Advertisement
ಇಲ್ಲಿನ ಸೇಂಟ್ ಮೆರೀಸ್ ಶಿಕ್ಷಣ ಸಂಸ್ಥೆ ಸಭಾಂಗಣದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ನವದೆಹಲಿ, ಕರ್ನಾಟಕ ಲೇಖಕಿಯರ ಸಂಘ ಚಿತ್ರದುರ್ಗ ಶಾಖೆ ಹಾಗೂ ಸೇಂಟ್ ಮೆರೀಸ್ ಶಿಕ್ಷಣ ಮಹಾವಿದ್ಯಾಲಯದ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಮೊದಲ ಹೆಜ್ಜೆ ಪುಸ್ತಕ ಲೋಕಾರ್ಪಣೆ ಹಾಗೂ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
Related Articles
Advertisement
ಲೇಖಕಿಯರು ಬರೆಯುವುದಕ್ಕಿಂತ ವಿಚಾರ ಗ್ರಹಿಸುವುದು ಮುಖ್ಯ. ಮಹಿಳೆಯರು ಪುರುಷರನ್ನು ದ್ವೇಷಿಸಬಾರದು. ಪುರುಷರು ಕೂಡ ಮಹಿಳೆಯರನ್ನು ದ್ವೇಷಿಸಬಾರದು. ಹೆಣ್ಣು-ಗಂಡು ಇಬ್ಬರು ಸಮಾನರೆ ಎನ್ನುವ ಮನೋಭಾವ ಬೆಳೆಯಬೇಕು ಎಂದು ಹೇಳಿದರು.
ಸಮಕಾಲೀನ ಮಹಿಳಾ ಕಥಾ ಸಾಹಿತ್ಯ ಹೊಸ ನೋಟಗಳು ಎಂಬ ವಿಷಯ ಕುರಿತು ಉಪನ್ಯಾಸ ನೀಡಿದ ಸರ್ಕಾರಿ ಕಲಾ ಕಾಲೇಜು ಪ್ರಾಧ್ಯಾಪಕ ಡಾ| ಜೆ. ಕರಿಯಪ್ಪ ಮಾಳಿಗೆ, ಜಿಲ್ಲೆಯಲ್ಲಿ 300 ಮಹಿಳೆಯರು ಕಥೆಗಳನ್ನು ಬರೆಯುತ್ತಿದ್ದಾರೆ. 700 ಕಥಾಸಂಕಲನಗಳಿವೆ. ಮಹಿಳೆಯರ ಸಂವೇದನೆಯನ್ನು ಬರೆಯುವವರು ಹೆಚ್ಚು ದಾಖಲಾಗುತ್ತಿಲ್ಲ. ಮಹಿಳಾ ಬರಹಗಾರ್ತಿಯರಿಗೂ ಪ್ರೇರಕ ಶಕ್ತಿ ಬೇಕಾಗಿದೆ ಎಂದರು.
12ನೇ ಶತಮಾನದಲ್ಲೇ 35ಕ್ಕೂ ಹೆಚ್ಚು ಮಹಿಳೆಯರು ಕಥೆಗಳನ್ನು ಬರೆದಿದ್ದಾರೆ. ಎಲ್ಲಿಯೂ ದಾಖಲಾಗಿಲ್ಲ. ಶೈಕ್ಷಣಿಕ ವಲಯಕ್ಕೆ ಮಹಿಳೆಯರ ಬರವಣಿಗೆ ಪ್ರವೇಶಿಸುತ್ತಿಲ್ಲ. ಬರವಣಿಗೆಯೇ ಬಂಡಾಯ, ಮಾತೆ ಬಂಡಾಯ ಎನ್ನುವಾಗ ಸ್ತ್ರೀಯರ ಬರವಣಿಗೆ ಇನ್ನು ಏಕೆ ಗಟ್ಟಿಯಾಗಿ ನಿಲ್ಲುತ್ತಿಲ್ಲ ಎನ್ನುವುದೇ ಗೊತ್ತಾಗುತ್ತಿಲ್ಲ. ಇದಕ್ಕೆ ಮಹಿಳೆ ಎನ್ನುವ ನಿರ್ಲಕ್ಷೆ, ಅಸಡ್ಡೆ ಕಾರಣವಿರಬಹುದು ಹಾಗಾಗಿ ಕಥೆಗಳಿಗೆ ಅಭಿವ್ಯಕ್ತಿ ಬೇಕು ಎಂದರು.
ಜೀವನ ಅನುಭವ ಎಷ್ಟು ಮುಖ್ಯವೋ, ಬರವಣಿಗೆ, ಓದು ಅಷ್ಟೇ ಪ್ರಾಮುಖ್ಯತೆ ಪಡೆಯುತ್ತದೆ. ದೇಹ ಮತ್ತು ಮನಸ್ಸನ್ನು ಒಂದು ಮಾಡಿ ಮಾತುಗಳನ್ನು ಕೇಳುವುದೇ ನಿಜವಾದ ಅನುಭವ. ಮಹಿಳೆಯರು ಎಚ್ಚರವಾದಾಗ ಆಲೋಚನೆ ಬದಲಾಗುತ್ತದೆ. ಚರಿತ್ರೆ, ಇತಿಹಾಸ, ಪರಂಪರೆಯನ್ನು ಪ್ರಶ್ನಿಸುವ ಗುಣ ಬೆಳೆಸಿಕೊಳ್ಳಬೇಕು ಎಂದು ಪ್ರಶಿಕ್ಷಣಾರ್ಥಿಗಳನ್ನು ಎಚ್ಚರಿಸಿದರು.
ಕುವೆಂಪುರವರ ನಾಯಿಬುತ್ತಿ, ಮೊದಲ ಹೆಜ್ಜೆ ಪುಸ್ತಕಕ್ಕೆ ಹತ್ತಿರವಾದ ಸಂಬಂಧವಿದೆ. ಕಾವ್ಯದಲ್ಲಿದ್ದಂತೆ ಕಥೆಗಳಲ್ಲಿಯೂ ಕಾಡುವ ಗುಣವಿರಬೇಕು. ಪ್ರತಿಯೊಂದನ್ನು ಯೋಚಿಸಿ ಪ್ರಶ್ನಿಸುವ ಶಕ್ತಿ ಕಥೆ, ಬರವಣಿಗೆ, ಅಭಿವ್ಯಕ್ತಿಯಲ್ಲಿರಬೇಕು. ಆಚಾರ-ಸಂಪ್ರದಾಯ-ನಂಬಿಕೆಗಳನ್ನು ಪರಾಮರ್ಶಿಸಿ ತರ್ಕಕ್ಕೆ ಕೊಡೊಯ್ಯಬೇಕು. ಮಹಿಳಾ ಬರಹಗಾರರಿಗೂ ದೊಡ್ಡ ಜವಾಬ್ದಾರಿ ಇರುವುದರಿಂದ ಬದಲಾವಣೆಯ ಕಾಲಘಟ್ಟದಲ್ಲಿ ಹಳೆ ತಲೆಮಾರಿಗೆ ಇನ್ನು ಜೋತು ಬೀಳಬಾರದು. ವಿಜ್ಞಾನದ ಮೂಲಕ ಮೌಡ್ಯಗಳನ್ನು ನಂಬಿ ಮೋಸ ಹೋಗುವುದು ನಿಲ್ಲಬೇಕು ಎಂದು ಹೇಳಿದರು.
ಕರ್ನಾಟಕ ಲೇಖಕಿಯರ ಸಂಘ ಚಿತ್ರದುರ್ಗ ಶಾಖೆ ಅಧ್ಯಕ್ಷೆ ಲಲಿತಾ ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ವನಮಾಲ ಸಂಪನ್ನಕುಮಾರ್, ಲೇಖಕಿ ಪದ್ಮಿನಿ ನಾಗರಾಜು, ಉಪನ್ಯಾಸಕ ಡಾ| ಎಸ್.ಎನ್. ಹೇಮಂತರಾಜು, ಗ್ರಂಥಾಲಯಾಧಿಕಾರಿ ತಿಪ್ಪೇಸ್ವಾಮಿ, ಸಿ.ಬಿ. ಶೈಲಾ, ಡಿ. ಮಂಜುಳಾ, ಶಶಿಕಲಾ ರವಿಶಂಕರ್ ಉಪಸ್ಥಿತರಿದ್ದರು.