Advertisement

ಗ್ರಾಮಗಳಿಗೆ ಸೌಲಭ್ಯ ಒದಗಿಸಿ: ಕೃಷ್ಣನಾಯ್ಕ

04:46 PM Jul 27, 2019 | Naveen |

ಚಿತ್ರದುರ್ಗ: ಗ್ರಾಮಗಳಿಗೆ ಮೂಲ ಸೌಲಭ್ಯ ಒದಗಿಸಿ ಸಮಸ್ಯೆ ಪರಿಹರಿಸುವ ಕೆಲಸ ಮಾಡಬೇಕು ಎಂದು ತಾಪಂ ಇಒ ಕೃಷ್ಣನಾಯ್ಕ ಕಾರ್ಯದರ್ಶಿ ಮತ್ತು ಪಿಡಿಒಗಳಿಗೆ ಸೂಚಿಸಿದರು.

Advertisement

ತಾಲೂಕಿನ ಬೆಳಗಟ್ಟ ಗ್ರಾಪಂ ಕಾರ್ಯಾಲಯದಲ್ಲಿ ಶುಕ್ರವಾರ ಅಧ್ಯಕ್ಷರು, ಸದಸ್ಯರ ಸಭೆ ನಡೆಸಿ ಮಾತನಾಡಿದ ಅವರು, ಸೋಮವಾರದೊಳಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದರು.

2015ರಿಂದ ಇಲ್ಲಿಯ ತನಕ ಹದಿನಾಲ್ಕನೇ ಹಣಕಾಸು ಯೋಜನೆಯಡಿ ಕ್ರಿಯಾ ಯೋಜನೆ ತಯಾರಿಸಿದ್ದು, ಯಾವ ಸದಸ್ಯರ ಗಮನಕ್ಕೂ ತಂದಿಲ್ಲ. ಜಿಪಿಆರ್‌ಎಸ್‌ ಕ್ಯಾಮೆರಾದಲ್ಲಿ ನೀರು ಪೂರೈಸುವ ಟ್ಯಾಂಕರ್‌ ಫೋಟೋ ತೆಗೆಯಬೇಕೆಂಬ ನಿಯಮವಿದೆ. ಒಂದೇ ಶೌಚಾಲಯಕ್ಕೆ ಮೂರು ಬಾರಿ ದಾಖಲೆ ನೀಡಿ ಹಣ ಲಪಟಾಯಿಸಲಾಗಿದೆ. ನರೇಗಾ ಯೋಜನೆಯಡಿ ಬೆಳಗಟ್ಟದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕಾಂಪೌಂಡ್‌ ನಿರ್ಮಿಸಿರುವುದಾಗಿ ಹಣ ದುರುಪಯೋಗ ನಡೆಸಲಾಗಿದೆ. ಟ್ಯಾಂಕರ್‌ ಮಾಫಿಯಾದವರು ನೀರಿಗೆ ಕೃತಕ ಅಭಾವ ಸೃಷ್ಟಿಸುತ್ತಿದ್ದಾರೆ. ಯಾರ ಅನುಮತಿ ಪಡೆದು ಟ್ಯಾಂಕರ್‌ ನೀರು ಪೂರೈಸಿದ್ದೀರಿ ಎಂದು ಸದಸ್ಯ ವೆಂಕಟೇಶ್‌ರೆಡ್ಡಿ ತಾಪಂ ಕಾರ್ಯನಿರ್ವಹಣಾಧಿಕಾರಿ ಗಮನಕ್ಕೆ ತಂದಾಗ ಇಂಜಿನಿಯರ್‌ ಅವರನ್ನು ಕಳಿಸಿ ತಪಾಸಣೆ ಮಾಡಿಸಿ ತಪ್ಪಿತಸ್ಥರು ಕಂಡು ಬಂದರೆ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಗ್ರಾಮ ಪಂಚಾಯಿತಿಯಲ್ಲಿ ಪಾರದರ್ಶಕವಾಗಿ ಕೆಲಸ ನಡೆಯಬೇಕಾದರೆ ಅಧ್ಯಕ್ಷರು, ಸದಸ್ಯರು, ಪಿಡಿಒ ಹಾಗೂ ಕಾರ್ಯದರ್ಶಿಗಳು ಪರಸ್ಪರ ಸಹಕಾರದಿಂದ ಅಭಿವೃದ್ಧಿಗೆ ಕೈ ಜೋಡಿಸಿ ಎಂದು ತಾಕೀತು ಮಾಡಿದರು. ಬೆಳಗಟ್ಟ ಗ್ರಾಪಂ ಅಧ್ಯಕ್ಷೆ ಚಿತ್ರಮ್ಮ, ಸದಸ್ಯರಾದ ಬೋರಣ್ಣ, ಕುರಿ ನಾಗರಾಜ್‌, ಹಾಯ್ಕಲ್ ಸತ್ಯನಾರಾಯಣರೆಡ್ಡಿ ಸೇರಿದಂತೆ ಇತರು ಸದಸ್ಯರು ಭಾಗವಹಿಸಿದ್ದರು. ಬೆಳಗಟ್ಟದಲ್ಲಿ ಕುಡಿಯುವ ನೀರಿನ ಸಮಸ್ಯೆ ಮೊದಲು ಬಗೆಹರಿಸುವಂತೆ ಕೆಲವು ಮಹಿಳೆಯರು ಖಾಲಿ ಕೊಡಗಳೊಂದಿಗೆ ಸಭೆಗೆ ಪ್ರವೇಶಿಸಿ ಆಕ್ರೋಶ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next