Advertisement
ಮುರುಘರಾಜೇಂದ್ರ ಮಠದಲ್ಲಿ ಗರ್ಭಿಣಿಯರಿಗೆ, ಗೃಹರಕ್ಷಕದಳ ಸಿಬ್ಬಂದಿ ಮತ್ತಿತರೆ ಸುಮಾರು 330 ಕುಟುಂಬಗಳಿಗೆ ದವಸ-ಧಾನ್ಯ ವಿತರಿಸಿ ಶರಣರು ಮಾತನಾಡಿದರು. ಕೋವಿಡ್ಹಿನ್ನೆಲೆಯಲ್ಲಿ ಹಲವು ಕಡೆ ಸರ್ಕಾರ, ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳು, ಧಾರ್ಮಿಕ ಕೇಂದ್ರಗಳು ಹಸಿದವರಿಗೆ ಅನ್ನ ನೀಡುವ ಸಂಸ್ಕೃತಿಯನ್ನು ಬೆಳೆಸಿಕೊಂಡು ಬಂದಿರುವುದು ಉತ್ತಮ ಬೆಳವಣಿಗೆ. ಅತಿವೃಷ್ಟಿ, ಅನಾವೃಷ್ಟಿ ಇನ್ನಿತರೆ ರಾಷ್ಟ್ರವನ್ನು ಕಾಡುವ ಯಾವ ಸಮಸ್ಯೆಗಳು ಬಂದರೂ ಮಾನವೀಯತೆಯನ್ನು ಮೆರೆಯುವ ರಾಷ್ಟ್ರವೆಂದರೆ ಭಾರತ. ಆದರೆ ಜನರು ಸಮಸ್ಯೆಗಳ ಅರಿವಿಲ್ಲದೆ ಗುಂಪುಗೂಡಿ ಕಾನೂನು ಉಲ್ಲಂಘನೆ ಮಾಡಿ ರೋಗ ಮತ್ತೆ ಉಲ್ಬಣವಾಗುವಂತೆ ಮಾಡುತ್ತಿರುವುದು ಅನಾರೋಗ್ಯಕರ ಬೆಳವಣಿಗೆ. ಹೀಗಾಗಿಯೆ ಮತ್ತೆ ಲಾಕ್‌ಡೌನ್ ಮುಂದುವರಿಸಿದ್ದಾರೆ. ಸಾರ್ವಜನಿಕರ ಪ್ರಾಣ ಉಳಿಸಲು ವೈದ್ಯರು, ನರ್ಸ್‌ಗಳು, ಪೊಲೀಸ್ ಇಲಾಖೆಯವರು ಶ್ರಮಿಸುತ್ತಿದ್ದಾರೆ. ಕೆಲವರು ಕೋವಿಡ್ ಲಕ್ಷಣಗಳಿದ್ದರೂ ಮುಚ್ಚಿಡುತ್ತಾರೆ. ಇದು ಅತ್ಯಂತ ಅಪಾಯಕಾರಿ ಎಂದರು. ಗೃಹರಕ್ಷಕದಳದ ಲೋಕೇಶ್, ಸಿಡಿಪಿಒ ಸುಧಾ, ಎ.ಜೆ. ಪರಮಶಿವಯ್ಯ, ಮಲ್ಲಿಕಾರ್ಜುನಯ್ಯ, ಪೈಲ್ವಾನ್ ತಿಪ್ಪೇಸ್ವಾಮಿ ಮತ್ತಿತರರು ಇದ್ದರು.