Advertisement

ಮಕ್ಕಳ ದಸರಾದಲ್ಲಿ ಚಿಣ್ಣರ ಮಾದರಿ ಪ್ರದರ್ಶನ

09:32 PM Oct 01, 2019 | Team Udayavani |

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿ ವತಿಯಿಂದ ನಗರದ ಜಗನ್ಮೋಹನ ಅರಮನೆಯಲ್ಲಿ ಆಯೋಜಿಸಿದ್ದ ಮಕ್ಕಳ ದಸರಾ ಕಾರ್ಯಕ್ರಮ ನಡೆಯಿತು. ಜಿಲ್ಲೆಯ ವಿವಿಧ ಶಾಲೆಗಳ ವಿದ್ಯಾರ್ಥಿಗಳು ತಾವು ತಯಾರಿಸಿದ ವಸ್ತುಗಳು ಹಾಗೂ ಶೈಕ್ಷಣಿಕ ಮಾದರಿಗಳನ್ನು ಪ್ರದರ್ಶನಕ್ಕಿರಿಸಿದ್ದರು.

Advertisement

ಮಕ್ಕಳ ದಸರಾ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ , ಮಕ್ಕಳು ರಾಷ್ಟ್ರದ ಸಂಪತ್ತಾಗಿದ್ದು, ಮಕ್ಕಳಲ್ಲಿರುವ ಪ್ರತಿಭೆ ಅನಾವರಣಕ್ಕೆ ಶಿಕ್ಷಕರು ಯಾವುದೇ ತಾರತಮ್ಯ ತೋರದೇ ವೇದಿಕೆ ಕಲ್ಪಿಸಬೇಕು ಎಂದರು. ನಾಡಹಬ್ಬ ದಸರಾದಲ್ಲಿ ಏರ್ಪಡಿಸಿರುವ ಮಕ್ಕಳ ದಸರಾ ಕಾರ್ಯಕ್ರಮವು ಮಕ್ಕಳ ಪ್ರತಿಭೆ ಪ್ರದರ್ಶನಕ್ಕೆ ಉತ್ತಮ ವೇದಿಕೆಯಾಗಲಿದೆ.

ವೇದಿಕೆಯನ್ನು ವಿದ್ಯಾರ್ಥಿಗಲು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು. ಹುಣಸೂರು ಮತ್ತು ಪಿರಿಯಾಪಟ್ಟಣ ತಾಲೂಕಿನಲ್ಲಿ ಎಸ್ಸೆಸ್ಸೆಲ್ಸಿ ಕಲಿಯುತ್ತಿರುವ ಕಡು ಬಡತನದ ಮಕ್ಕಳನ್ನು ಗುರುತಿಸಿ ಅವರಿಗೆ ವಿಶೇಷ ಶೈಕ್ಷಣಿಕ ಸೌಲಭ್ಯ ಒದಗಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.

ದೀಪಾಲಂಕಾರ: ದಸರಾ ಮಹೋತ್ಸವ ಅರಮನೆ ಮತ್ತು ಸುತ್ತಲಿನ ಸ್ಥಳಗಳಿಗೆ ಸೀಮಿತವಾಗಬಾರದು. ಜಗನ್ಮೋಹನ ಅರಮನೆ ಮತ್ತು ಮೈಸೂರು ವಿವಿ ಕ್ರಾಫ‌ರ್ಡ್‌ ಭವನ ಕಟ್ಟಡಗಳಿಗೂ ದೀಪಲಂಕಾರ ವ್ಯವಸ್ಥೆ ಮಾಡಬೇಕು. ಜಗನ್ಮೋಹನ ಅರಮನೆ ಬಳಿ ಡಾಂಬರ್‌ ಹಾಕುವ ಕೆಲಸ ಆರಂಭಿಸಿ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಝೀ ವಾಹಿನಿಯ ಸರಿಗಮಪ ಖ್ಯಾತಿಯ ಬಾಲಪ್ರತಿಭೆಗಳಾದ ಹಾವೇರಿಯ ರುಬೀನ, ರಾಯಚೂರಿನ ಸಂಗೀತ ಹಾಗೂ ಮೈಸೂರಿನ ನಯನ ನಾಗರಾಜ್‌ ತಮ್ಮ ಸುಮಧುರ ಕಂಠದಿಂದ ಹಾಡುಗಳನ್ನು ಹಾಡಿದರು. ಬಳಿಕ ಮೂವರಿಗೂ ಸನ್ಮಾನಿಸಲಾಯಿತು.

Advertisement

ಕಾರ್ಯಕ್ರಮದಲ್ಲಿ ಶಾಸಕ ಎಸ್‌.ಎ.ರಾಮದಾಸ್‌, ಎಲ್‌. ನಾಗೇಂದ್ರ, ಮೇಯರ್‌ ಪುಷ್ಪಲತಾ ಜಗನ್ನಾಥ್‌, ಜಿಪಂ ಅಧ್ಯಕ್ಷೆ ಪರಿಮಳ ಶ್ಯಾಂ, ಸದಸ್ಯರಾದ ಮಂಗಳ ಸೋಮಶೇಖರ್‌, ಚಂದ್ರಿಕ ಸುರೇಶ್‌, ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿ ಉಪವಿಶೇಷಾಧಿಕಾರಿ ಡಾ.ಪ್ರೇಮಕುಮಾರ್‌, ಅಧ್ಯಕ್ಷೆ ವಿದ್ಯಾ ಅರಸ್‌, ಕಾರ್ಯಾಧ್ಯಕ್ಷೆ ಕೆ. ಪದ್ಮ, ಕಾರ್ಯದರ್ಶಿ ಡಾ. ಪಾಂಡುರಂಗ ಇದ್ದರು.

ಗ್ರಾಮೀಣ ಮಕ್ಕಳ ದಸರಾ: ಗ್ರಾಮೀಣ ಪ್ರದೇಶದ ಮಕ್ಕಳು ದಸರಾ ವೀಕ್ಷಣೆಗಾಗಿ ಇದೇ ಮೊದಲ ಬಾರಿಗೆ ಗ್ರಾಮೀಣ ಮಕ್ಕಳ ದಸರಾ ದರ್ಶನಕ್ಕೆ ಉಸ್ತುವಾರಿ ಸಚಿವ ವಿ. ಸೋಮಣ್ಣ ಚಾಲನೆ ನೀಡಿದರು. ಮಕ್ಕಳ ದಸರಾದಲ್ಲಿ ಜಿಲ್ಲೆಯ ನಾನಾ ಶಾಲೆಗಳ ವಿದ್ಯಾರ್ಥಿಗಳು ತಾವು ತಯಾರಿಸಿದ ವಸ್ತುಗಳು ಹಾಗೂ ಶೈಕ್ಷಣಿಕ ಮಾದರಿಗಳನ್ನು ಪ್ರದರ್ಶನಕ್ಕಿರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next