Advertisement

‘ಶಿವಗಂಗೋತ್ರಿ’ಸ್ನಾತಕೋತ್ತರ ಕೇಂದ್ರ ಸಮಗ್ರ ವೀರಾಗ್ರಣಿ

07:09 PM Sep 16, 2019 | Naveen |

ಚಿತ್ರದುರ್ಗ: ದಾವಣಗೆರೆ ವಿಶ್ವವಿದ್ಯಾಲಯದ ಅಂತರ ಕಾಲೇಜುಗಳ 10ನೇ ಅಥ್ಲೆಟಿಕ್ಸ್‌ ಕ್ರೀಡಾಕೂಟದಲ್ಲಿ ದಾವಣಗೆರೆಯ ‘ಶಿವಗಂಗೋತ್ರಿ’ ಸ್ನಾತಕೋತ್ತರ ಕೇಂದ್ರ ಸಮಗ್ರ ವೀರಾಗ್ರಣಿಯಾಗಿ ಹೊರಹೊಮ್ಮಿದೆ.

Advertisement

ನಗರದ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಸೆ. 12 ರಿಂದ 14 ರವರೆಗೆ ನಡೆದ ಪುರುಷ ಮತ್ತು ಮಹಿಳಾ ಕ್ರೀಡಾಕೂಟದಲ್ಲಿ ‘ಶಿವಗಂಗೋತ್ರಿ’ ತಂಡ ಉತ್ತಮ ಪ್ರದರ್ಶನ ತೋರಿದೆ. ಜತೆಗೆ ಅತಿ ಹೆಚ್ಚು ಪಾಯಿಂಟ್ಸ್‌ಗಳಿಂದ ಪುರುಷ ವಿಭಾಗದ ಚಾಂಪಿಯನ್‌ ಆಗಿದೆ. ಐಮಂಗಲದ ಬೂಟಾಸಿಂಗ್‌ ಬಿ.ಪಿ.ಎಡ್‌ ಕಾಲೇಜು ಮಹಿಳಾ ವಿಭಾಗದ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಫಲಿತಾಂಶ (ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ): ಪುರುಷರ ವಿಭಾಗ.

10,000 ಮೀಟರ್‌ ಓಟ: ಚಿತ್ರದುರ್ಗದ ಸರ್ಕಾರಿ ಕಲಾ ಕಾಲೇಜಿನ ನಾಗರಾಜ, ಹರಪನಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಜಾವಿದ್‌, ಮೊಳಕಾಲ್ಮೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿರೂಪಾಕ್ಷಿ.

800 ಮೀಟರ್‌ ಓಟ: ದಾವಣಗೆರೆಯ ಎಂ. ಪುಂಡಲೀಕ, ಹರಪನಹಳ್ಳಿಯ ಎಂ. ಮಂಜುನಾಥ್‌, ಮಾಯಕೊಂಡದ ಎಂ.ಎನ್‌.ಮನೋಜ್‌.

Advertisement

100 ಮೀಟರ್‌ ಓಟ: ಶಿವಗಂಗೋತ್ರಿಯ ವಿವೇಕ್‌, ಐಮಂಗಲ ಗೌತಮ್‌, ಹಿರಿಯೂರು ಮಹಮ್ಮದ್‌.

20 ಕಿಮೀ ನಡಿಗೆ ಸ್ಪರ್ಧೆ: ಮೊಳಕಾಲ್ಮೂರಿನ ಕರಿಬಸಪ್ಪ, ಚಳ್ಳಕೆರೆ ಲಿಂಗರಾಜ್‌, ಸಾಸವೆಹಳ್ಳಿಯ ಬಿ. ಸುನೀಲ್.

110 ಮೀಟರ್‌ ಹರ್ಡಲ್ಸ್: ಹಿರಿಯೂರಿನ ಆರ್‌. ರವಿ, ಚಳ್ಳಕೆರೆಯ ಸಿ. ರವಿಕಿರಣ, ಹಿರಿಯೂರಿನ ಕೆ .ಕಿರಣಕುಮಾರ್‌.

400 ಮೀಟರ್‌ ಹರ್ಡಲ್ಸ್: ಸಂತೆಬೆನ್ನೂರಿನ ಸಿ. ರಂಗಸ್ವಾಮಿ, ದಾವಣಗೆರೆಯ ಬಿ. ಗಣೇಶ್‌, ಚಳ್ಳಕೆರೆಯ ಎನ್‌. ಬಾಲಾಜಿ.

ಜಾವಲಿನ್‌ ಥ್ರೋ: ಜಗಳೂರಿನ ವಸಂತಕುಮಾರ್‌, ಚಳ್ಳಕೆರೆಯ ಅಭಿಷೇಕ್‌, ಹರಪನಹಳ್ಳಿಯ ಎಚ್. ರವಿಚಂದ್ರ.

ಟ್ರಿಪಲ್ ಜಂಪ್‌: ಜಗಳೂರಿನ ಜೆ.ಆರ್‌. ಸಂದೀಪ್‌, ಚಿತ್ರದುರ್ಗದ ಎಂ.ಎ. ಸಂತೋಷ್‌, ಹೊಳಲ್ಕೆರೆಯ ಶ್ರೀನಿವಾಸ.

ಮಹಿಳಾ ವಿಭಾಗದ ಎತ್ತರ ಜಿಗಿತ: ದಾವಣಗೆರೆಯ ಸುಜಾತಾ, ಮೊಳಕಾಲ್ಮೂರಿನ ಮಂಜಮ್ಮ, ದಾವಣಗೆರೆಯ ಜ್ಯೋತಿಬಾಯಿ.

400 ಮೀಟರ್‌ ಹರ್ಡಲ್ಸ್: ಹೊನ್ನಾಳಿಯ ವಿ.ಎಸ್‌. ರಂಜಿತಾ, ಮೊಳಕಾಲ್ಮೂರಿನ ಲೀಲಾವತಿ.

ಗುಂಡು ಎಸೆತ: ಐಮಂಗಲದ ಎ.ಎಸ್‌. ಕಾವ್ಯಾ, ದಾವಣಗೆರೆಯ ಜಿ.ಎಸ್‌. ಚಿತ್ರಾ, ಎಸ್‌. ಅಶ್ವಿ‌ನಿ.

5 ಕಿಮೀ ನಡಿಗೆ: ಹರಿಹರದ ಕೆ.ಬಿ. ಅಶ್ವಿ‌ನಿ, ಚಿತ್ರದುರ್ಗದ ಎಸ್‌. ಶ್ರುತಿ, ಮೊಳಕಾಲ್ಮೂರಿನ ರೇವತಿ.

800 ಮೀಟರ್‌ ಓಟ: ಮೊಳಕಾಲ್ಮೂರಿನ ಸಿ.ಎಸ್‌. ಕಲ್ಯಾಣಿ, ಹಿರಿಯೂರಿನ ಎಸ್‌. ಸರಸ್ವತಿ, ಮೊಳಕಾಲ್ಮೂರಿನ ಮಂಜಮ್ಮ.

100 ಮೀಟರ್‌ ಹರ್ಡಲ್ಸ್: ಹೊಸದುರ್ಗದ ಅನಿತಾ, ಹೊನ್ನಾಳಿಯ ಎಚ್.ಜೆ. ಸೌಂದರ್ಯ, ಚಳ್ಳಕೆರೆಯ ಎಸ್‌. ಮಹಾಲಕ್ಷ್ಮೀ.

ಟ್ರಿಪಲ್ ಜಂಪ್‌: ಹಿರಿಯೂರಿನ ನಯನಾ, ಹರಿಹರದ ಹೀನಾ ಕೌಸರ್‌, ಹೊಳಲ್ಕೆರೆಯ ನಳಿನಾ.

100 ಮೀಟರ್‌ ಓಟ: ಹೊಸದುರ್ಗದ ಅನಿತಾ, ಚಳ್ಳಕೆರೆಯ ಸುಚಿತ್ರಾ.

4×400 ಮೀಟರ್‌ ರಿಲೇ: ಮೊಳಕಾಲ್ಮೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಐಮಂಗಲದ ಬಿಎಸ್‌ಪಿಇ ಕಾಲೇಜು, ಶಿವಗಂಗೋತ್ರಿ ಸ್ನಾತಕೋತ್ತರ ಕೇಂದ್ರ.

Advertisement

Udayavani is now on Telegram. Click here to join our channel and stay updated with the latest news.

Next