ಚಿಂತಾಮಣಿ: (ಚಿಕ್ಕಬಳ್ಳಾಪುರ) ಭಜನೆ ಕಾರ್ಯಕ್ಕೆ ತೆರಳುತ್ತಿದ್ದ ವೇಳೆ ಕೆರೆ ಏರಿಯಿಂದ ಬೊಲೇರಾ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಕೆಳಗೆ ಉರುಳಿ ಬಿದ್ದಿರುವ ಘಟನೆ ಮಂಗಳವಾರ ತಾಲೂಕಿನ ಕೆಂಚಾರ ಹಳ್ಳಿ ಕೆರೆ ಏರಿ ಬಳಿ ಸಂಜೆ ಸುಮಾರು 7 ಗಂಟೆಯಲ್ಲಿ ನಡೆದಿದೆ.
ಅಪಘಾತದಲ್ಲಿ ಸಿದ್ದೇಪಲ್ಲಿ ಗ್ರಾಮದ 57 ವರ್ಷದ ಶಂಕರಮ್ಮ ಎಂಬುವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೆ ಮೃತಪಟ್ಟಿದ್ದು ಸುಮಾರು 13ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಬೊಲೇರಾ ವಾಹನ ಕಟ್ಟೆ ಏರಿಯಿಂದ ಸುಮಾರು 100 ಅಡಿ ಅಳಕ್ಕೆ ಉರುಳಿ ಬಿದ್ದಿದೆ.
ಘಟನೆಯಲ್ಲಿ ಹಲವರ ಪರಿಸ್ಥಿತಿ ಗಂಭೀರವಾಗಿದ್ದು ಕೂಡಲೇ ಗಾಯಳುಗಳನ್ನು ಕೆಂಚಾರ ಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ ನಂತರ ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ತಂದು ದಾಖಲು ಮಾಡಲಾಗಿದ್ದು ಗಂಭೀರವಾಗಿ ಗಾಯಗೊಂಡಿರುವ ಹಲವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ಹಾಗೂ ಕೋಲಾರ ಆಸ್ಪತ್ರೆಗಳಿಗೆ ರವಾನಿಸಲಾಗಿದೆ.
ಚೇಳೂರಿನಲ್ಲಿ ರಾತ್ರಿ ನಡೆಯಬೇಕಿದ್ದ ಭಜನೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಿದ್ದೇಪಲ್ಲಿ ಗ್ರಾಮದಿಂದ ಕೆಂಚಾರ ಹಳ್ಳಿ ಮಾರ್ಗವಾಗಿ ತೆರಳುವಾಗ ಕೆಂಚಾರ ಹಳ್ಳಿ ಕಟ್ಟೆ ಏರಿ ಮೇಲೆ ಬೋಲೇರಾ ವಾಹನ ಚಾಲಕನ ನಿಯಂತ್ರಣ ತಪ್ಪಿ ಕೆಳಗೆ ಉರುಳಿ ಬಿದ್ದಿದೆ. ಅಪಘಾತಕ್ಕೆ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂದು ತಿಳಿದು ಬಂದಿದೆ. ಗಾಯಳುಗಳ ವಿವರ ಇನ್ನಷ್ಟು ತಿಳಿಯಬೇಕಿದೆ.
ಇದನ್ನೂ ಓದಿ: ಶಿವಮೊಗ್ಗ: ಮಳೆಗಾಗಿ ಕಪಿಲೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸುತ್ತಿದ್ದ ವೇಳೆ ಸುರಿದ ಮಳೆ