ಹೊಳಲ್ಕೆರೆ: ಆರ್ಥಿಕವಾಗಿ ಹಿಂದುಳಿದ ಮಹಿಳೆಯರಸ್ವಾವಲಂಬನೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಪೂರಕವಾಗಿ ಕೆಲಸ ಮಾಡುತ್ತಿದೆ ಎಂದು ರಾಜ್ಯ ರಸ್ತೆಸಾರಿಗೆ ಸಂಸ್ಥೆ ಅಧ್ಯಕ್ಷ ಹಾಗೂ ಶಾಸಕ ಎಂ. ಚಂದ್ರಪ್ಪಹೇಳಿದರು.
ತಾಲೂಕಿನ ಶಿವಪುರ ಗ್ರಾಮದಲ್ಲಿ ಶ್ರೀಕ್ಷೇತ್ರಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖೀಲಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ, ಜಿಲ್ಲಾಜನಜಾಗೃತಿ ವೇದಿಕೆ ಚಿತ್ರದುರ್ಗ, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಸಹಯೋಗದಲ್ಲಿಗಾಂಧಿ ಜಯಂತಿ ಪ್ರಯುಕ್ತ ಹಮ್ಮಿಕೊಂಡಿದ್ದ ಜಾಗೃತಿಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಧರ್ಮಸ್ಥಳ ಸಂಸ್ಥೆಯು ಮಹಿಳೆಯರ ಆರ್ಥಿಕಪ್ರಗತಿಯ ಜೊತೆಗೆ ಸ್ವಉದ್ಯೋಗ ಹೊಂದಲು ರುಡ್‌ಸೆಟ್ ಮೂಲಕ ತರಬೇತಿಗಳನ್ನು ಹಮ್ಮಿಕೊಂಡುನಿರುದ್ಯೋಗ ಯುವಕರಿಗೆ ದಾರಿದೀಪವಾಗುತ್ತಿದೆ.ಮದ್ಯಕ್ಕೆ ದಾಸರಾಗಿ ಸಂಸಾರವನ್ನು ಹಾಳು ಮಾಡಿಕೊಂಡುಜೀವನ ಮೌಲ್ಯವನ್ನು ಕಳೆದುಕೊಂಡವರನ್ನು ಗುರುತಿಸಿಅಂತವರಿಗೆ ಎಂಟು ದಿನಗಳ ಕಾಲ ಮದ್ಯವರ್ಜನಶಿಬಿರ ನಡೆಸಿ ನವ ಜೀವನ ಕಟ್ಟಿಕೊಳ್ಳಲು ಸಹಕಾರನೀಡುತ್ತಿರುವುದು ಶ್ಲಾಘನೀಯ ಎಂದರು.
ಮಾಜಿ ಶಾಸಕ ಪಿ. ರಮೇಶ್ ಮಾತನಾಡಿ,ಹೆಣ್ಣುಮಕ್ಕಳು ಕೂಡ ಜೀವನ ಸಾಗಿಸಲು ಬೇಕಾದವ್ಯವಹಾರ ಜ್ಞಾನವನ್ನು ಧರ್ಮಸ್ಥಳ ಸಂಸ್ಥೆ ನೀಡುತ್ತಿದೆ.ಸ್ವಸಹಾಯ ಸಂಘಗಳ ಮೂಲಕ ಆರ್ಥಿಕವಾಗಿಹಿಂದುಳಿದ ಜನರ ಏಳ್ಗೆಗೆ ಸಂಸ್ಥೆ ಶ್ರಮಿಸುತ್ತಿದೆ. ಕುಡಿತದಚಟಕ್ಕೆ ಬಲಿಯಾದವರನ್ನು ಗುರುತಿಸಿ ಅವರಿಗೆಮದ್ಯವರ್ಜನ ಶಿಬಿರದ ಮೂಲಕ ಪುನರ್ಜನ್ಮ ನೀಡುವಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದರು.
ಧರ್ಮಸ್ಥಳ ಸಂಸ್ಥೆ ನಿರ್ದೇಶಕ ದಿನೇಶ್ ಪೂಜಾರಿಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಯ ಮೂಲಕ ಇದುವರೆಗೂ ರಾಜ್ಯಾದ್ಯಂತ1472 ಮದ್ಯವರ್ಜನ ಶಿಬಿರ ನಡೆಸಲಾಗಿದೆ. 1,21,000ಸದಸ್ಯರು ಶಿಬಿರಕ್ಕೆ ಸೇರಿ ಪಾನಮುಕ್ತ ಜೀವನನಡೆಸುತ್ತಿದ್ದಾರೆ ಎಂದು ತಿಳಿಸಿದರು.ಧಾರವಾಡ ಪ್ರಾದೇಶಿಕ ಕಚೇರಿಯ ಯೋಜನಾಧಿಕಾರಿ ನಾಗೇಶ್ ಮಾತನಾಡಿ, ಕುಡಿತದಿಂದಕುಟುಂಬ ಹಾಗೂ ಸಮಾಜದ ಮೇಲೆ ಕೆಟ್ಟ ಪರಿಣಾಮಉಂಟಾಗುತ್ತಿದೆ. ಪ್ರತಿಯೊಬ್ಬರೂ ಪ್ರಜ್ಞಾವಂತರಾಗಿ ಕೆಟ್ಟಪಿಡುಗನ್ನು ಹೋಗಲಾಡಿಸಬೇಕು ಎಂದರು.
ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಮಾರುತೇಶ್‌ಅಧ್ಯಕ್ಷತೆ ವಹಿಸಿದ್ದರು. ವೃತ್ತ ನಿರೀಕ್ಷಕ ರವೀಶ್ ಕೆ.ಎನ್.,ತಾಪಂ ಸದಸ್ಯರಾದ ಗಿರಿಜಮ್ಮ ಅಜ್ಜಯ್ಯ, ಶಿವಪುರಗ್ರಾಪಂ ಅಧ್ಯಕ್ಷ ರಾಜಪ್ಪ, ತಾಪಂ ಮಾಜಿ ಅಧ್ಯಕ್ಷಮೋಹನ್ ನಾಗರಾಜ್, ಯೋಜನಾ ಧಿಕಾರಿ ಪ್ರಭಾಕರ,ಹಿರಿಯರಾದ ಟಿ.ಎಂ. ಪರಮೇಶ್ವರಪ್ಪ, ಪ್ರೇಮಕಲಾ,ಜಿ.ಎಸ್. ಜಯದೇವಪ್ಪ, ರುದ್ರಮ್ಮ, ಭಾರತಿ, ಗ್ರಾಪಂಸದಸ್ಯರಾದ ಮಹೇಂದ್ರಯ್ಯ, ಧ್ರುವಕುಮಾರ್, ಅಜ್ಜಯ್ಯಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮಕ್ಕೂಮುನ್ನ ದುಶ್ಚಟಗಳ ವಿರುದ್ಧದ ಜಾಗೃತಿ ಜಾಥಾಕ್ಕೆ ಮಾಜಿಶಾಸಕ ರಮೇಶ್ ಚಾಲನೆ ನೀಡಿದರು.