Advertisement

ಅತಿ ಮೋಹದಿಂದ ಅವಸಾನ ಖಚಿತ

06:46 PM Aug 26, 2021 | Team Udayavani |

ಹೊಸದುರ್ಗ: ತನು, ಮನ, ಧನವನ್ನು ಗುರು, ಲಿಂಗ, ಜಂಗಮಕ್ಕೆ ಅರ್ಪಿಸಬೇಕು. ಬದಲಾಗಿ ತನು, ಮನ, ಧನಗಳ ಮೋಹಕ್ಕೆ ಒಳಗಾದರೆ ಕೇಡು ತಪ್ಪಿದ್ದಲ್ಲ. ಇಂಥವರನ್ನು ಶರಣರು ಭವಿಗಳು ಎನ್ನುವರು.

Advertisement

ಇಂಥವರು ಸಮಾಜದಲ್ಲಿ ಬೇಕಾದಷ್ಟು ಜನರಿದ್ದಾರೆ. ಇವರ ಒಡನಾಟ ಸಲ್ಲದು ಎಂದು ಡಾ| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಶ್ರೀ ತರಳಬಾಳು ಜಗದ್ಗುರು ಶಾಖಾ ಮಠ ಆಯೋಜಿಸಿರುವ “ಮತ್ತೆ ಕಲ್ಯಾಣ’ ಅಂತರ್ಜಾಲ ಉಪನ್ಯಾಸ ಮಾಲಿಕೆಯ 25ನೇ ದಿನದ ಕಾರ್ಯಕ್ರಮದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು. ಸಜ್ಜನರ ಒಡನಾಟ ಹೆಜ್ಜೆàನು ಸವಿದಂತೆ. ಅಂತರಂಗ ಶುದ್ಧವಿಲ್ಲದವರ ಸಂಗ ವಿಷ. ವ್ಯಕ್ತಿ ಬಡವನಾದರೂ ಮನಸ್ಸಿನಿಂದ ಶ್ರೀಮಂತನಾಗಬೇಕು. ಆಗ ಬದುಕು ಭವ್ಯವಾಗುವುದು ಎಂದರು.

ಬಸವ ಸಂದೇಶ ಕಾಲಾತೀತ, ದೇಶಾತೀತ. ಕನ್ನಡ ನಾಡಿನ ದಾರ್ಶನಿಕ ಪರಂಪರೆಯಲ್ಲಿ 12ನೇ ಶತಮಾನದ ಶರಣ ಪರಂಪರೆ ಬಹು ದೊಡ್ಡದು. ಅಲ್ಲಿ ಅನುಭಾವಿಗಳ ಸಮೂಹವೇ ಇತ್ತು. ಇವರೆಲ್ಲರೂ ಸಂಸಾರದಲ್ಲಿದ್ದುಕೊಂಡೇ ಆಧ್ಯಾತ್ಮದ ಅನುಭೂತಿ ಪಡೆದರು. ಇದಕ್ಕೆ ಕಾರಣ ಬಸವಣ್ಣನವರು ಹಾಕಿಕೊಟ್ಟ ಕಾಯಕ-ದಾಸೋಹ ತತ್ವ. ಶರಣರೆಲ್ಲರೂ ಕಾಯಕವೇ ಕೈಲಾಸವೆಂದು ದುಡಿಮೆಯಲ್ಲಿಯೇ ದೇವರನ್ನು ಕಂಡವರು.

ಈ ಎಲ್ಲ ಶರಣರ ಬದುಕಿಗೆ ಬೆಳಕನ್ನು ಕರುಣಿಸಿದವರು ಬಸವಣ್ಣ. ಅವರ ಹೆಸರೇ ಮಂತ್ರ ಸದೃಶವಾದುದು ಎಂದು ಬಣ್ಣಿಸಿದರು. ಉಪನ್ಯಾಸ ಮಾಲಿಕೆಯಲ್ಲಿ “ಅನಿವಾಸಿ ಭಾರತೀಯರಿಗೆ ಬಸವ ತತ್ವದ ಪ್ರಸ್ತುತತೆ’ ಕುರಿತು ಇಂಗ್ಲೆಂಡ್‌ನ‌ ನ್ಯಾಷನಲ್‌ ಹೆಲ್ತ್‌ ಸರ್ವಿಸ್‌ನ ತಜ್ಞ ವೈದ್ಯ ಡಾ| ಜಿ.ಎಸ್‌. ಶಿವಪ್ರಸಾದ್‌ ಮಾತನಾಡಿ, ವೃತ್ತಿ ಆಶಯ, ವೈಯುಕ್ತಿಕ, ಆರ್ಥಿಕ ಉನ್ನತಿ ಮುಂತಾದ ಕಾರಣದಿಂದ ಅನೇಕ ಭಾರತೀಯರು ವಲಸೆ ಬಂದಿದ್ದಾರೆ. ಇಲ್ಲಿಗೆ ಬಂದ ಅನಿವಾಸಿಗಳಿಗೆ ಭಾಷೆ, ಸಂಸ್ಕೃತಿ, ಆಧ್ಯಾತ್ಮ ತೃಷೆ, ತಾಯ್ನಾಡಿನ ತುಡಿತ, ಮಕ್ಕಳು, ಮೊಮ್ಮಕ್ಕಳು ಮೂಲ ಬೇರುಗಳನ್ನು ಕಳೆದುಕೊಳ್ಳುವುದರ ಬಗ್ಗೆ ಆತಂಕವಿರುವುದು ಸಹಜ. ಈ ಆತಂಕ ನಿವಾರಣೆಗೆ ಕನ್ನಡ ಸಂಘಗಳನ್ನು ಕಟ್ಟಿಕೊಂಡು ಭಾಷೆಯನ್ನು ಬೆಳೆಸುವ, ಉಳಿಸುವ ಕೆಲಸ ಯಶಸ್ವಿಯಾಗಿ ನಡೆದಿದೆ.

ಈ ಹಿನ್ನೆಲೆಯಲ್ಲಿ ಇಂಗ್ಲೆಂಡಿನಲ್ಲಿ ಬಸವ ತತ್ವದ ಪರಿಕಲ್ಪನೆಯಡಿ ಜಾತ್ಯತೀತವಾಗಿ ವೀರಶೈವ ಸಮಾಜ ಎನ್ನುವ ಸಂಸ್ಥೆಯ ಮೂಲಕ ಕಾಲ ಕಾಲಕ್ಕೆ ಶರಣರ ಬದುಕು-ಬರಹ ಕುರಿತಂತೆ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬಂದಿದ್ದೇವೆ. ಥೇಮ್ಸ್‌ ನದಿಯ ದಡದಲ್ಲಿ ಸ್ಥಾಪಿಸಿರುವ ಬಸವೇಶ್ವರರ ಪ್ರತಿಮೆಯನ್ನು ಭಾರತದ ಪ್ರಧಾನಿ ಮೋದಿಯವರು ಅನಾವರಣಗೊಳಿಸಿದ್ದು ಬಸವ ತತ್ವದ ಅರಿವು ಮತ್ತು ಪ್ರಸ್ತುತಿಗೆ ಸಾಕ್ಷಿಯಾಗಿದೆ ಎಂದು ತಿಳಿಸಿದರು. ಅಸಹಾಯಕರಿಗೆ, ಅನಾಥಾಶ್ರಮಗಳಿಗೆ, ಕೊರೊನಾ ಸೋಂಕಿತರಿಗೆ ಆರ್ಥಿಕ ಸಹಾಯ ಮಾಡುವ ಮೂಲಕ ಇಲ್ಲಿನ ವೀರಶೈವ ಸಮಾಜ ಮತ್ತು ಕನ್ನಡ ಬಳಗ ಬಸವ ತತ್ವಗಳಲ್ಲಿ ಒಂದಾದ “ದಾಸೋಹ ತತ್ವ’ಕ್ಕೆ ವಿಶೇಷವಾದ ಅರ್ಥ ನೀಡಿದೆ. ಆರ್ಥಿಕವಾಗಿ ಅನುಕೂಲವಾಗಿರುವ ಅನಿವಾಸಿ ಭಾರತೀಯರು ಪಡೆಯುವುದಕ್ಕಿಂತ ಕೊಡುವುದರಲ್ಲಿಯೇ ಸಾರ್ಥಕತೆಯಿದೆ ಎನ್ನುವುದನ್ನು ಅರಿತಿದ್ದಾರೆ.

Advertisement

ಇಲ್ಲಿನ ಎಷ್ಟೋ ದಾನಿಗಳು ಆನ್‌ಲೈನ್‌ ಮೂಲಕ ಡೊನೇಷನ್‌ ಕೊಡುವಾಗ ತಮ್ಮ ಹೆಸರನ್ನು ಪ್ರಕಟಿಸಬಾರದು ಎಂದು ಹೇಳುವುದು “ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ, ನೀಡಿ ನೀಡಿ ಕೆಟ್ಟರು ನಿಜವಿಲ್ಲದೆ’ ಎನ್ನುವ ಬಸವಣ್ಣನವರ ವಚನವವನ್ನು ನೆನಪಿಸುತ್ತದೆ ಎಂದರು. ಇಟಲಿಯ ಹೇಮೇಗೌಡ ರುದ್ರಪ್ಪ ಸ್ವಾಗತಿಸಿದರು.

ಶಿವಸಂಚಾರದ ಕೆ. ಜ್ಯೋತಿ, ಕೆ. ದಾûಾಯಣಿ, ಎಚ್‌. ಎಸ್‌. ನಾಗರಾಜ್‌ ವಚನಗೀತೆಗಳನ್ನು ಹಾಡಿದರು. ಶಿವಮೊಗ್ಗದ ಸಹಚೇತನ ನಾಟ್ಯಾಲಯ ಕೇಂದ್ರದ ಕಲಾವಿದರು ವಚನ ನೃತ್ಯ ಪ್ರದರ್ಶಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next