Advertisement

ಚಿರಾಯು: ಮೂತ್ರಪಿಂಡ ಕಸಿ ಯಶಸ್ವಿ ಶಸ್ತ್ರಚಿಕಿತ್ಸೆ

05:14 AM Mar 10, 2019 | Team Udayavani |

ಕಲಬುರಗಿ: ಮೂತ್ರಪಿಂಡ (ಕಿಡ್ನಿ) ಕಸಿ ಶಸ್ತ್ರಚಿಕಿತ್ಸೆಗಾಗಿ ದೂರದ ಬೆಂಗಳೂರು, ಹೈದ್ರಾಬಾದ್‌ಗೆ ಹೋಗಬೇಕಿತ್ತು. ಆದರೆ ಈಗ ಇಂತಹ ಅಪರೂಪದ ವೈದ್ಯಸೇವೆ ಇಲ್ಲಿನ ಚಿರಾಯು ಆಸ್ಪತ್ರೆಯಲ್ಲಿ ಆರಂಭಗೊಂಡಿದ್ದು, ಖ್ಯಾತ ಫೋರ್ಟಿಸ್‌ ಆಸ್ಪತ್ರೆಯ ನುರಿತ ತಜ್ಞರ ನೇತೃತ್ವದಲ್ಲಿ ಯಶಸ್ವಿ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆ ನಿರ್ವಹಿಸಲಾಗಿದೆ.

Advertisement

ಶನಿವಾರ ಚಿರಾಯು ಆಸ್ಪತ್ರೆಯಲ್ಲಿ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸಾ ಘಟಕ ಉದ್ಘಾಟನೆ ನಂತರ ಚಿರಾಯು ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮೂತ್ರಪಿಂಡ ರೋಗಶಾಸ್ತ್ರಜ್ಞ ಡಾ| ಮಂಜುನಾಥ ದೊಶೆಟ್ಟಿ , ಬೆಂಗಳೂರಿನ ಫೋರ್ಟಿಸ್‌ ಆಸ್ಪತ್ರೆ ಮೂತ್ರರೋಗ ಶಾಸ್ತ್ರಜ್ಞ, ರೋಬೊಟಿಕ್‌ ಶಸ್ತ್ರಚಿಕಿತ್ಸೆ ವಿಭಾಗದ ನಿರ್ದೇಶಕರಾದ ಡಾ| ಮೋಹನ ಕೇಶವಮೂರ್ತಿ, ಡಾ| ಆನಂದ ಶಂಕರ, ಡಾ| ಬಸವೇಶ ವೈಜನಾಥ ಪಾಟೀಲ ಜಂಟಿಯಾಗಿ ಸುದ್ದಿಗಾರರೊಂದಿಗೆ ಮಾತನಾಡಿ, 38 ವರ್ಷ ವಯಸ್ಸಿನ ಚಿತ್ತಾಪುರದ ಭೀಮಸೇನ್‌ ಚವ್ಹಾಣ ಎನ್ನುವರಿಗೆ ಅವರ ಪತ್ನಿ ರೇಣುಕಾ ನೀಡಿರುವ ಮೂತ್ರಪಿಂಡವನ್ನೇ ಯಶಸ್ವಿಯಾಗಿ ಕಸಿ ಮಾಡಲಾಗಿದೆ ಎಂದು ವಿವರಿಸಿದರು.
 
ಚಿರಾಯು ಆಸ್ಪತ್ರೆಯ ಡಾ| ಮೋಹನ್‌ ಕೇಶವಮೂರ್ತಿ ನೇತೃತ್ವದಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಯಿತು ಎಂದು ತಿಳಿಸಿದರು. ಪರಿಣಿತ ವೈದ್ಯರಾದ ಡಾ| ಸಂತೋಷ ಸುಬೋಧಿ, ಡಾ| ಬಸವೇಶ ಪಾಟೀಲ, ಡಾ| ಪ್ರವೀಣ, ಡಾ| ದೀಪಕ, ಡಾ| ಕೈಲಾಶ ಬನಾಳೆ, ಡಾ| ತನ್ವೀರ್‌,
ಡಾ| ಸಂತೋಷ ಕಾಮಶೆಟ್ಟಿ, ಡಾ| ತೇಜಶ್ವಿ‌ನಿ, ಡಾ| ಆನಂದ ಶಂಕರ, ಡಾ| ಮನೀಷ್‌ ಮಟ್ಟು, ಕಿಡ್ನಿ ಕಸಿ ಮಾಡಿಸಿಕೊಂಡ ವ್ಯಕ್ತಿ ಸಹೋದರ ಮಾವ ಹರೀಶ ರಾಠೊಡ ಇದ್ದರು. 

ಘಟಕ ಉದ್ಘಾಟನೆ: ಇದಕ್ಕೂ ಮುನ್ನ ಮೂತ್ರಪಿಂಡ ಕಸಿ ಚಿಕಿತ್ಸಾ ಘಟಕವನ್ನು ನೀಡಲಾಯಿತು. ಮಾಜಿ ಸಂಸದ ಡಾ| ಬಸವರಾಜ ಪಾಟೀಲ ಸೇಡಂ ಘಟಕ ಉದ್ಘಾಟಿಸಿದರು. ನಂತರ ಚಿರಾಯು ಆಸ್ಪತ್ರೆಗೆ ಅಗತ್ಯವಾದ ಎರಡೂಮೂರು ಎಕರೆ ಭೂಮಿ ದೊರಕಿಸಲು ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ಪ್ರಕಟಿಸಿದರು. ಹೃದಯ ತಜ್ಞ ಹಾಗೂ ಶರಣಬಸವ ವಿವಿ ಕುಲಪತಿ ಡಾ| ನಿರಂಜನ ನಿಷ್ಠಿ, ಮಾಜಿ ಸಚಿವ ವೈಜನಾಥ ಪಾಟೀಲ ಇದ್ದರು. 

ಬಡ ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ರೋಗಿಗಳು ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೆಂದು 5 ಲಕ್ಷ ರೂ.ನಷ್ಟು ಖರ್ಚು
ಮಾಡುವುದು ಕಷ್ಟದಾಯಕವಾಗುತ್ತದೆ. ಇಂತಹವರಿಗೆ ನೆರವಾಗುವ ನಿಟ್ಟಿನಲ್ಲಿ ಜೀವನಾಧಾರ ಫೌಂಡೇಷನ್‌ ಸ್ಥಾಪಿಸಲಾಗಿದೆ. ಫೌಂಡೇಷನ್‌ ದಿಂದ ಈಗಾಗಲೇ 15 ಲಕ್ಷ ರೂ.ಗಳಷ್ಟು ಆರ್ಥಿಕ ಸಹಾಯ ಕಲ್ಪಿಸಲಾಗಿದೆ. 
 ಡಾ| ಮಂಜುನಾಥ ದೊಶೆಟ್ಟಿ, ಚಿರಾಯು ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next