Advertisement

ಅನ್ನ-ಅರಿವು ನೀಡುವುದೇ ನಿಜ ಧರ್ಮ

02:06 PM Aug 29, 2021 | Team Udayavani |

ಹೊಸದುರ್ಗ: ಧರ್ಮ ಕೇವಲ ಪೂಜಾದಿಕ್ರಿಯೆಗಳಲ್ಲಿಲ್ಲ. ಮಾನವ ಧರ್ಮವೇ ಶರಣ ಧರ್ಮಎಂದು ಡಾ| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

Advertisement

ಶ್ರೀ ತರಳಬಾಳು ಜಗದ್ಗುರು ಶಾಖಾ ಮಠಆಯೋಜಿಸಿರುವ “ಮತ್ತೆ ಕಲ್ಯಾಣ’ ಅಂತರ್ಜಾಲ ಉಪನ್ಯಾಸ ಮಾಲಿಕೆಯ 28ನೇ ದಿನದ ಕಾರ್ಯಕ್ರಮದಲ್ಲಿಶ್ರೀಗಳು ಆಶೀರ್ವಚನ ನೀಡಿದರು. ಸ್ಥಾವರದೇವರುಗಳಿಗೆ ನೈವೇದ್ಯ ಮಾಡಿದ್ದು ಪ್ರಸಾದವಲ್ಲ,ಉಣ್ಣದ ಲಿಂಗಕ್ಕೆ ಬೊನವ ಹಿಡಿದು ಉಣ್ಣುವ ಜಂಗಮಬಂದರೆ ಮುಂದೆ ಕಳುಹಿಸುವುದು ಧರ್ಮವಲ್ಲ. ಅನ್ನ,ನೀರು, ಬಟ್ಟೆ, ಅರಿವುಗಳನ್ನು ಕೊಡುವುದೇ ನಿಜವಾದಧರ್ಮ ಎಂದರು.

ವಚನ ಧರ್ಮ ಶಾಂತಿ, ಸಮಾನತೆ, ಸಹಬಾಳ್ವೆ,ಸ್ವಾತಂತ್ರ್ಯದ ಬಗ್ಗೆ ಹೇಳುತ್ತದೆ. 12ನೇ ಶತಮಾನದಲ್ಲಿಬಸವಣ್ಣನವರ ನೇತೃತ್ವದಲ್ಲಿ ‌ ಜರುಗಿದ ಸಮಾಜೋದ್ಧಾರ್ಮಿಕ ಚಳವಳಿಯ ಪ್ರಭಾವಕೇವಲ ಕರ್ನಾಟಕಕ್ಕಷ್ಟೇ ಅಲ್ಲ, ಭಾರತದ ಹೊರಗೂಹೋಗಿರುವ ನಿದರ್ಶನಗಳಿವೆ. ಇದಕ್ಕೆ ಕಾರಣಕಲ್ಯಾಣದಲ್ಲಿನ ಧಾರ್ಮಿಕ ಸಂಸತ್‌ “ಅನುಭವಮಂಟಪ’ದಲ್ಲಿ ರೂಪುಗೊಂಡ ಸಾರ್ವತ್ರಿಕ,ಸಾರ್ವಕಾಲಿಕ ತತ್ವಗಳು. ಈ ತತ್ವ, ಸಿದ್ಧಾಂತಗಳಿಗೆಮಾರುಹೋಗಿ ಕಲ್ಯಾಣಕ್ಕೆ ಬಂದಧರ್ಮಾಸಕ್ತರಲ್ಲಿ ಮರುಳಶಂಕರದೇವರೂಒಬ್ಬರು.

ಇವರು ಅಂದಿನ ಗಾಂಧಾರ, ಇಂದಿನ ಅಪಘಾನಿಸ್ತಾನದಿಂದ ಬಂದವರು. ಕಲ್ಯಾಣದಜಂಗಮರಿಂದ ಅನುಭವ ಮಂಟಪ ಮತ್ತು ಮಹಾಮನೆಯಲ್ಲಿನ ಪ್ರಸಾದದ ಮಹತ್ವ ತಿಳಿದು ಬಂದಿದ್ದರು.

ಇವರು ಗುಪ್ತ ಭಕ್ತರು ಹಾಗೂ ಪರಮಪ್ರಸಾದಿಗಳು. ಭಕ್ತಿ ಆಡಂಬರದ ಸರಕಾಗದೆಗುಪ್ತವಾಗಿರಬೇಕೆಂದು ಬಯಸಿ ಅದರಂತೆ ಜೀವನನಡೆಸಿದವರು. 12 ವರ್ಷಗಳ ಕಾಲ ಅನುಭವಮಂಟಪ ಮತ್ತು ಮಹಾಮನೆಯಲ್ಲಿ ಮೌನಿಯಾಗಿ,ಎಲೆಮರೆಯ ಕಾಯಂತೆ ಸೇವೆ ಮಾಡಿದವರು.ಮಹಾಮನೆಯಲ್ಲಿ ಪ್ರಸಾದ ತಯಾರಿಸುವ, ಪ್ರಸಾದಸೇವಿಸಿದ ಎಲೆಗಳನ್ನು ಎತ್ತುವ, ಪಾತ್ರೆಗಳನ್ನುತೊಳೆಯುವ ಕಾಯಕ ಮಾಡುತ್ತಿದ್ದರು.ಅಲ್ಲಮಪ್ರಭುದೇವರು ಕಲ್ಯಾಣಕ್ಕೆ ಬಂದಾಗಮಹಾಮನೆಯ ಪ್ರಸಾದ ಕುಂಡದಲ್ಲಿದ್ದ ಗುಪ್ತಭಕ್ತಿಯಮರುಳ ಶಂಕರದೇವರು ಬೆಳಕಿಗೆ ಬರುವರು.

Advertisement

ಅದುವರೆಗೂ ಬಸವಣ್ಣನವರನ್ನೂ ಸೇರಿದಂತೆಯಾರಿಗೂ ಅವರ ಪರಿಚಯವಾಗಿರಲಿಲ್ಲ. ಗೋರಕ್ಷ,ಸಿದ್ಧರಾಮ, ಮುಂತಾದವರ ಬಳಿ ಪ್ರಭುದೇವರುಹೋಗಿ ಅವರ ದೋಷಗಳನ್ನು ತಿದ್ದಿ ಆಧ್ಯಾತ್ಮಿಕ ವಿಕಾಸಕ್ಕೆನೆರವಾದರು. ಆದರೆ ಮರುಳಶಂಕರ ದೇವರಲ್ಲಿಗೆಅಲ್ಲಮಪ್ರಭು ಬಂದು ನಿಜ ಪದವಿಯನ್ನು ನೀಡಿದ್ದುಅವರ ಆಧ್ಯಾತ್ಮಿಕ ಉನ್ನತಿಯ ದ್ಯೋತಕವಾಗಿದೆ ಎಂದು ಬಣ್ಣಿಸಿದರು.

ಉಪನ್ಯಾಸ ಮಾಲಿಕೆಯಲ್ಲಿ “ಮರುಳಶಂಕರದೇವ’ಕುರಿತಂತೆ ಲೇಖಕ, ಉಪನ್ಯಾಸಕ ಬೆಂಗಳೂರಿನ ಡಾ|ರುದ್ರೇಶ್‌ಅದರಂಗಿಮಾತನಾಡಿ.ಪ್ರಸ್ತುತಜಾಗತಿಕವಾಗಿದೊಡ್ಡ ವಿಪ್ಲವ ಅಪಘಾನಿಸ್ತಾನದಲ್ಲಿ ನಡೆಯುತ್ತಿದೆ.ಇದು ಅಲ್ಲಿನ ತಾಲಿಬಾನಿಗಳು ಎಸಗುತ್ತಿರುವ ಕುಕೃತ್ಯ.ಪ್ರಜಾಪ್ರಭುತ್ವ ಸರಕಾರವನ್ನು ಹಿಂಸಾತ್ಮಕಾಗಿ ತೊಡೆದುಹಾಕಿ, ಪ್ರಜೆಗಳ ಹಕ್ಕುಗಳನ್ನು ದಮನ ಮಾಡುತ್ತಿದ್ದಾರೆ.ಅಲ್ಲಿನ ನಾಗರೀಕರು ಬೇರೆ ದೇಶಗಳಿಗೆ ವಲಸೆಹೋಗಿ ನಿರಾಶ್ರಿತರಾಗುತ್ತಿದ್ದಾರೆ.

ಹಿಂಸೆ, ಕ್ರೌರ್ಯಮೆರೆಯುತ್ತಿದೆ. ಇಂಥ ಅಪಘಾನಿಸ್ತಾನದ ಮೊದಲಹೆಸರು ಗಾಂಧಾರ. ಅಲ್ಲಿಂದ ಬಸವಣ್ಣನ ಕಲ್ಯಾಣಕ್ಕೆಬಂದವರು ಮರುಳಶಂಕರ ದೇವರು. ಇವರಿಗೆಅನುಭವಮಂಟಪದಲ್ಲಿ ನಡೆಯುತ್ತಿರುವಸಮಾಜೋದ್ಧಾರ್ಮಿಕ ಚಟುವಟಿಕೆಗಳನ್ನುನೋಡಬೇಕು, ಶರಣರೊಂದಿಗೆ ಚಿಂತನ-ಮಂಥನನಡೆಸಬೇಕೆಂಬ ಮಹತ್ವಾಕಾಂಕ್ಷೆ ಇತ್ತು ಎಂದುತಿಳಿಸಿದರು.

ಕುಡೂÉರಿನ ಸಾನಿಕ ಉಪ್ಪರಿಗೆ ಸ್ವಾಗತಿಸಿದರು.ಶಿವಸಂಚಾರದ ಕೆ. ಜ್ಯೋತಿ, ಕೆ. ದಾûಾಯಣಿ,ಎಚ್‌.ಎಸ್‌. ನಾಗರಾಜ್‌ ವಚನಗೀತೆ ಹಾಡಿದರು.ಶಿವಮೊಗ್ಗದ ಸಹಚೇತನ ನಾಟ್ಯಾಲಯ ಕೇಂದ್ರದಕಲಾವಿದರು ವಚನ ನೃತ್ಯ ಪ್ರದರ್ಶಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next