ಚಿತ್ರದುರ್ಗ: ಜಿಲ್ಲೆಯ ಸಂಸದ, ಕೇಂದ್ರ ಸಚಿವ ಎ. ನಾರಾಯಣಸ್ವಾಮಿಯವರು, ಕೇಂದ್ರದ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಖಾತೆ ಸಚಿವರಾದ ಬಳಿಕ ಜಿಲ್ಲೆ ಹಾಗೂ ರಾಜ್ಯದ ಸಮಸ್ಯೆಗಳ ಇತ್ಯರ್ಥಕ್ಕೆ ಸಾಕಷ್ಟು ಶ್ರಮ ವಹಿಸುತ್ತಿದ್ದಾರೆ. ನಾರಾಯಣಸ್ವಾಮಿ ಕೇಂದ್ರ ಸಚಿವರಾದ ನಂತರ ತಮ್ಮ ಇಲಾಖೆಯ ಕಾರ್ಯವ್ಯಾಪ್ತಿಯ ಅಧ್ಯಯನ ಮತ್ತಿತರೆ ಕಾರಣಕ್ಕೆ ದೆಹಲಿಯಲ್ಲೇ ಉಳಿದಿದ್ದಾರೆ.
ಈ ಅವ ಧಿಯಲ್ಲಿ ರಾಜ್ಯ ಹಾಗೂ ಹಿಂದುಳಿದ ಚಿತ್ರದುರ್ಗ ಜಿಲ್ಲೆಗೆ ಸಂಬಂ ಧಿಸಿದ ಯೋಜನೆಗಳು, ನನೆಗುದಿಗೆ ಬಿದ್ದಿರುವ ಯೋಜನೆಗಳ ಕಡತ ಹಿಡಿದು ಇಲಾಖೆಯಿಂದ ಇಲಾಖೆಗೆ ಓಡಾಡುತ್ತಿದ್ದಾರೆ. ಮಂಗಳವಾರ ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿ ಮಧ್ಯ ಕರ್ನಾಟಕದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ದಾವಣಗೆರೆ-ಚಿತ್ರ¨ ುರ್ಗ-ತುಮಕೂರು ನೇರ ರೈಲು ಮಾರ್ಗ ಕಾಮಗಾರಿ ಕುರಿತು ಚರ್ಚಿಸಿದ್ದಾರೆ.
ಇದೇ ವೇಳೆ ಜಿಲ್ಲೆಗೆ ಸಂಬಂಧಿ ಸಿದ ತುಮಕೂರು-ರಾಯದುರ್ಗ, ಹೊಳಲ್ಕೆರೆ ತಾಲೂಕಿನ ಚಿಕ್ಕಂದವಾಡಿ ಸಮೀಪದ ಕೆಳಸೇತುವೆ, ಚಳ್ಳಕೆರೆ ರೈಲ್ವೆ ನಿಲ್ದಾಣದ ಬಳಿ ಮೇಲ್ಸೇತುವೆ, ಶಿವಮೊಗ್ಗ ಮತ್ತು ಚಿತ್ರದುರ್ಗದ ಮುರುಘಾ ಮಠದ ಬಳಿ ಮೇಲ್ಸೇತುವೆ ನಿರ್ಮಾಣ ಮಾಡುವ ಬಗ್ಗೆ ಗಮನ ಸೆಳೆದರು.
ಬಳ್ಳಾರಿ, ಚಿಕ್ಕಜಾಜೂರು, ಹೊಳಲ್ಕೆರೆ ತಾಲೂಕಿನ ರಾಮಗಿರಿ ರೈಲು ನಿಲ್ದಾಣಗಳಲ್ಲಿ ಹರಿಹರ-ಯಶವಂತಪುರ, ಹುಬ್ಬಳ್ಳಿ- ಬೆಂಗಳೂರು, ಬೆಂಗಳೂರು-ಹೊಸಪೇಟೆ, ಹೊಸಪೇಟೆ-ಯಶವಂತಪುರ-ಗೋವಾ ನಡುವೆ ಸಂಚಾರ ಮಾಡುವ ರೈಲುಗಳನ್ನು ನಿಲುಗಡೆ ಮಾಡುವುದು ಸೇರಿದಂತೆ ರಾಜ್ಯದ ನಾನಾ ಯೋಜನೆಗಳು, ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ.
ಈ ವೇಳೆ ರೈಲ್ವೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ನನೆಗುದಿಗೆ ಬಿದ್ದಿರುವ ಯೋಜನೆಗಳಿಗೆ ವೇಗ ನೀಡುವುದಾಗಿ ಭರವಸೆ ನೀಡಿದರು. ಎ. ನಾರಾಯಣಸ್ವಾಮಿ ಕೇಂದ್ರ ಸಚಿವರಾದ ನಂತರ ಮೊದಲ ಬಾರಿಗೆ ರಾಜ್ಯಕ್ಕೆ ಭೇಟಿ ನೀಡುವ ವೇಳೆಗೆ ಜಿಲ್ಲೆ ಹಾಗೂ ರಾಜ್ಯಕ್ಕೆ ಮಹತ್ವದ ಕೊಡುಗೆಗಳನ್ನು ಹೊತ್ತು ತರುವ ನಿಟ್ಟಿನಲ್ಲಿ ಸಾಕಷ್ಟು ಶ್ರಮ ವಹಿಸುತ್ತಿದ್ದಾರೆ.
ಈ ನಿಟ್ಟಿನಲ್ಲಿ ರೈಲ್ವೆ ಸಚಿವರು, ಜಲಶಕ್ತಿ ಸಚಿವಾಲಯದ ಅ ಧಿಕಾರಿಗಳನ್ನು ಸಚಿವರು ಭೇಟಿ ಮಾಡುತ್ತಿರುವುದು ಗಮನಾರ್ಹ.