Advertisement
ತವಾಂಗ್ ಭಾರತದ್ದಾದರೂ ಅದು ತನ್ನದು ಎಂದು ಚೀನ ಹೇಳಿಕೊಳ್ಳುತ್ತಿದೆ. ತವಾಂಗ್‌ನಲ್ಲಿ ಚೀನ ಕೈಗೊಳ್ಳಬಹುದಾದ ದುಸ್ಸಾಹಸಕ್ಕೆ ತಕ್ಕ ಪ್ರತ್ಯುತ್ತರ ನೀಡಲು ಕೇಂದ್ರ ಸರಕಾರ ಯಾವ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂಬ ಬಗ್ಗೆ ಮಾಹಿತಿ ನೀಡಲು ಆಯ್ದ ಪತ್ರಕರ್ತರನ್ನು ಕೆಲವು ಮುಂಚೂಣಿ ಸ್ಥಳಗಳಿಗೆ ಕರೆದೊಯ್ಯಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಲೆ| ಜ| ಮನೋಜ್ ಪಾಂಡೆ, ಚೀನದ ದಾಳಿಯನ್ನು ಎದುರಿಸಲು ಕೈಗೊಂಡಿರುವ ಹಲವು ಹಂತಗಳ ಸಿದ್ಧತೆಯ ಬಗ್ಗೆ ಸಮಗ್ರ ಮಾಹಿತಿ ನೀಡಿದ್ದಾರೆ. ಪರ್ವತ ಪ್ರದೇಶಗಳಲ್ಲಿ ಹೋರಾಟ ನಡೆಸುವುದರಲ್ಲಿ ಪರಿಣತಿ ಪಡೆದಿರುವ ಯೋಧರ ತಂಡವನ್ನು ಪೂರ್ಣ ಪ್ರಮಾಣದಲ್ಲಿ ಕಣಕ್ಕೆ ಇಳಿಸಲಾಗಿದೆ ಎಂದು ಪಾಂಡೆ ಹೇಳಿದ್ದಾರೆ.
ದೇಶದ ಸೇನೆಗೆ ಅನುಕೂಲವಾಗುವಂತೆ ತವಾಂಗ್‌ನಲ್ಲಿ 700 ಕೋ. ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಸೇಲಾ ಸುರಂಗ ಮಾರ್ಗ ಮುಂದಿನ ಜೂನ್‌ಗೆ ಸಿದ್ಧಗೊಳ್ಳಲಿದೆ. ಇದರಿಂದ ತವಾಂಗ್ ಗಡಿಗೆ ಕ್ಷಿಪ್ರವಾಗಿ ಸೇನೆಯನ್ನು ರವಾನಿಸಲು ಸಾಧ್ಯವಾಗಲಿದೆ.
Related Articles
ಭೂಸೇನೆಯಲ್ಲಿ ಹೊಸದಾಗಿ ರಚಿಸಲಾಗಿರುವ “ಏವಿಯೇಶನ್ ಬ್ರಿಗೇಡ್’ ತವಾಂಗ್‌ನಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದೆ. ಏವಿಯೇಶನ್ ಬ್ರಿಗೇಡ್‌ಗೆ ಚಿನೂಕ್ ಹೆಲಿಕಾಪ್ಟರ್ ಒದಗಿಸಲಾಗಿದೆ. ಇದು ಸಂಭಾವ್ಯ ಹೋರಾಟದಲ್ಲಿ ಮಹತ್ವದ ತಿರುವು ಅಥವಾ ಗೇಮ್ ಚೇಂಜರ್ ಆಗಲಿದೆ ಎಂದು ಪೈಲೆಟ್ ಮೇ| ಕಾರ್ತಿಕ್ ಹೇಳಿದ್ದಾರೆ.
Advertisement