ಚಿಂತಾಮಣಿ: ನಗರದ ಟೊಮೆಟೋ ಮಾರುಕಟ್ಟೆಯಲ್ಲಿ ಗುತ್ತಿಗೆ ದಾರನ ನಿರ್ಲಕ್ಷ್ಯತೆಯಿಂದ ಆಸ್ವತ್ಛತೆ ಎಂದು ಕಾಣುತ್ತಿದ್ದು, ಕೊಳಚೆ ನೀರು ನಿಂತಲ್ಲೇ ನಿಂತು ಸೊಳ್ಳೆಗಳ ಉತ್ಪತ್ತಿಯ ತಾಣವಾಗಿದೆ.
ಇನ್ನೂ ಟೊಮೆಟೋ ಮಾರುಕಟ್ಟೆಯಲ್ಲಿ ಸ್ವಚ್ಛತೆ ಇಲ್ಲದೆ ರೈತರು ಬಿಸಾಡಿದ ಟೊಮೆಟೋ ಹಣ್ಣುಗಳು ಕೊಳತೆ ಗಬ್ಬುನಾತ ಬೀರುತ್ತಿರುವುದರಿಂದ ರೈತರು, ಕೂಲಿಕಾರ್ಮಿಕ ಹಮಾಲರು ಹಾಗೂ ವ್ಯಾಪಾರ ಸ್ಥರಿಗೆ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ.
ಅವಿಭಜಿತ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿಯೇ ಅತಿದೊಡ್ಡ ಮಾರುಕಟ್ಟೆ ಚಿಂತಾಮಣಿಯ ಎಪಿಎಂಸಿ ಟೊಮೆಟೋ ಮಾರುಕಟ್ಟೆಯಾಗಿದ್ದು, ಈ ಮಾರುಕಟ್ಟೆಗೆ ಅಂಧ್ರ, ತಮಿಳುನಾಡು, ಮಹಾರಾಷ್ಟ್ರ ಮತಿತ್ತರ ಕಡೆಗಳಿಂದ ವ್ಯಾಪಾರಸ್ಥರು ಹೆಚ್ಚಾಗಿ ಆಗಮಿಸುತ್ತಿರುವುದಲ್ಲದೇ, ಚಿಂತಾಮಣಿ ತಾಲೂಕು ಸೇರಿದಂತೆ ಮತಿತ್ತರ ತಾಲೂಕುಗಳಿಂದ ರೈತರು ತಾವು ಬೆಳೆದ ಟೊಮೆಟೋ ಹಣ್ಣುಗಳನ್ನು ಮಾರಾಟ ಮಾಡಲು ಮಾರುಕಟ್ಟೆಗೆ ಬರುತ್ತಾರೆ. ಇಂತಹ ಮಾರುಕಟ್ಟೆಯಲ್ಲಿ ಗುತ್ತಿಗೆದಾರನ ನಿರ್ಲಕ್ಷ್ಯತನದಿಂದ ನೈರ್ಮಲ್ಯ ಎದ್ದು ಕಾಣುತ್ತಿ ರುವು ದಲ್ಲದೆ ಮಳೆ ನೀರು ನಿಂತಲ್ಲಿಯೇ ನಿಂತು ಕೆಸರು ಗದ್ದೆಯಂತಾಗಿ ಸೊಳ್ಳೆಗಳ ಉತ್ಪತಿಯ ತಾಣವಾಗಿರುವುದು ಒಂದಡೇಯಾದರೇ ಮತ್ತೂಂದಡೆ, ಇತ್ತಿಚಿಗೆ ಟೊಮೆಟೋ ಮಾರುಕಟ್ಟೆಯಲ್ಲಿ ಸ್ವಚ್ಛತೆ ಮಾಡುವ ಗುತ್ತಿಗೆ ದಾರನನ್ನು ಬದಲಾವಣೆ ಮಾಡಿ ಸ್ವತ್ಛತೆ ಮಾಡಲು ಬೇರೆಯವರಿಗೆ ಟೆಂಡರ್ ನೀಡಲಾಗಿದೆ.
ಮಾರುಕಟ್ಟೆಯಲ್ಲಿ ಕೊಳತೆ ಟೊಮೆಟೋ ಹಣ್ಣುಗಳು ಗಬ್ಬುನಾತ ಬೀರುತ್ತಿರುವುದರಿಂದ ರೈತರಿಗೆ ಹಾಗೂ ವ್ಯಾಪಾರಸ್ಥರಿಗೆ ಸಾಂಕ್ರಾ ಮಿಕ ರೋಗಗಳು ಹರಡುವ ಭೀತಿಯಲ್ಲಿದ್ದು, ಕೂಡಲೇ ಸಂಬಂಧ ಪಟ್ಟ ಎಪಿಎಂಸಿ ಅಧಿಕಾರಿಗಳು ಮಳೆ ನೀರು ಸರಾಗವಾಗಿ ಹರಿಯಲು ಚರಂಡೀ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಕೊಳತೆ ಟೊಮೆಟೋ ಹಣ್ಣು ಗಳನ್ನು ತೆಗೆದು ಸ್ವತ್ಛಗೊಳಿಸಿ ಮಾರುಕಟ್ಟೆಯಲ್ಲಿ ರೈತರು ನೆಮ್ಮಂದಿ ಯಾಗಿ ಓಡಾಡಲು ಅವಕಾಶ ಕಲ್ಪಿಸುವಂತೆ ರೈತರು, ಹಮಾ ಲರು ಹಾಗೂ ಟೊಮೆಟೋ ವ್ಯಾಪಾರಸ್ಥರು ಒತ್ತಾಯಿಸಿದ್ದಾರೆ.