Advertisement

ಚಿತ್ರದುರ್ಗ: ಮತದಾನದ ವೇಳೆ ಅಭ್ಯರ್ಥಿಗಳ ಬೆಂಬಲಿಗರ ಹೊಡೆದಾಟ: ನಾಲ್ವರು ಆಸ್ಪತ್ರೆಗೆ ದಾಖಲು

06:31 PM Dec 22, 2020 | sudhir |

ಚಿತ್ರದುರ್ಗ: ಚಿತ್ರದುರ್ಗದ ಜಿಲ್ಲೆಯ ಕಾಲ್ಗೆರೆ ಗ್ರಾಮ ಪಂಚಾಯತ್ ನಲ್ಲಿ ನಡೆಯುತ್ತಿರುವ ಚುನಾವಣೆ ವೇಳೆ ಚುನಾವಣಾ ಅಭ್ಯರ್ಥಿಗಳ ಬೆಂಬಲಿಗರ ನಡುವೆ ಘರ್ಷಣೆ ನಡೆದಿದ್ದು ಪರಿಣಾಮ ನಾಲ್ವರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.

Advertisement

ಕಾಲ್ಗೆರೆ ಬೂತ್ ನಂ.18ರ ಅಭ್ಯರ್ಥಿ ಜಾಫರ್, ದಾದಾಪೀರ್ ಬೆಂಬಲಿಗರ ಘರ್ಷಣೆ ನಡೆದು ಮಾತಿಗೆ ಮಾತು ಬೆಳೆದು ಹೊಡೆದಾಡಿಕೊಂಡಿದ್ದಾರೆ ಪರಿಣಾಮ ಮಹ್ಮದ್ ಅಲಿ(32), ದಾದಾವುಲ್ಲಾ (60), ಅಕ್ಬರ್ (48), ಚಮನ್ ಬಿ(55) ಗಾಯಗೊಂಡು ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದರೆ.

ಕಾಲ್ಗೆರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಆಜಾದ್ ಬಡಾವಣೆಯಲ್ಲಿ ಘಟನೆ ಸಂಭವಿಸಿದೆ.
ಘಟನೆ ಕುರಿತು ಭರಮಸಾಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next