Advertisement

ಶರಣರು ಅಮಾವಾಸ್ಯೆ ಹೆದರಿಸುತ್ತಾರೆ

05:17 PM Apr 06, 2019 | Naveen |

ಚಿತ್ರದುರ್ಗ: ಬಹಳಷ್ಟು ಜನರು ಅಮಾವಾಸ್ಯೆಗೆ ಹೆದರುತ್ತಾರೆ. ಈ ಹಗಲು ರಾತ್ರಿಗಳು ನಿಸರ್ಗದ ನಿಯಮಗಳು. ಆದರೆ, ಬಸವಾದಿ ಶರಣರು ಅಮಾವಾಸ್ಯೆ ಹೆದರಿಸುತ್ತಾರೆ. ರಾಹುಕಾಲ, ಯಮಗಂಡ ಕಾಲ, ಗುಳಿಕ ಕಾಲ ಏನು ಮಾಡಲಾರವು ಎಂದು ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು.

Advertisement

ನಗರದ ಬಸವಕೇಂದ್ರ ಶ್ರೀ ಮುರುಘಾ ಮಠದಲ್ಲಿ ಎಸ್‌ಜೆಎಂ ಶಾಂತಿ ಮತ್ತು ಪ್ರಗತಿ ಫೌಂಡೇಶನ್‌ ಸಹಯೋಗದಲ್ಲಿ ಶುಕ್ರವಾರ
ನಡೆದ ಸಾಮೂಹಿಕ ಕಲ್ಯಾಣ ಮಹೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಠಕ್ಕೆ ವಿದ್ಯಾರ್ಥಿಗಳಾಗಿ ಬಂದು ವಿದ್ಯಾರ್ಜನೆ ಮಾಡಿ ಅಲ್ಲಲ್ಲಿ ಹುದ್ದೆಗಳನ್ನು ಪಡೆದು ಶ್ರೀಮಠದ ಜೊತೆಯಲ್ಲಿ ಸಾಗುತ್ತ
ಬಂದಿರುವ ಯುವಕರೂ ಸೇರಿದಂತೆ ಹಲವರು ಪ್ರಥಮ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ದಾಂಪತ್ಯ ಜೀವನಕ್ಕೆ
ಕಾಲಿಟ್ಟಿದ್ದಾರೆ ಎಂದರು.

ಚಿತ್ರದುರ್ಗ ಇಂದು ಬರದ ನಾಡಾಗಿದೆ. ಸಮರ್ಪಕ ಮಳೆಯಾಗುತ್ತಿಲ್ಲ. ಅಂತರ್ಜಲ ಪಾತಾಳಕ್ಕೆ ಹೋಗಿದೆ. ನೀರಾವರಿಗಾಗಿ ಹೋರಾಟ ನಡೆಸಲಾಗುತ್ತಿದೆ. ಇಂತಹ ಬರದ
ನಾಡಿಗೆ ಈ ಸರಳ ಸಾಮೂಹಿಕ ಮಹೋತ್ಸವ ಒಂದು ವರದಾನವಾಗಿದೆ. ಮುರಿಗೆ ಶಾಂತವೀರ ಸ್ವಾಮಿಗಳು ಇಲ್ಲಿ ನೆಲೆಸಿದ
ಮೇಲೆ ಈ ಬರದನಾಡು ಭಕ್ತಿಯ ನಾಡಾಗಿದೆ. ಈ ಬಾರಿ ಅಮಾವಾಸ್ಯೆ ಮತ್ತು ಯುಗಾದಿ ಬಂದಿರುವುದರಿಂದ ವಿವಾಹ ಜೋಡಿಗಳ ಸಂಖ್ಯೆ ಕಡಿಮೆಯಾಗಿದೆ ಎಂದರು.

ಕಳೆದ 29 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅಮಾವಾಸ್ಯೆ ಮತ್ತು ಯುಗಾದಿ ಒಟ್ಟೊಟ್ಟಿಗೆ ಬಂದಿವೆ. ಇಲ್ಲಿಯವರೆಗೂ
16 ಸಾವಿರಕ್ಕೂ ಹೆಚ್ಚು ಜೋಡಿಗಳು ಇಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇನ್ನು ಮದುವೆಗೆ ಆಗಮಿಸಿರುವ ನೀವೆಲ್ಲ ಕಾಯಕ
ಮಾಡಬೇಕು. ಹಸಿದವನಿಗೆ ಅನ್ನ ಬೇಕು. ಅನ್ನಕ್ಕಾಗಿ ಕಾಯಕ ಮಾಡಬೇಕು. ಅಭಿವೃದ್ಧಿ ಮತ್ತು ಆಧ್ಯಾತ್ಮ ಜೊತೆ ಜೊತೆಯಾಗಿ
ಸಾಗಬೇಕು. ಅಭಿವೃದ್ಧಿಯ ಕಡೆಗೆ ಕರೆದೊಯ್ಯುವುದೇ ಕಲ್ಯಾಣ ಮಾರ್ಗ. ಎಲ್ಲರೂ ತಪ್ಪದೇ ಮತ ಚಲಾಯಿಸಿ. ಹಣಕ್ಕಾಗಿ ಓಟು ಮಾರಿಕೊಳ್ಳಬಾರದು ಎಂದರು.

Advertisement

ಮೇದಾರ ಗುರುಪೀಠದ ಶ್ರೀ ಬಸವ ಇಮ್ಮಡಿ ಮೇದಾರ ಕೇತೇಶ್ವರ ಸ್ವಾಮೀಜಿ ವೇದಿಕೆಯಲ್ಲಿದ್ದರು. ಎಸ್‌ಜೆಎಂ ವಿದ್ಯಾಪೀಠ ಕಾರ್ಯುದರ್ಶಿ ಎ.ಜೆ. ಪರಮಶಿವಯ್ಯ, ಕಾರ್ಯೆನಿರ್ವಹಣಾಧಿ ಕಾರಿ ಎಂ.ಜಿ. ದೊರೆಸ್ವಾಮಿ, ಕೆಇಬಿ ಷಣ್ಮುಖಪ್ಪ, ಪೈಲ್ವಾನ್‌ ತಿಪ್ಪೇಸ್ವಾಮಿ, ಎನ್‌. ತಿಪ್ಪಣ್ಣ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next