Advertisement
ಸೆ. 16ರಂದು ನವೋದಯ ಆಂಗ್ಲ ಮಾಧ್ಯಮ ಶಾಲೆಯ ಸಭಾಗೃಹದಲ್ಲಿ ನಡೆದ ಚಿಣ್ಣರ ಬಿಂಬ ಥಾಣೆ ಶಿಬಿರದ ಮಕ್ಕಳ ವಾರ್ಷಿಕ ಸಾಂಸ್ಕೃತಿಕ ಸ್ಪರ್ಧೆಯ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡಿದ ಅವರು, ಮಾನವನ ಜೀವನದಲ್ಲಿ ಸ್ಪರ್ಧೆಯು ತೀರಾ ಅಗತ್ಯವಾಗಿದೆ. ಯಾಕೆಂದರೆ ನಮ್ಮಲ್ಲಿ ಛಲ ಹುಟ್ಟಿಸುವುದೇ ಸ್ಪರ್ಧೆ. ಇಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಅದರಲ್ಲಿ ಭಾಗವಹಿಸಿ ಅದನ್ನು ಎದುರಿಸುವ ಮನೋಭಾವ ಮುಖ್ಯವಾಗಿದೆ ಎಂದರು.
ಮತ್ತೋರ್ವ ಅತಿಥಿ ಥಾಣೆಯ ಉದ್ಯಮಿ ಶೇಖರ್ ಶೆಟ್ಟಿ ಅವರು ಮಾತನಾಡಿ, ಮಣ್ಣಿನ ಮುದ್ದೆಯಂತಿರುವ ಪುಟಾಣಿಗಳನ್ನು ಒಂದು ಆಕೃತಿಯ ರೂಪಕೊಟ್ಟು ಅವರ ಜೀವನಕ್ಕೊಂದು ಅರ್ಥ ಕಲ್ಪಿಸುವ ಪ್ರಕಾಶ್ ಭಂಡಾರಿ ಅವರ ನೇತೃತ್ವದ ಚಿಣ್ಣರ ಬಿಂಬದ ಕಾರ್ಯ ನನಗೆ ಬಹಳಷ್ಟು ಖುಷಿ ನೀಡುತ್ತದೆ. ಇಂತಹ ಧನಾತ್ಮಕ ಚಿಂತನೆಯ ಸಂಸ್ಥೆಗಳಿಗೆ ನನ್ನ ಸಹಕಾರ ಸದಾಯಿದೆ ಎಂದರು. ನಿರ್ಣಾಯಕರಾಗಿ ಆಗಮಿಸಿದ ಸಾಹಿತಿ ಡಾ| ಕರುಣಾಕರ ಶೆಟ್ಟಿ ಅವರು ಮಾತನಾಡಿ, ಕನ್ನಡ ನಾಡಿನಲ್ಲಿ ಇಂದು ಮಾತೃ ಭಾಷೆ ಅಳಿವಿನಂಚಿನಲ್ಲಿದೆ. ಮಹಾರಾಷ್ಟದ ಮಣ್ಣಿನಲ್ಲಿ ಕನ್ನಡ ಬೆಳೆಯುತ್ತಿದೆ. ಹಾಗಾದರೆ ಕನ್ನಡಕ್ಕೆ ಖಂಡಿತವಾಗಿಯೂ ಅಳಿವಿಲ್ಲ. ಕನ್ನಡದ ಜತೆಗೆ ತುಳುವನ್ನು ಕಲಿಸುವ ಕಾರ್ಯ ಚಿಣ್ಣರ ಬಿಂಬದಿಂದ ಆಗಬೇಕು. ಅದಕ್ಕೆ ಬೇಕಾಗುವ ಸಲಹೆ-ಸೂಚನೆಗಳನ್ನು ನೀಡಲು ಸಿದ್ಧನಿದ್ದೇನೆ ಎಂದು ನುಡಿದರು.
ತೀರ್ಪುಗಾರರಾದ ಮಾಜಿ ಶಿಕ್ಷಕಿ ಯಶೋದಾ ಬಟ್ಟಂಪಾಡಿ ಅವರು ಮಾತನಾಡಿ, ಮಹಾರಾಷ್ಟ್ರದಲ್ಲಿ ಕನ್ನಡದ ಕೈಂಕರ್ಯದಲ್ಲಿ ತೊಡಗಿಸಿಕೊಂಡಿರುವ ಚಿಣ್ಣರ ಬಿಂಬದ ಕಾರ್ಯ ಹರಿವ ನದಿಯಂತೆ ಸದಾ ಸಾಗುತ್ತಿರಲಿ ಎಂದು ಹಾರೈಸಿದರು. ಶಿಕ್ಷಕಿ ಜ್ಯೋತಿ ಶೆಟ್ಟಿ, ವಿಭಾಗದ ಮುಖ್ಯಸ್ಥೆ ವಿನಯಾ ಹರೀಶ್ ಶೆಟ್ಟಿ ಅವರು ಮಾತನಾಡಿ ಸಹಕರಿಸಿದ ಪಾಲಕರಿಗೆ, ಮಕ್ಕಳಿಗೆ, ಶಿಬಿರದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
Related Articles
Advertisement
ವೇದಿಕೆಯಲ್ಲಿ ಶಿಬಿರದ ಶಿಕ್ಷಕಿ ಶೋಭಾ ಶೆಟ್ಟಿ, ಸಾಂಸ್ಕೃತಿಕ ಸಮಿತಿಯ ಮುಖ್ಯಸ್ಥೆ ಶ್ರದ್ಧಾ ಶೆಟ್ಟಿ, ಶಿಬಿರದ ಮುಖ್ಯಸ್ಥೆ ಮಮತಾ ದೇವಾಡಿಗ ಉಪಸ್ಥಿತರಿದ್ದರು. ಕಾವ್ಯಾ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅತಿಥಿಗಳನ್ನು ಶ್ರವಣ್ ಶೆಟ್ಟಿ, ಶ್ರೀದಿತ್ ದೇವಾಡಿಗ, ಸನ್ನಿಧಿ ಭಟ್ ಅವರು ಪರಿಚಯಿಸಿರು. ನೈಶಾ ಶೆಟ್ಟಿ, ದೃಶ್ಯಾ ಹೆಗ್ಡೆ, ಶ್ರಾವ್ಯಾ ಹೆಗ್ಡೆ ಪ್ರಾರ್ಥನೆಗೈದರು. ಸಾಂಸ್ಕೃತಿಕ ಸ್ಪರ್ಧೆಯನ್ನು ಹಿರಿಯ ವಿದ್ಯಾರ್ಥಿಗಳಾದ ನಮೃತಾ ಶೆಟ್ಟಿ, ಶ್ರೇಯಸ್ ಹೆಗ್ಡೆ ನಡೆಸಿಕೊಟ್ಟರು. ಶಿಬಿರದ ಮಾರ್ಗದರ್ಶಕ ರವಿ ಹೆಗ್ಡೆ ಅವರ ಸಲಹೆ-ಸೂಚನೆ, ರ್ಮಾದರ್ಶನದಲ್ಲಿ ಕಾರ್ಯಕ್ರಮ ನಡೆಯಿತು.
ಸುಪ್ರಿಯಾ ಹೆಗ್ಡೆ, ಲತಾ ಶೆಟ್ಟಿ, ಸುಗಂಧಿ ಸಾಲ್ಯಾನ್, ಸುಗಂಧಿ ಹೆಗ್ಡೆ, ಇಂದಿರಾ ಶೆಟ್ಟಿ, ಅಮಿತಾ ಶೆಟ್ಟಿ, ವೀಣಾ ಶೆಟ್ಟಿ, ಲತಾ ಶೆಟ್ಟಿ, ಶಾಂತಿ ಶೆಟ್ಟಿ, ಶಕುಂತಳಾ ಶೆಟ್ಟಿ, ಹೇಮಲತಾ ಶೆಟ್ಟಿ, ವಿದ್ಯಾ ಎಸ್. ಹೆಗ್ಡೆ, ಶೋಭಾ ಜೆ. ಶೆಟ್ಟಿ, ಸುಕನ್ಯಾ ಶೆಟ್ಟಿ, ಚೇತನಾ ಶೆಟ್ಟಿ, ಸುಭಾಶ್, ದಯಾನಂದ್ ಹೆಗ್ಡೆ, ಪ್ರಶಾಂತ್ ಶೆಟ್ಟಿ, ಮಲ್ಲಿಕಾ ಹೆಗ್ಡೆ, ರಾಧಾಕೃಷ್ಣ ಶೆಟ್ಟಿ, ಉಮೇಶ್, ಅಮಿತಾ ಶೆಟ್ಟಿ, ಪ್ರತಿಮಾ ಪೂಜಾರಿ, ಸುಚೇತಾ ಎಸ್. ಶಿಬಿರದ ಹಳೆವಿದ್ಯಾರ್ಥಿಗಳಾದ ಕೀರ್ತಿ ಶೆಟ್ಟಿ, ದರ್ಶನ್ ಶೆಟ್ಟಿ, ವಿಕ್ಕಿ ಶೆಟ್ಟಿ, ಸಂಜೋತ್, ಶ್ರಾವ್ಯಾ ಶೆಟ್ಟಿ, ಶ್ರೇಯಾ ಹೆಗ್ಡೆ, ಸಾಕ್ಷೀ ಶೆಟ್ಟಿ, ದಿಶಾ ಹೆಗ್ಡೆ, ಪ್ರಸ್ತುತಿ ಶೆಟ್ಟಿ, ಐಶ್ವರ್ಯಾ ಶೆಟ್ಟಿ, ಅದಿತಿ ಶೆಟ್ಟಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಮಮತಾ ದೇವಾಡಿಗ ವಂದಿಸಿದರು. ವಿಜೇತ ಮಕ್ಕಳಿಗೆ ಗಣ್ಯರು ಬಹುಮಾನ ವಿತರಿಸಿ ಶುಭಹಾರೈಸಿದರು.