ಪಾಟ್ನಾ: ಬಿಹಾರ ರಾಜಕೀಯದಲ್ಲಿ ಭಾರೀ ಬೆಳವಣಿಗೆಗಳು ನಡೆಯುತ್ತಿದೆ. ಎಲ್ ಜೆಪಿ ಮುಖ್ಯಸ್ಥ ಚಿರಾಗ್ ಪಾಸ್ವಾನ್ ವಿರುದ್ದ ಅವರದೇ ಪಕ್ಷದ ಸಂಸದರು ತಿರುಗಿ ಬಿದ್ದ ಬಳಿಕ ಮತ್ತೊಮ್ಮೆ ನಿತೀಶ್ ವರ್ಸಸ್ ಚಿರಾಗ್ ವೇದಿಕೆ ಸೃಷ್ಟಿಯಾಗಿದೆ. ಈ ಮಧ್ಯೆ ಚಿರಾಗ್ ಪಾಸ್ವಾನ್ ಬಿಜೆಪಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತಿದ್ದು, ಹಿಂದೆ ನಿತೀಶ್ ಕುಮಾರ್ ಎನ್ ಡಿಎ ಮೈತ್ರಿಯಿಂದ ಹೊರನಡೆದಾಗ ನಾವು ನಿಮ್ಮ ಜೊತೆಯಿದ್ದೆವು ಎಂದಿದ್ದಾರೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು “ದಲಿತ ವಿರೋಧಿ ಮನಸ್ಥಿತಿ” ಮತ್ತು “ತಮ್ಮ ಪಕ್ಷದೊಳಗೆ ದಲಿತರನ್ನು ದುರುಪಯೋಗಪಡಿಸಿಕೊಂಡಿದ್ದಾರೆ” ಎಂದು ಚಿರಾಗ್ ಪಾಸ್ವಾನ್ ಆರೋಪಿಸಿದ್ದಾರೆ.
ಇದನ್ನೂ ಓದಿ:ಹೆಚ್ಚು ಮಕ್ಕಳಿರುವ ಪೋಷಕರಿಗೆ ಒಂದು ಲಕ್ಷ ರೂ. ಬಹುಮಾನ: ಮಿಜೋರಾಂ ಸಚಿವ
ಎನ್‌ಡಿಟಿವಿ ಜೊತೆ ಮಾತನಾಡಿದ ಚಿರಾಗ್, ಬಿಜೆಪಿಯ ಉನ್ನತ ನಾಯಕರ ಅರಿವಿಲ್ಲದೆ ಈ ಎಲ್ ಜೆಪಿ ಒಳಗಿನ ದಂಗೆ ನಡೆದಿದೆ ಎಂದು ನಂಬುವುದು ಕಷ್ಟ. ಅದರಲ್ಲೂ ವಿಶೇಷವಾಗಿ ತಮ್ಮ ಚಿಕ್ಕಪ್ಪ, ಸದ್ಯ ಲೋಕಸಭೆಯಲ್ಲಿ ಎಲ್ ಜೆಪಿ ನಾಯಕ ಪಶುಪತಿ ಪರಾಸ್ ಅವರು ಮುಂದಿನ ದಿನಗಳಲ್ಲಿ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಬಹುದು ಎಂದು ಬಿಜೆಪಿ ವಿರುದ್ಧ ಚಿರಾಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಮ್ಮ ಮೂಲ ಮತಗಳನ್ನು ವಿಭಜಿಸುವ ಮೂಲಕ ಪಕ್ಷವನ್ನು ಒಡೆಯಲು ನಿತೀಶ್ ಕುಮಾರ್ ಪ್ರಯತ್ನಿಸುತ್ತಿದ್ದಾರೆ ಎಂದು ಪಾಸ್ವಾನ್ ಆರೋಪಿಸಿದ್ದಾರೆ. “ನೀವು ರಾಜಕೀಯ ಪ್ರಯಾಣವನ್ನು ನೋಡಿದರೆ ಅದು ಸ್ಪಷ್ಟವಾಗಿ ತಿಳಿಯುತ್ತದೆ. ಫೆಬ್ರವರಿ 2005 ರಿಂದ ಅವರು ನಮ್ಮ ಟಿಕೆಟ್‌ನಲ್ಲಿ 27 ಮಂದಿ ಆಯ್ಕೆಯಾದ ನಂತರ ಲೋಕ ಜನಶಕ್ತಿ ಪಕ್ಷವನ್ನು ವಿಭಜಿಸುತ್ತಿದ್ದಾರೆ” ಎಂದು ಚಿರಾಗ್ ಪಾಸ್ವಾನ್ ಬಿಹಾರ ಸಿಎಂ ವಿರುದ್ಧ ಕಿಡಿಕಾರಿದ್ದಾರೆ