Advertisement

ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಕಾರ್ಯವೈಖರಿಗೆ ಆಕ್ರೋಶ

10:36 PM Jul 15, 2021 | Team Udayavani |

ಹಿರಿಯೂರು: ಕೌನ್ಸಿಲ್‌ ಸಭೆ ನಡೆಯುವ ದಿನಕ್ಕಿಂತ 7 ದಿನಗಳ ಮೊದಲು ನೋಟಿಸ್‌ ನೀಡಬೇಕಾಗಿತ್ತು. ಆದರೆ ಕೇವಲ 2-3 ದಿನಗಳ ಹಿಂದೆ ತರಾತುರಿಯಲ್ಲಿ ರಾತ್ರಿ 9:30ಕ್ಕೆ ನೋಟೀಸ್‌ ನೀಡಲಾಗಿದೆ. ಇದರಿಂದ ಸದಸ್ಯರಿಗೆ ಸಭೆಯಲ್ಲಿ ಚರ್ಚಿಸಬೇಕಾದ ವಿಷಯಗಳ ಬಗ್ಗೆ ಪಟ್ಟಿ ಮಾಡಲು ಸಮಯಾವಕಾಶ ಕಡಿಮೆಯಾಗಿದೆ ಎಂದು ನಗರಸಭೆ ಸದಸ್ಯ ಮಹೇಶ್‌ ಪಲ್ಲವ ಆಕ್ಷೇಪ ವ್ಯಕ್ತಪಡಿಸಿದರು.

Advertisement

ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷೆ ಶಂಶುನ್ನೀಸಾ ಅಧ್ಯಕ್ಷೆಯಲ್ಲಿ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಚಿತ್ರಜಿತ್‌ ಯಾದವ್‌ ಮಾತನಾಡಿ, ಸ್ಥಾಯಿ ಸಮಿತಿ ಸಭೆ ಕರೆಯಲು ಆಯುಕ್ತರಿಗೆ ಮನವಿ ಮಾಡಿದ್ದೆ. ಆದರೆ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಪ್ರಭಾವದಿಂದ ಪಕ್ಷಪಾತ ಧೋರಣೆ ಅನುಸರಿಸಲಾಗುತ್ತಿದೆ. ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಸಭೆಯ ದಿನಾಂಕವನ್ನು ನಿಗದಿ ಮಾಡಿ ಹಳೆಯ ದಿನಾಂಕಕ್ಕೆ ಪೌರಾಯುಕ್ತರ ಬಳಿ ನೋಟಿಸ್‌ಗೆ ಸಹಿ ಹಾಕಿಸಿದ್ದಾರೆ ಎಂದು ದೂರಿದರು.

ನಗರಸಭೆ ಸದಸ್ಯೆ ಮಂಜುಳಾ ಮಾತನಾಡಿ, ನಗರದ ಸ.ನಂ 152/1 (6 ಎಕರೆ 26 ಗಂಟೆ) ಹಾಗೂ ಸನಂ 152/2/1 (ಎಕರೆ 26 ಗುಂಟೆ) ಜಾಗದ ಕರಡು ವಿನ್ಯಾಸ ಸಾಮಾನ್ಯ ಸಭೆಯಲ್ಲಿ ಮಂಡಿಸಲು ಎರಡು ಬಾರಿ ಕೋರಿದರೂ ಸಾಮಾನ್ಯ ಸಭೆಯಲ್ಲಿ ಮಂಡಿಸಲಾಗಿಲ್ಲ. ಈ ಬಗ್ಗೆ ಜಿಲ್ಲಾ ಧಿಕಾರಿಗಳ ನೋಟಿಸ್‌ಗೂ ಉತ್ತರ ಇಲ್ಲ. ಕಳೆದ ಬಾರಿ ಸಭೆ ನಡೆದಾಗಲೂ ಮುಂದಿನ ಬಾರಿ ನೋಡೋಣ ಎಂದು ಅಧ್ಯಕ್ಷರು ಭರವಸೆ ನೀಡಿದ್ದರು. ಆದರೆ ಈ ಸಭೆಯಲ್ಲಿಯೂ ಅವಕಾಶ ನೀಡಿಲ್ಲ ಎಂದು ಆರೋಪಿಸಿದರು.

ಸದಸ್ಯ ಕೇಶವಮೂರ್ತಿ ಮಾತನಾಡಿ, ನಗರಸಭೆ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಪಕ್ಷಪಾತ ಧೋರಣೆ ಅನುಸರಿಸುತ್ತಿದ್ದಾರೆ. ನಗರದ ಅಭಿವೃದ್ಧಿಯನ್ನು ಕಡೆಗಣಿಸಿದ್ದಾರೆ. ಅಲ್ಲದೆ ಅಜೆಂಡಾಗಳಲ್ಲಿ ಸರ್ಕಾರದ ಸೂಚನೆಗಳನ್ನು ಉಲ್ಲಂಘನೆ ಮಾಡಿದ್ದಾರೆ. ಕೆಲವು ಕಾಂಗ್ರೆಸ್‌ ಸದಸ್ಯರ ಹಿತಾಸಕ್ತಿ ಕಾಪಾಡಲು ವಿಷಯಾಧಾರಿತ ಸಭೆ ನಡೆಸಲಾಗಿದೆ. ಇದನ್ನು ವಿರೋಧಿ ಸಿ ಸಭಾತ್ಯಾಗ ಮಾಡುವುದಾಗಿ ಘೋಷಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು, ಸದಸ್ಯರನ್ನು ಸಮಾಧಾನಪಡಿಸಲು ಯತ್ನಿಸಿದರು. ಈ ವಿಚಾರವನ್ನು ಯಾರೂ ಪ್ರತಿಷ್ಠೆಯಾಗಿ ತೆಗೆದುಕೊಳ್ಳಬಾರದು. ಮುಂದಿನ ಸಭೆಯಲ್ಲಿ ಚರ್ಚಿಸೋಣ. ಈಗ ಕೊರೊನಾ ಸಂಕಷ್ಟ ಇರುವುದರಿಂದ ಈ ಸಭೆಯಲ್ಲಿ ತುರ್ತಾಗಿ ಆಗಬೇಕಾದ ಅಭಿವೃದ್ಧಿ ಕೆಲಸಗಳ ಬಗ್ಗೆ ಚರ್ಚಿಸೋಣ. ಯಾರೂ ಸಭಾತ್ಯಾಗ ಮಾಡುವುದು ಬೇಡ ಎಂದು ಮನವಿ ಮಾಡಿದರು.

Advertisement

ಅಧ್ಯಕ್ಷರ ಮನವಿಗೆ ಸ್ಪಂದಿಸದ ಬಿಜೆಪಿ ಸದಸ್ಯರು ಹಾಗೂ ನಾಮನಿರ್ದೇಶನ ಸದಸ್ಯರು, ಈ ವಿಚಾರದ ಬಗ್ಗೆ ಜಿಲ್ಲಾಧಿ ಕಾರಿಗಳು ಸ್ಪಷ್ಟನೆ ಕೇಳಿದರೂ ಉತ್ತರ ಕೊಡದೆ ನಗರಸಭೆ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ನಿರ್ಲಕ್ಷé ಧೋರಣೆ ತಾಳಿದ್ದಾರೆ ಎಂದು ಆರೋಪಿಸಿದರು.

ಸ್ಥಾಯಿ ಸಮಿತಿ ಅಧ್ಯಕ್ಷ ಚಿತ್ರಜಿತ್‌ ಯಾದವ್‌ ನೇತೃತ್ವದಲ್ಲಿ ನಗರಸಭೆ ಸದಸ್ಯರಾದ ಎಂ.ಡಿ. ಸಣ್ಣಪ್ಪ, ಮಹೇಶ್‌ ಪಲ್ಲವ, ಬಾಲಕೃಷ್ಣ, ಗಣೇಶ್‌ ಕದ್ರು, ಅಂಬಿಕಾ, ಅಪೂರ್ವ ಚಿರಂಜೀವಿ, ಜಯಶೀಲ ಸರವಣನ್‌, ಮಂಜುಳಾ, ದೇವೀರಮ್ಮ, ಕೇಶವಮೂರ್ತಿ, ಸಿ.ಎಂ. ಸ್ವಾಮಿ, ಬಿ.ಎನ್‌. ತಿಪ್ಪೇಸ್ವಾಮಿ, ನಾಗರಾಜ್‌, ಮಹೀಪಾಲ್‌ ಕುಮಾರ್‌ ಸಭೆ ಬಹಿಷ್ಕರಿಸಿ ಹೊರ ನಡೆದರು.

Advertisement

Udayavani is now on Telegram. Click here to join our channel and stay updated with the latest news.

Next