ನವ ದೆಹಲಿ : ವಿಶ್ವ ಡಿಜಿಟಲ್ ವಹಿವಾಟಿನತ್ತ ಸಂಪೂರ್ಣವಾಗಿ ಮುಖ ಮಾಡುತ್ತಿದೆ. ಆನ್ ಲೈನ್ ವ್ಯವಹಾರವೇ ಈಗ ಮೇಲಾಗಿದೆ. ಈ ಆನ್ ಲೈನ್ ವ್ಯವಹಾರಗಳೇ ಈಗಿನ ದಿನಗಳಲ್ಲಿ ಹೆಚ್ಚಿನ ಪ್ರಾಶಸ್ಯ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಚಿಪ್ ಗಳ ಅಭಾವ ಕಂಡುಬಂದಿದೆ.
ಚಿಪ್ ಗಳ ಕೊರತೆಯ ಕಾರಣದಿಂದಾಗಿ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಗಳ ಮೇಲೂ ಕೂಡ ಪರಿಣಾಮ ಬೀರಬಹುದು ಎಂದು ಸ್ಮಾರ್ಟ್ ಪೇಮೆಂಟ್ ಅಸೋಸಿಯೇಷನ್ ಎಚ್ಚರಿಕೆ ಕೊಟ್ಟಿದೆ.
ನಗದು ರಹಿತ ಆನ್ ಲೈನ್ ವ್ಯವಹಾರ ಮಾಡುವವರು ಶೇಕಡಾ 90ರಷ್ಟು ಡೆಬಿಟ್, ಕ್ರೆಡಿಟ್ ಕಾರ್ಡ್‌ಗಳನ್ನು ಬಳಕೆ ಮಾಡುತ್ತಾರೆ. ಆನ್ ಲೈನ್ ಪೇಮೆಂಟ್ ಗೆ ಕಾರ್ಡ್‌ಗಳು ನೇರವಾಗಿ ಅಥವಾ ಪರೋಕ್ಷವಾಗಿ ಶೇಕಡಾ 40-60 ರಷ್ಟು ಸಹಾಯ ಮಾಡುತ್ತವೆ.
ಇದನ್ನೂ ಓದಿ : ದುಬೈ ಗೆ ಹಾರಿದ ಸಾಂಗ್ಲಿ ಜಿಲ್ಲೆಯ ತಡಾಸರ್ ರೈತರು ಬೆಳೆದ ಡ್ರ್ಯಾಗನ್ ಹಣ್ಣುಗಳು
ಬ್ಯಾಂಕ್ ಖಾತೆ ತೆರೆದವರಿಗೆ ಕನಿಷ್ಠ 1 ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬೇಕು. ಪೇಮೆಂಟ್ ಕಾರ್ಡ್ ನ ಅವಧಿ ಮುಗಿದಿದ್ದರೆ ಹೊಸ ಕಾರ್ಡ್‌ಗಳು ಬೇಕಾಗುತ್ತವೆ. ಚಿಪ್ ಮುರಿದಿದ್ದರೆ ಬದಲಿ ಕಾರ್ಡ್ ಬೇಕಾಗುತ್ತದೆ. ಹೀಗಾಗಿ ಚಿಪ್ ಗಳ ಬೇಡಿಕೆ ಏರಿಕೆಯಾಗಿರುವ ಕಾರಣದಿಂದಾಗಿ ಚಿಪ್ ಗಳ ಕೊರತೆ ಇದೆ ಎಂದು ತಿಳಿಸಿದೆ.
ಇನ್ನು, ಈ ಕುರಿತಾಗಿ ರಾಷ್ಟ್ರೀಯ ಸುದ್ದಿ ಸಂಸ್ಥೆ ಎನ್ ಡಿ ಟಿ ವಿ, ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಚಿಪ್ ತಯಾರು ಮಾಡುವ ಕಂಪೆನಿಗಳು ತೆರೆದಿರಲಿಲ್ಲ. ಕೆಲವು ಕಂಪೆನಿಗಳು ತೆರೆದಿದ್ದರೂ ನೌಕರರ ಅಭಾವ ಕಾಣಿಸಿಕೊಳ್ಳುತ್ತಿದೆ. ಹಾಗಾಗಿ, ಸದ್ಯಕ್ಕೆ ಬೇಕಾದಷ್ಟು ಚಿಪ್ ಗಳು ಲಭ್ಯವಿಲ್ಲ ಎಂದು ವರದಿ ಮಾಡಿದೆ.
ಒಟ್ಟು ವಿಶ್ವದಾದ್ಯಂತ ಪ್ರತಿವರ್ಷ 300 ಕೋಟಿ ಇಎಂವಿ ಮೂಲದ ಪೇಮೆಂಟ್ ಕಾರ್ಡ್ ಗಳನ್ನು ತಯಾರಿಸಲಾಗುತ್ತದೆ.
ಇದನ್ನೂ ಓದಿ : ಚಂದನವನಕ್ಕೆ ಬಾಲಿವುಡ್ ನಟಿ:ವಿಕ್ರಾಂತ್ ರೋಣನ ಜೊತೆ ಬಿಟೌನ್ ಬೆಡಗಿ ಮಸ್ತ್ ಸ್ಟೆಪ್