Advertisement

“ಉದಯವಾಣಿ’ಯಲ್ಲಿ ಚಿಣ್ಣರ ಕಲರವ

04:41 PM Dec 03, 2017 | Team Udayavani |

ಉಡುಪಿ: ಮಕ್ಕಳೆಂದರೆ ಸಹಜ ತುಂಟಾಟ, ನಗು, ಆಕರ್ಷಣೆ. ದೊಡ್ಡವರಿಗೆ ಮುದ್ದು ಮಾಡುವ ಮನಸ್ಸು. ಖುಷಿಯ ಹೊತ್ತು. ಇಂತಹ ಕ್ಷಣಕ್ಕೆ ಕಾರಣವಾಗಿದ್ದು, ಉದಯವಾಣಿಯ ಮಣಿಪಾಲ ಕಚೇರಿ. ಶನಿವಾರ “ಉದಯವಾಣಿ ಮಕ್ಕಳ ಫೋಟೋ ಸ್ಪರ್ಧೆ’ಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ನಡೆದಿದ್ದು ವಿಜೇತ 8 ಪುಟಾಣಿಗಳು ಭಾಗಿಯಾಗಿದ್ದರು. 18 ಸಾವಿರ ಪುಟಾಣಿಗಳಲ್ಲಿ 8 ಮಂದಿ ಆಯ್ಕೆಯಾಗಿದ್ದು, ಪತ್ರಿಕಾ ಕಚೇರಿ ಮಕ್ಕಳ ಕಲರವಕ್ಕೆ ಸಾಕ್ಷಿಯಾಯಿತು.

Advertisement

ದಾವಣಗೆರೆಯ ಅಹನಾ ಜೈನ್‌ ಪ್ರಥಮ ಸ್ಥಾನಿಯಾಗಿದ್ದು, ಹೆತ್ತವ ರೊಂದಿಗೆ ಬಹುಮಾನ ಸ್ವೀಕರಿಸಿದಳು. ಕುಂದಾಪುರದ ಅದ್ವಿಕ್‌ ಐತಾಳ್‌ ದ್ವಿತೀಯ ಸ್ಥಾನಿಯಾಗಿದ್ದು, ತೃತೀಯ ಸ್ಥಾನವನ್ನು 6 ಚಿಣ್ಣರು ಪಡೆದಿದ್ದರು. ಇವರಲ್ಲಿ ಅಭಿಜ್ಞಾ ಕಾರ್ಕಳ, ಸೃಷ್ಟಿ ಕುಂದಾಪುರ, ಧಿತ್ಯಾ ಎಸ್‌.ವಿ.ಬಂಟ್ವಾಳ, ರುಹಿಕಾ ಆರ್‌.ಭಟ್‌ ಮಂಗಳೂರು, ಜಾನ್ವಿ ಆರ್‌.ಗಟ್ಟಿ ಮಂಗಳೂರು, ಹಂಸಿನಿ ಎಚ್‌. ಆಚಾರ್ಯ ಸಂತೆಕಟ್ಟೆ ಇದ್ದರು. 

ಅದ್ಭುತ ಸ್ಪಂದನೆ ಬಹುಮಾನ ವಿತರಿಸಿದ ಮಣಿಪಾಲ್‌ ಮೀಡಿಯಾ ನೆಟ್‌ವರ್ಕ್‌ ಲಿ.ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿನೋದ್‌ ಕುಮಾರ್‌ ಅವರು ಮಾತನಾಡಿ, “ಉದಯವಾಣಿ ಮಕ್ಕಳ ಫೋಟೊ ಸ್ಪರ್ಧೆ’ಗೆ ಈ ಬಾರಿ ಅದ್ಭುತ ಸ್ಪಂದನೆ ದೊರೆತಿದ್ದು ರಾಜ್ಯ ಮಾತ್ರವಲ್ಲದೆ ದೇಶ, ವಿದೇಶಗಳಿಂದಲೂ ಫೋಟೊಗಳು ಬಂದಿದ್ದವು. ಅವುಗಳ ಆಯ್ಕೆಯೇ ಸವಾಲಿನ ಕೆಲಸವಾಗಿತ್ತು. 

ಆಯ್ಕೆಯಾದ ಮಕ್ಕಳೊಂದಿಗಿನ ಈ ಸಂದರ್ಭ ಅಪೂರ್ವವಾದುದು. ಎಲ್ಲಾ ವಯೋಮಾನವದವರಿಗಾಗಿ
ಇರುವ “ಉದಯವಾಣಿ’ ಮಕ್ಕಳ ಫೋಟೊ ಸ್ಪರ್ಧೆಗಳ ಮೂಲಕ ಪುಟಾಣಿಗಳಿಗೂ ಅವಕಾಶ ಮಾಡಿ ಕೊಡುತ್ತಿದೆ. ಸದಾ ಸುದ್ದಿಗಳೊಂದಿಗೆ ಗಾಂಭೀರ್ಯದಲ್ಲಿರುವ ಪತ್ರಿಕಾ ಲಯಕ್ಕೆ ಇಂತಹ ಸುಂದರ ಸಂದರ್ಭಗಳು ನವೋಲ್ಲಾಸ ತಂದುಕೊಡುತ್ತವೆ.

ಇದಕ್ಕಾಗಿಯೇ ಇಂತಹ ಚಟುವಟಿಕೆಗಳನ್ನು “ಉದಯವಾಣಿ’ ಆಯೋಜಿಸುತ್ತಾ ಬಂದಿದೆ. ಮಕ್ಕಳ ಫೋಟೊ ಸ್ಪರ್ಧೆಯ ಆರಂಭದ ದಿನಗಳಿಗೆ ಹೋಲಿಸಿದರೆ ಈಗ ದೊರೆಯುತ್ತಿರುವ ಸ್ಪಂದನೆ ನಿರೀಕ್ಷೆಗಿಂತ ಬಹಳಷ್ಟು ಹೆಚ್ಚಿನದ್ದು ಎಂದು
ಹೇಳಿದರು.

Advertisement

“ಉದಯವಾಣಿ’ ಸಂಪಾದಕ ಎ.ವಿ. ಬಾಲಕೃಷ್ಣ ಹೊಳ್ಳ, ಎಜಿಎಂ ಸತೀಶ್‌ ಶೆಣೈ, ಡಿಜಿಎಂ (ಫೈನಾನ್ಸ್‌) ಸುದರ್ಶನ್‌ ಸೇರಿಗಾರ್‌ ಮೊದಲಾ ದವರು ಉಪಸ್ಥಿತರಿದ್ದರು. ನ್ಯಾಶನಲ್‌ ಹೆಡ್‌ ಮ್ಯಾಗಜಿನ್‌ ಆನಂದ್‌ ಕೆ. ಅವರು ಪ್ರಸ್ತಾವನೆಗೈದು ಕಾರ್ಯಕ್ರಮ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next