ಚಿತ್ರದುರ್ಗ: ಪ್ರಬಲ ಸಮುದಾಯಗಳು 2ಎನಲ್ಲಿರುವ ಮೀಸಲಾತಿಯ ಹಕ್ಕನ್ನು ಕಸಿದುಕೊಳ್ಳುವ ಹುನ್ನಾರ ನಡೆಸುತ್ತಿರುವ ಬಗ್ಗೆ ಮಡಿವಾಳ ಸಮಾಜದಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು ಭಾನುವಾರ ನಗರದ ಪ್ರವಾಸಿಮಂದಿರದಲ್ಲಿ ನಡೆದ ಕಾರ್ಯಕಾರಿಣಿ ಸಭೆಯಲ್ಲಿ
ಚರ್ಚಿಸಲಾಯಿತು.
2021ನೇ ಸಾಲಿನ ನೂತನ ಕಾರ್ಯಕಾರಿಣಿ ಸಮಿತಿಯ ಗೌರವಾಧ್ಯಕ್ಷ ಡಾ| ವಿ. ಬಸವರಾಜ್ ಕಾರ್ಯಕಾರಿಣಿ ಸಭೆಯನ್ನುದ್ದೇಶಿಸಿ ಮಾತನಾಡಿ, ನಮ್ಮ ಮೀಸಲಾತಿಯನ್ನು ಮೇಲ್ಜಾತಿಯವರು ಕಸಿದುಕೊಳ್ಳಲು ಹೊರಟಿರುವುದು ಅತ್ಯಂತ ನೋವಿನ ಸಂಗತಿ. ಹಾಗಾಗಿ ಮುಂದಿನ ದಿನಗಳಲ್ಲಿ
ಮೀಸಲಾತಿಗಾಗಿ ಹೋರಾಡಲು ಮಡಿವಾಳ ಸಮಾಜ ಸಿದ್ಧರಾಗಬೇಕೆಂದರು. ಮೀಸಲಾತಿಗಾಗಿ ಬೇರೆ ಬೇರೆ ಸಮಾಜದವರು ಹೋರಾಟ, ಪಾದಯಾತ್ರೆ ನಡೆಸುತ್ತಿದ್ದಾರೆ.
ನಿಜವಾಗಿಯೂ ಕೆಳಸ್ತರದಲ್ಲಿರುವ ಮಡಿವಾಳ ಸಮಾಜಕ್ಕೆ ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಮೀಸಲಾತಿ ಸಿಗಬೇಕು. ಎಸ್‌ಸಿ-ಎಸ್‌ಟಿಗೆ ಸಿಗುತ್ತಿರುವ ಮೀಸಲಾತಿ ಸೌಲಭ್ಯವನ್ನು ನಾವು ಪಡೆಯಬೇಕಾಗಿದೆ ಎಂದ ಅವರು, ಹೋರಾಟದ ರೂಪುರೇಷೆಗಳ ಕುರಿತು ಸಭೆಯಲ್ಲಿ ಪ್ರಸ್ತಾಪಿಸಿದರು.
ಮುಂದಿನ ದಿನಗಳಲ್ಲಿ ಮಹಿಳಾ ಘಟಕ, ಯುವ ಘಟಕ, ವಿದ್ಯಾರ್ಥಿ ಘಟಕವನ್ನು ರಚಿಸಿ ಮಡಿವಾಳ ಸಮಾಜದ ಅಭ್ಯುದಯಕ್ಕೆ ಶ್ರಮಿಸುವುದಾಗಿ ತಿಳಿಸಿದರು.
ಚಿತ್ರದುರ್ಗ ಮಡಿವಾಳರ ಸಂಘದ ನೂತನ ಕಾರ್ಯಕಾರಿಣಿ ಸಮಿತಿ ಅಧ್ಯಕ್ಷ ಬಿ. ರಾಮಪ್ಪ, ಉಪಾಧ್ಯಕ್ಷರುಗಳಾದ ವಿರೂಪಾಕ್ಷಪ್ಪ, ಎಚ್. ಬಸವರಾಜ್, ಕಾರ್ಯದರ್ಶಿ ಕೆ.ಆರ್. ಮಂಜುನಾಥ್, ಸಹ ಕಾರ್ಯದರ್ಶಿ ಶಿವಲಿಂಗಪ್ಪ, ಖಜಾಂಚಿ ಎಂ. ನಾಗರಾಜ್, ನಿರ್ದೇಶಕರುಗಳಾದ ಎಚ್. ರಂಗಸ್ವಾಮಿ, ಎನ್. ಪ್ರಕಾಶ್, ಟಿ. ಶಿವಕುಮಾರ್, ಜಿ.ಟಿ. ಜಯಣ್ಣ, ಎಸ್.ಟಿ. ಜಯಣ್ಣ, ಬಿ. ಲೋಕೇಶಪ್ಪ ಹಾಜರಿದ್ದರು.
ಓದಿ :
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ನಾರಾಯಣ ಗಾಣಿಗ ವಂಡ್ಸೆ ನಿಧನ