Advertisement

ಕುಡಿವ ನೀರು ಕಾಮಗಾರಿ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಕೆ

04:33 PM Feb 18, 2021 | |

ಚಿತ್ರದುರ್ಗ: ಚಿತ್ರದುರ್ಗ ತಾಲೂಕಿನ 171 ಗ್ರಾಮಗಳಿಗೆ ಶಾಂತಿ ಸಾಗರದಿಂದ ಹಾಗೂ ಹಿರಿಯೂರು ತಾಲೂಕಿನ 131 ಗ್ರಾಮಗಳಿಗೆ ವಾಣಿವಿಲಾಸ ಸಾಗರ ಜಲಾಶಯದಿಂದ ಕುಡಿಯುವ ನೀರು ಪೂರೈಕೆ ಮಾಡುವ ಕಾಮಗಾರಿ ಕೈಗೊಳ್ಳಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್‌ ಸಭೆಯಲ್ಲಿ ಅನುಮೋದನೆ ದೊರೆಯಿತು.

Advertisement

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಜಿಪಂ ಸಿಇಒ ಡಾ| ಕೆ. ನಂದಿನಿದೇವಿ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್‌ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಚಿತ್ರದುರ್ಗ ತಾಲೂಕು ವ್ಯಾಪ್ತಿಯಲ್ಲಿರುವ 265 ಗ್ರಾಮಗಳ ಪೈಕಿ 35 ಗ್ರಾಮಗಳು ಸಿರಿಗೆರೆ-ಭರಮಸಾಗರ ಬಹುಗ್ರಾಮ ಯೋಜನೆಯಡಿ, 59 ಗ್ರಾಮಗಳು ಪಾವಗಡ ಡಿಬಿಓಟಿ ಯೋಜನೆಯಡಿ ಆಯ್ಕೆಯಾಗಿವೆ. ಬಾಕಿ ಉಳಿದ 171 ಜನವಸತಿಗಳನ್ನು ಶಾಂತಿಸಾಗರ ಜಲಮೂಲದಿಂದ ಬಹುಗ್ರಾಮ ಯೋಜನೆಯಡಿ ಕಾಮಗಾರಿ ಕೈಗೊಳ್ಳಲು ಸಭೆ ಅನುಮೋದನೆ ನೀಡಿತು.

ಹಿರಿಯೂರು ತಾಲೂಕು ವ್ಯಾಪ್ತಿಯಲ್ಲಿರುವ 284 ಗ್ರಾಮಗಳ ಪೈಕಿ 39 ಗ್ರಾಮಗಳು ಜವಗೊಂಡನಹಳ್ಳಿ ಬಹುಗ್ರಾಮ ಯೋಜನೆಯಡಿ ಇವೆ. 38
ಗ್ರಾಮಗಳು ಐಮಂಗಲ ಬಹುಗ್ರಾಮ ಯೋಜನೆ, 38 ಗ್ರಾಮಗಳು ಹರ್ತಿಕೋಟೆ ಯೋಜನೆ ಹಾಗೂ 38 ಗ್ರಾಮಗಳು ಐಮಂಗಲ ಭಾಗ-2 ಯೋಜನೆಯಡಿ ಹಾಗೂ ಬಾಕಿ ಉಳಿದ 131 ಜನವಸತಿಗಳನ್ನು ವಿವಿ ಸಾಗರ ಜಲಮೂಲದಿಂದ ಬಹುಗ್ರಾಮ ಯೋಜನೆಯಡಿ ಕಾಮಗಾರಿ ಕೈಗೊಳ್ಳಲು ಸಭೆ ಅನುಮೋದಿಸಿತು.

ಜಿಪಂ ಸಿಇಒ ಡಾ| ಕೆ. ನಂದಿನಿದೇವಿ ಮಾತನಾಡಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದಿಂದ ಕೈಗೊಂಡಿರುವ ಬಹುಗ್ರಾಮ ಯೋಜನೆಗಳ ಕಾಮಗಾರಿಗಳನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸಿ ಜನರಿಗೆ ಕುಡಿಯುವ ನೀರು ಒದಗಿಸಬೇಕು ಎಂದು
ಅಧಿಕಾರಿಗಳಿಗೆ ಸೂಚನೆ ನೀಡಿದರು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರ ಜ್ಞಾನೇಶ್‌
ಮಾತನಾಡಿ, ಜಿಲ್ಲೆಯಲ್ಲಿ ವಾಣಿವಿಲಾಸ ಮತ್ತು ಗಾಯತ್ರಿ ಜಲಾಶಯಗಳಿವೆ. ಈ ಜಲಾಶಯಗಳ ಮೂಲಕ ಹಿರಿಯೂರು, ಚಿತ್ರದುರ್ಗ ಮತ್ತು
ಚಳ್ಳಕೆರೆ ನಗರಗಳಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗುತ್ತಿದೆ. ವಾಣಿವಿಲಾಸ ಸಾಗರದಿಂದ ಹಿರಿಯೂರಿನ 76 ಹಳ್ಳಿಗಳಿಗೆ ಬಹುಗ್ರಾಮ ಯೋಜನೆಯಡಿ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿವೆ. ಎಲ್ಲಾ ಗ್ರಾಮಗಳಿಗೂ ನೀರು ತಲುಪುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು.
ತುಂಗಭದ್ರಾ ಜಲಾಶಯದಿಂದ ಚಳ್ಳಕೆರೆ, ಮೊಳಕಾಲ್ಮೂರು ಮತ್ತು ಚಿತ್ರದುರ್ಗ ತಾಲೂಕಿನ ಕೆಲವು ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಬಹುಗ್ರಾಮ ಯೋಜನೆಯಡಿ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.

ಹೊಳಲ್ಕೆರೆ ತಾಲೂಕು ವ್ಯಾಪ್ತಿಯಲ್ಲಿರುವ 273 ಗ್ರಾಮಗಳ ಪೈಕಿ 273 ಗ್ರಾಮಗಳು ನಬಾರ್ಡ್‌ ಬಹುಗ್ರಾಮ ಯೋಜನೆಯಡಿ ಆಯ್ಕೆಯಾಗಿವೆ. ಯೋಜನೆಯ ವಿವರವಾದ ಯೋಜನಾ ವರದಿ ತಯಾರಿಸಿ ಅನುಮೋದನೆಗಾಗಿ ಮೇಲಾಧಿಕಾರಿಗಳಿಗೆ ಸಲ್ಲಿಸಲಾಗಿದೆ. ಹೊಸದುರ್ಗ
ತಾಲೂಕು ವ್ಯಾಪ್ತಿಯಲ್ಲಿರುವ 346 ಗ್ರಾಮಗಳ ಪೈಕಿ 346 ಗ್ರಾಮಗಳು ಹೊಸದುರ್ಗ ಡಿಬಿಓಟಿ ಬಹುಗ್ರಾಮ ಯೋಜನೆಯಡಿಗೆ ಒಳಪಟ್ಟಿದ್ದು,
ಯೋಜನೆಯ ವಿವರವಾದ ಯೋಜನಾ ವರದಿಯನ್ನು ತಯಾರಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಚಳ್ಳಕೆರೆ ತಾಲೂಕು ವ್ಯಾಪ್ತಿಯಲ್ಲಿರುವ 345 ಗ್ರಾಮಗಳ ಪೈಕಿ 345 ಗ್ರಾಮಗಳು ಪಾವಗಡ ಡಿಬಿಓಟಿ ಯೋಜನೆಗೆ ಒಳಪಟ್ಟಿದೆ. ಮೊಳಕಾಲ್ಮೂರು ತಾಲೂಕು ವ್ಯಾಪ್ತಿಯಲ್ಲಿರುವ 134
ಗ್ರಾಮಗಳ ಪೈಕಿ 134 ಗ್ರಾಮಗಳು ಪಾವಗಡ ಡಿಬಿಓಟಿ ಯೋಜನೆಯಡಿಗೆ ಒಳಪಟ್ಟಿದ್ದು, ಕಾಮಗಾರಿ ಪ್ರಗತಿಯಲ್ಲಿದೆ ಎಂದು ಅ ಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

Advertisement

ಸಭೆಯಲ್ಲಿ ಶಿಕ್ಷಣ ಇಲಾಖೆ, ಅರಣ್ಯ ಇಲಾಖೆ, ಭದ್ರಾ ಮೇಲ್ದಂಡೆ ಯೋಜನೆಯ ಅಧಿ ಕಾರಿಗಳು ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು
ನೈರ್ಮಲ್ಯ ಇಲಾಖೆ ಅ ಧಿಕಾರಿಗಳು ಹಾಜರಿದ್ದರು.

ಓದಿ : ದುಬೈ ಯುವರಾಣಿ ಗೋವಾದಲ್ಲಿ ಸೆರೆ ಸಿಕ್ಕಿದ್ದು ಹೇಗೆ, ಅಪ್ಪನೇ ಮಗಳನ್ನು ಜೈಲಿಗೆ ಹಾಕಿದ್ದೇಕೆ ?

Advertisement

Udayavani is now on Telegram. Click here to join our channel and stay updated with the latest news.

Next