಯ ಸರ್ಕಾರ ಒದಗಿಸಿಕೊಟ್ಟರೆ 45 ನಿಮಿಷ ಉಳಿಯಲಿದೆ. ಈ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಮುತುವರ್ಜಿ ವಹಿಸುತ್ತಾರೆ ಎಂದು ಭಾವಿಸಿದ್ದೇನೆ. ನೇರ ಮಾರ್ಗವಾದರೆ 4 ಗಂಟೆ 30 ನಿಮಿಷಗಳಲ್ಲಿ ಹುಬ್ಬಳ್ಳಿಯಿಂದ ಬೆಂಗಳೂರು ತಲುಪಬಹುದಾಗಿದೆ.
ಪ್ರಹ್ಲಾದ ಜೋಶಿ, ಕೇಂದ್ರ ಸಚಿವ *ತಿಪ್ಪೇಸ್ವಾಮಿ ನಾಕೀಕೆರೆ