Advertisement

ಕರಡಿ ಹಾವಳಿಗೆ ರೈತರು ಕಂಗಾಲು

03:33 PM Jan 29, 2021 | |

ಹೊಳಲ್ಕೆರೆ: ಕಾಡಿನಿಂದ ಆಹಾರ ಅರಸುತ್ತ ಕರಡಿಯೊಂದು ಕಳೆದ 15 ದಿನಗಳಿಂದ ತೋಟಗಳಲ್ಲಿ ಅಲೆದಾಡುತ್ತಿರುವುದು ಕೃಷಿಕರಲ್ಲಿ ಆತಂಕ ಸೃಷ್ಟಿಸಿದೆ.

Advertisement

ತಾಲೂಕಿನ ಶಿವಗಂಗ ಮಹದೇವರಪುರ ಗ್ರಾಮದ ರಾಮೇಶ್ವರ ದೇವಸ್ಥಾನದ ಸೇರಿದಂತೆ ಸುತ್ತಮುತ್ತಲಿರುವ ಹತ್ತಾರು ಅಡಿಕೆ ತೋಟಗಳಲ್ಲಿ
ಕರಡಿ ವಾಸಮಾಡತೊಡಗಿದೆ. ಕಳೆದ ತಿಂಗಳು ಶಿವಗಂಗ ಅಸುಪಾಸು ಚಿರತೆಯೊಂದು ತೋಟಗಳಲ್ಲಿ ಕಾಣಿಸಿಕೊಂಡಿತ್ತು. ಚಿರತೆ ಸದ್ಯ ತೋಟಗಳಲ್ಲಿ ಕಾಣಿಸಿಕೊಳ್ಳದೆ ಪಕ್ಕದಲ್ಲಿ ಗುಡ್ಡಬೆಟ್ಟಗಳಲ್ಲಿ ಸೇರಿಕೊಂಡಿರುವ ಶಂಕೆಯನ್ನು ರೈತರು ವ್ಯಕ್ತಪಡಿಸಿದ್ದಾರೆ.
ಕರಡಿ ಕೃಷಿ ಕೆಲಸಕ್ಕೆ ತೆರಳುವ ರೈತರ ಮೇಲೆ ದಾಳಿ ಮಾಡುವ ಆಪಾಯಕಾರಿ ವನ್ಯಮೃಗ. ಆಹಾರಕ್ಕಾಗಿ ಎಲ್ಲೆಡೆ ನಿರಾತಂಕವಾಗಿ ಸಂಚರಿಸುತ್ತಿರುವ ಹಿನ್ನೆಲೆಯಲ್ಲಿ ಆತಂಕಗೊಂಡು ರೈತರಿಗೆ ನಿತ್ಯ ಕೃಷಿ ಕಾಯಕ ಕೈಗೊಳ್ಳುವುದು ಸಮಸ್ಯೆ ಎನ್ನಲಾಗಿದೆ.
ವಿಫಲ ದಾಳಿ: ಶಿವಗಂಗ ಹಾಗೂ ಮಹದೇವಪುರದ ರಾಮೇಶ್ವರ ದೇವಸ್ಥಾನದ ಸುತ್ತಲ ತೋಟಗಳಲ್ಲಿ, ಬಂಡಿ ಜಾಡುಗಳಲ್ಲಿ, ಮಾಗಿ ಹೊಲಗಳಲ್ಲಿ, ಹಣ್ಣಿನ ಗಿಡಗಳ ಪೊದೆಗಳಲ್ಲಿ ಕರಡಿ ಕಾಣಿಸಿಕೊಳ್ಳುತ್ತಿದೆ. ರಾಮೇಶ್ವರ ದೇವರಸ್ಥಾನದ ಹತ್ತಿರ ರೈತರು ವಿಶ್ರಾಂತಿಗೆ ನಿಲ್ಲುವುದು ಸಹಜ. ಕರಡಿಯ ಇರುವಿಗೆ ಅರಿವಿಲ್ಲದೆ ಹೋದಾಗ ರೈತ ಮೇಲೆ ದಾಳಿಗೆ ಮುಂದಾಗಿದ್ದು, ಯಾವುದೇ ಅಪಾಯ ಎದುರಾಗಿಲ್ಲ. ಕರಡಿ ತೋಟಗಳಲ್ಲಿ ಕೆಲಸ ಮಾಡುವಾಗ ರೈತರು ಸಿಕ್ಕಲ್ಲಿ ದಾಳಿ ನಡೆಸುವ ಆತಂಕದ ಸ್ಥಿತಿ ರೈತರದ್ದು,

ವಿದ್ಯುತ್‌ ವೇಳೆ ಬದಲಾವಣೆಗೆ ರೈತರ ಆಗ್ರಹ: ಶಿವಗಂಗ ಮಹದೇವಪುರ ಹತ್ತಿರದ ನೂರಾರು ಎಕರೆ ಪ್ರದೇಶದಲ್ಲಿನ ಅಡಿಕೆ ತೋಟಕ್ಕೆ ರಾತ್ರಿ ಹೊತ್ತು ಮೂರು ಗಂಟೆ ವಿದ್ಯುತ್‌ ಪೂರೈಕೆ ಹಿನ್ನೆಲೆ ಬೆಸ್ಕಾಂ ವಿರುದ್ಧ ರೈತರ ಆಕ್ರೋಶ ವ್ಯಕ್ತಪಡಿಸಿದ್ದು, ಬೇಸಿಗೆ ಹಿನ್ನೆಲೆ ತೋಟಗಳಿಗೆ ನೀರಿನ ಅಗತ್ಯತೆ ಹೆಚ್ಚಾಗಿದೆ. ಹಗಲು ರಾತ್ರಿ ಕರಡಿ ಕಾಟವಿದ್ದು, ರಾತ್ರಿ ಹೊತ್ತು ಕರಡಿ ರೈತರ ಸಿಕ್ಕಲ್ಲಿ ದಾಳಿಗೆ ಮಾಡಬಹುದು. ಹಾಗಾಗಿ ಹಗಲು ವಿದ್ಯುತ್‌ ನೀಡಬೇಕೆಂದು ರೈತರ ಒತ್ತಾಯ.

ಅರಣ್ಯ ಇಲಾಖೆ ನಿರ್ಲಕ್ಷ್ಯ  : ಕಳೆದ 15 ದಿನಗಳಿಂದ ಕರಡಿ ತಾಲೂಕಿನ ಶಿವಗಂಗ, ಮಹದೇವಪುರ ಸೇರಿ ಸುತ್ತಮುತ್ತಲ ಪ್ರದೇಶದಲ್ಲಿ ಸಂಚರಿಸುವ ಮಾಹಿತಿಯನ್ನು ಸ್ಥಳೀಯ ಅರಣ್ಯ ಇಲಾಖೆಗೆ ನೀಡಿದ್ದರೂ, ಕರಡಿ ಪತ್ತೆಗೆ ಅರಣ್ಯ ಇಲಾಖೆ ನಿರ್ಲಕ್ಷ್ಯ ವಹಿಸಿದೆ.

ಎಸ್‌.ವೇದಮೂರ್ತಿ

Advertisement
Advertisement

Udayavani is now on Telegram. Click here to join our channel and stay updated with the latest news.

Next