Advertisement
ಜಿಲ್ಲಾಡಳಿತ, ಜಿಪಂ, ಧಾರವಾಡದ ಬಾಲವಿಕಾಸ ಅಕಾಡೆಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಮಂಗಳವಾರ ರಂಗಾಯಣದ ವನರಂಗದಲ್ಲಿ ಆಯೋಜಿಸಿದ್ದ ಮಕ್ಕಳ ಹಬ್ಬದಲ್ಲಿ ಭಾಗವಹಿಸಿದ್ದ ಚಿಣ್ಣರು ವಿವಿಧ ವೇಷಭೂಷಣಗಳನ್ನು ತೊಟ್ಟು ಮಿಂಚಿದರು. ಸುಭಾಷ್ ಚಂದ್ರಬೋಸ್, ರಾಧೆ, ಕೃಷ್ಣ, ಶಿವ, ಶಕುಂತಲಾ, ಮೌಲ್ವಿ, ಸಿಂಡ್ರೆಲಾ ಸೇರಿದಂತೆ ಹತ್ತಾರು ಬಗೆಯ ವೇಷಗಳಿಂದ ಕಂಗೊಳಿಸುತಿದ್ದ ಚಿಣ್ಣರು ಹಾಡು, ನೃತ್ಯಗಳ ಮೂಲಕ ಪ್ರೇಕ್ಷಕರ ಗಮನ ಸೆಳೆದರು.
Related Articles
Advertisement
ಪ್ರಾಣೀಗಳ ಬಗ್ಗೆ ಅರಿವು: ಮೃಗಾಲಯ ಪ್ರಾಧಿಕಾರ ಅಧ್ಯಕ್ಷೆ ಮಲ್ಲಿಗೆ ವೀರೇಶ್ ಮಾತನಾಡಿ, ಬಾಲಭವನ, ಮೊದಲ ಬಾರಿಗೆ ಬಾಲಮಂದಿರ ಹಾಗೂ ಸರ್ಕಾರಿ ಶಾಲೆಯ ಮಕ್ಕಳಿಗೆ ಮೃಗಾಲಯಕ್ಕೆ ಉಚಿತ ಪ್ರವೇಶ ನೀಡಲಾಗುತ್ತಿದೆ.
ಈಗಾಗಲೇ ಬೆಂಗಳೂರಿನ ಬನ್ನೇರುಘಟ್ಟ ಉದ್ಯಾನವನಕ್ಕೆ ಸರ್ಕಾರಿ ಶಾಲೆ ಮಕ್ಕಳನ್ನು ತಾವೆ ಕರೆದೊಯ್ದು, ಸಪಾರಿ ಹಾಗೂ ಊಟದ ವ್ಯವಸ್ಥೆ ಮಾಡುತ್ತಿದ್ದು, ಮೃಗಾಲಯದಲ್ಲಿ ಪ್ರಾಣಿ, ಪ್ರಕೃತಿ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಲಾಗುತ್ತದೆ. ಮಕ್ಕಳು ಸಹ ಪ್ರಕೃತಿ ಹಾಗೂ ಪ್ರಾಣಿಗಳ ಬಗ್ಗೆ ಅರಿತು ಅವುಗಳ ರಕ್ಷಣೆಗೆ ಮುಂದಾಗಬೇಕು ಎಂದು ಹೇಳಿದರು.
ಜಾಗೃತಿ ಅಗತ್ಯ: ಜಿಪಂ ಮಾಜಿ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ಮಾತನಾಡಿ, ಬಾಲಕಾರ್ಮಿಕ ಪದ್ಧತಿ ಇನ್ನೂ ಜೀವಂತವಾಗಿದ್ದು, ಈ ಅನಿಷ್ಟ ಪದ್ಧತಿ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಎಲ್ಲರೂ ಯೋಚಿಸಬೇಕಿದೆ. ಅಲ್ಲದೇ ಭ್ರೂಣ ಹತ್ಯೆಯಿಂದ ಶಾಲಾ ಆವರಣ, ಮನೆ ವಾತಾವರಣದಲ್ಲಿ ಮಕ್ಕಳ ಹಕ್ಕನ್ನೂ ಕಿತ್ತುಕೊಳ್ಳಲಾಗುತ್ತಿದ್ದು,
ಇಂತಹ ದಿನಗಳಲ್ಲಿ ಮಕ್ಕಳ ಹಕ್ಕುಗಳನ್ನು ಅವರಿಗೆ ಕೊಡಿಸುವ ಜತೆಗೆ ಮಕ್ಕಳಲ್ಲಿ ಅಪೌಷ್ಟಿಕತೆ ಸಮಸ್ಯೆ ಹೋಗಲಾಡಿಸಬೇಕಿದೆ ಎಂದರು. ಮೈಲ್ಯಾಕ್ ಅಧ್ಯಕ್ಷ ಎಚ್.ಎ.ವೆಂಕಟೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಕೆ.ರಾಧಾ, ಸವಿತಾ ಕುಮಾರಿ, ಮರ್ಲಿನ್ ಡಿಸೋಜಾ, ಗೀತಾ, ಧನಂಜಯ್ ಮತ್ತಿತರರು ಹಾಜರಿದ್ದರು.