Advertisement

ಮಾಂಸದಂಗಡಿ ಮುಚ್ಚಿಸಿದ ಪೊಲೀಸರು

05:07 PM Apr 19, 2019 | Naveen |

ಚಿಕ್ಕಜಾಜೂರು: ಇಲ್ಲಿನ ಮತಗಟ್ಟೆಗಳಲ್ಲಿ ಮತದಾನ ಶಾಂತಿಯುತವಾಗಿ ಪೂರ್ಣಗೊಂಡಿತು. ಆದರೆ ಚುನಾವಣಾ ದಿನದಂದು ತೆರೆದಿದ್ದ ಮಾಂಸದಂಗಡಿಯನ್ನು ಪೊಲೀಸರು ಮುಚ್ಚಿಸಿದರು.

Advertisement

ವ್ಯಾಪಾರಿಗಳು, ವೃದ್ಧರು, ವಿಕಲಚೇತನರು ಹಾಗೂ ದೂರದ ಊರಿಗೆ ಹೋಗುವವರು ಆರಂಭದಲ್ಲೇ ಮತ ಚಲಾಯಿಸಿ
ಹೋಗುತ್ತಿದ್ದುದು ಕಂಡು ಬಂದಿತು. ವಿಕಲಚೇತನರಿಗೆ ವಾಹನ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನ ಬಿಸಿಲಿನ ತಾಪಮಾನ ಹೆಚ್ಚಾಗಿದ್ದರಿಂದ ಸಂಜೆ 4 ಗಂಟೆವರೆಗೆ ಮತದಾನ ಮಂದಗತಿಯಲ್ಲಿ ಸಾಗಿತ್ತು.

ಚುನಾವಣೆ ನಡೆಯುವ ದಿನದಂದು ಮತಗಟ್ಟೆ ಕೇಂದ್ರದಿಂದ 100 ಮೀಟರ್‌ ವ್ಯಾಪ್ತಿಯಲ್ಲಿನ ಅಂಗಡಿ ಮುಂಗಟ್ಟುಗಳು, ಹೊಟೆಲ್‌ ಮತ್ತಿತರ ವ್ಯಾಪಾರದ ಮಳಿಗೆಗಳನ್ನು ಮುಚ್ಚಬೇಕೆಂಬ
ನಿಯಮವಿದೆ. ಆದರೆ ಮತಗಟ್ಟೆ ಸಂಖ್ಯೆ 126ರ ಬಳಿ ಮಾಂಸ ಹಾಗೂ ಕೋಳಿ ವ್ಯಾಪಾರಿಗಳು ವ್ಯಾಪಾರ ನಡೆಸುತ್ತಿದ್ದುದು ಕಂಡು ಬಂದಿತು. ಚುನಾವಣಾ ನೀತಿಸಂಹಿತೆ ಮಾಂಸದ ಅಂಗಡಿಗಳಿಗೆ
ಒಂದು, ಇತರೆ ವ್ಯಾಪಾರಿಗಳಿಗೆ ಒಂದು ಎಂಬುದಿದೆಯೇ ಎಂದು ಸಾರ್ವಜನಿಕರು ಹಾಗೂ ಇತರೆ ವ್ಯಾಪಾರಿಗಳು ಪ್ರಶ್ನಿಸಿದರು. ಸ್ಥಳಕ್ಕೆ ಬಂದ ಪೊಲೀಸರು ಮಾಂಸದ ಅಂಗಡಿ ಮುಚ್ಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next