Advertisement
ನಗರದ ಐಎಂಎ ಸಭಾಂಗಣದಲ್ಲಿ ಸಭೆ ನಡೆಸಿದ ವೈದ್ಯರು, ಬಹಳ ದಿನಗಳಿಂದ ಬಾಕಿ ಉಳಿದಿರುವ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜಿಲ್ಲಾಧಿಕಾರಿ ಮೂಲಕ ಪ್ರಧಾನಿಗೆ ಮನವಿ ಸಲ್ಲಿಸಿದರು. ಕೆಲ ಪಟ್ಟಭದ್ರ ಹಿತಾಸಕ್ತಿಗಳು ಆಧುನಿಕ ಔಷಧ ಮತ್ತು ಲಸಿಕೆಯ ವಿರುದ್ಧ ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿ ಹರಡುತ್ತಿದ್ದಾರೆ.
Related Articles
Advertisement
ಎಲ್ಲ ಹುತಾತ್ಮರನ್ನು ಗುರುತಿಸಲು ಮತ್ತು ಪರಿಶೀಲಿಸಲು ಕೇಂದ್ರೀಯ ಆರೋಗ್ಯ ಗುಪ್ತಚರ ಬ್ಯೂರೋ (ಸಿಬಿಎಚ್‌ಐ) ಮೂಲಕ ವ್ಯವಸ್ಥೆ ರೂಪಿಸಿ, ಖಚಿತಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಕೇಂದ್ರ ಸರ್ಕಾರ ಲಸಿಕೆಗಳನ್ನು ರಾಜ್ಯಗಳು ಮತ್ತು ಖಾಸಗಿ ಆಸ್ಪತ್ರೆಗಳಿಗೆ ತಲುಪಿಸಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಸಾರ್ವತ್ರಿಕ ಉಚಿತ ಲಸಿಕೆಯನ್ನು ಉತ್ತೇಜಿಸಬೇಕು.
ಶ್ವಾಸಕೋಶದ ಫೈಬ್ರೋಸಿಸ್‌ನ ಕೋವಿಡ್-19 ನಂತರದ ತೊಂದರೆಗಳು, ಹೆಚ್ಚಿದ ಥ್ರೋಂಬೋಟಿಕ್ ಘಟನೆಗಳು ಮತ್ತು ಶಿಲೀಂಧ್ರ ಸೋಂಕುಗಳು ಹೆಚ್ಚುತ್ತಿವೆ ಮತ್ತು ಅದಕ್ಕಾಗಿ ನಾವು ಸಿದ್ಧರಾಗಬೇಕಾಗಿದೆ.
ಮ್ಯೂಕಾರ್ಮೈಕೋಸಿಸ್ ಶಿಲೀಂಧ್ರ ಕಾಯಿಲೆಗೆ ಅಗತ್ಯವಿರುವ ಔಷ ಧಗಳು ಸುಲಭವಾಗಿ ಲಭ್ಯವಾಗುತ್ತಿಲ್ಲ. ಬ್ಲಾಕ್ ಫಂಗಸ್‌ಗೆ ಬೇಕಾದ ಔಷ ಧಗಳನ್ನು ಆಮದು ಮಾಡಿಕೊಳ್ಳಲು ಮತ್ತು ಏಕಕಾಲದಲ್ಲಿ ದೇಶೀಯ ಉತ್ಪಾದನೆ ಹೆಚ್ಚಿಸಲು ಪ್ರಧಾನಿಯವರು ತೆಗೆದುಕೊಂಡ ನಿರ್ಧಾರವನ್ನು ಐಎಂಎ ಸ್ವಾಗತಿಸುತ್ತದೆ ಎಂದು ತಿಳಿಸಿದರು.
ಐಎಂಎ ಜಿಲ್ಲಾಧ್ಯಕ್ಷ ಡಾ.ಸಾಲಿ ಮಂಜಪ್ಪ, ಡಾ.ಬಿ.ಎನ್. ರವಿಕುಮಾರ್, ಡಾ. ಪಾಲಾಕ್ಷಪ್ಪ, ಡಾ. ತೋಯಿಜಾಕ್ಷಿಬಾಯಿ, ಡಾ.ಪಿ.ವಿ.ಶ್ರೀಧರಮೂರ್ತಿ, ಡಾ.ರವೀಂದ್ರ, ಡಾ. ರಾಜೇಶ್, ಡಾ.ತಿಮ್ಮಾರೆಡ್ಡಿ, ಡಾ. ಮೋಹನ್‌ಕುಮಾರ್, ಡಾ.ಅನಿಲ್‌ಕುಮಾರ್, ಡಾ.ಲಕ್ಷ್ಮಣ, ಡಾ.ದೀಪಕ್, ಡಾ. ಯೋಗೇಂದ್ರ, ವಿಜಯಕುಮಾರ್, ಶಿವಕುಮಾರ್ ಇತರರಿದ್ದರು.