ಚಿತ್ರದುರ್ಗ: ಮದ್ಯವರ್ಜನ ಶಿಬಿರಗಳಮೂಲಕ ದುಶ್ಚಟಗಳಿಗೆ ತುತ್ತಾದವರನ್ನುಹೊರತರುವುದು ಸೇರಿದಂತೆ ದೇವಸ್ಥಾನಗಳಜೀರ್ಣೋದ್ಧಾರಕ್ಕೆ ಹಣಕಾಸಿನ ನೆರವು, ಶಾಲೆಗಳಿಗೆಪೀಠೊಪಕರಣಗಳನ್ನು ನೀಡಲಾಗುತ್ತಿದೆ. ಇದಕ್ಕೆಲ್ಲಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾ ಧಿಕಾರಿ ಡಾ|ವಿರೇಂದ್ರ ಹೆಗ್ಗಡೆ ಅವರ ಮಾನವೀಯ ಕಳಕಳಿಯೇಕಾರಣ ಎಂದು ಅಖೀಲ ಕರ್ನಾಟಕ ಜನಜಾಗೃತಿವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್‌ವಿನ್ಸೆಂಟ್ ಪಾಯಸ್ ಹೇಳಿದರು.
ನಗರದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ಕಚೇರಿಯಲ್ಲಿ ನಡೆದ ಜನಜಾಗೃತಿಸಭೆ ಹಾಗೂ ಬಿ.ಸಿ. ಟ್ರಸ್ಟ್ ಕಾರ್ಯಕ್ರಮಗಳಅವಲೋಕನ ಸಭೆಯಲ್ಲಿ ಅವರು ಮಾತನಾಡಿದರು.ಶ್ರೀಕ್ಷೇತ್ರ ಧರ್ಮಸ್ಥಳದ ಮೂಲಕ ನೂರಾರುಜನಸೇವಾ ಕಾರ್ಯಗಳನ್ನು ಮಾಡಲಾಗುತ್ತಿದೆ.
ವಿಶೇಷವಾಗಿ ಜನ ಜಾಗೃತಿ ಕಾರ್ಯಕ್ರಮಗಳಿಗೆಒತ್ತು ನೀಡುತ್ತಿದ್ದು, ಮದ್ಯವರ್ಜನ ಶಿಬಿರಗಳಮೂಲಕ ಅನೇಕ ಕುಟುಂಬಗಳಲ್ಲಿ ಸಂತೋಷಮೂಡಿಸಲಾಗಿದೆ ಎಂದರು.ಚಿತ್ರದುರ್ಗ ಪ್ರಾದೇಶಿಕ ನಿರ್ದೇಶಕಿ ಬಿ. ಗೀತಾಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಯ ಆಶಯಗಳನ್ನು ಈಡೇರಿಸುವನಿಟ್ಟಿನಲ್ಲಿ ಜನಜಾಗೃತಿ ವೇದಿಕೆ ಆಸಕ್ತಿಯಿಂದಕೆಲಸ ಮಾಡಬೇಕೆಂದರು.
ಚಿತ್ರದುರ್ಗದ ಜಿಲ್ಲಾನಿರ್ದೇಶಕ ದಿನೇಶ್ ಪೂಜಾರಿ ಮಾತನಾಡಿ, ಜಿಲ್ಲೆಯ6 ತಾಲೂಕುಗಳಲ್ಲಿ ಮದ್ಯವರ್ಜನ ಶಿಬಿರಗಳನ್ನುನಡೆಸಿ ಮದ್ಯಪಾನಕ್ಕೆ ದಾಸರಾಗಿರುವವರನ್ನುದುಶ್ಚಟದಿಂದ ಮುಕ್ತಗೊಳಿಸಲಾಗುವುದು.ಪ್ರೌಢಶಾಲೆ ಮತ್ತು ಪದವಿ ಕಾಲೇಜುಗಳಲ್ಲಿ ಸ್ವಾಸ್ಥÂಸಂಕಲ್ಪ ಕಾರ್ಯಕ್ರಮ ನಡೆಸಲಾಗುವುದು.ಕಾರ್ಯಕ್ರಮಗಳು ಯಶಸ್ವಿಯಾಗಲು ಜಿಲ್ಲಾಜನಜಾಗೃತಿ ವೇದಿಕೆ ಸದಸ್ಯರು ಕೈ ಜೋಡಿಸುವಂತೆಮನವಿ ಮಾಡಿದರು.