Advertisement
ಪೊವಾಯಿಯ ಎಸ್‌ಎಂ ಶೆಟ್ಟಿ ಕಾಲೇಜಿನ ಸಭಾಂಗಣದಲ್ಲಿ ನಡೆದ ಚಿಣ್ಣರಬಿಂಬದ ಮಧ್ಯ ವಲಯದ ಮಕ್ಕಳ ಪ್ರತಿಭಾ ಸ್ಪರ್ಧೆಯನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿ, ಚಿಣ್ಣರಬಿಂಬ ಸಂಸ್ಥೆ ಮುಂಬಯಿಯಲ್ಲಿ ಇನ್ನಷ್ಟು ಶಾಖೆಗಳನ್ನು ತೆರೆದು ಮಕ್ಕಳಿಗೆ ಸಹಕಾರಿಯಾಗಬೇಕು. ಮಕ್ಕಳನ್ನು ಸುಸಂಸ್ಕೃತರನ್ನಾಗಿ ಆದರ್ಶ ಪ್ರಜೆಗಳಾಗಿ ಪರಿವರ್ತಿಸುವ ಕಾರ್ಯಕ್ಕೆ ತನ್ನ ಸಂಪೂರ್ಣ ಸಹಕಾರವಿದೆ ಎಂದರು.ಮುಖ್ಯ ಅತಿಥಿ ಸಾಯಿಕೇರ್ ಲಾಜಿಸ್ಟಿಕ್‌ನ ಆಡಳಿತ ನಿರ್ದೇಶಕ ಸುರೇಂದ್ರ ಪೂಜಾರಿ ಅವರು ಮಾತನಾಡಿ, ಚಿಣ್ಣರಬಿಂಬ ಸಂಸ್ಥೆಯನ್ನು ನಾನು ತುಂಬಾ ಹತ್ತಿರದಿಂದ ನೋಡಿದವನು. ಮಕ್ಕಳು ಪ್ರತಿಭೆಯನ್ನು ಪ್ರದರ್ಶಿಸುತ್ತಿರುವುದು ಆನಂದವನ್ನು ನೀಡಿದೆ. ಭಜನೆಯ ಮೂಲಕ ಮಕ್ಕಳು ಸುಸಂಸ್ಕೃತರಾಗಿ, ಧಾರ್ಮಿಕವಾಗಿಯೂ ಬೆಳೆಯುವಲ್ಲಿ ಚಿಣ್ಣರಬಿಂಬ ಸಹಕರಿಸುತ್ತಿದೆ ಎಂದು ನುಡಿದರು.
Related Articles
ಬಂಟರ ಸಂಘ ಮಾತೃಭೂಮಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಕಾರ್ಯಾ ಧ್ಯಕ್ಷ ರತ್ನಾಕರ ಶೆಟ್ಟಿ ಮುಂಡ್ಕೂರು ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದ ವೇದಿಕೆಯಲ್ಲಿ ಚಿಣ್ಣರಬಿಂಬದ ಪ್ರಕಾಶ್ ಭಂಡಾರಿ, ಕೇಂದ್ರ ಸಮಿತಿಯ ರಮೇಶ್ ರೈ, ಪ್ರಶಾಂತಿ ಶೆಟ್ಟಿ, ಸವಿತಾ ಶೆಟ್ಟಿ, ಅನಿತಾ ಎಸ್. ಶೆಟ್ಟಿ, ವಿನಯಾ ಶೆಟ್ಟಿ, ಆಶಾ ಶೆಟ್ಟಿ, ವಿಮಲಾ ದೇವಾಡಿಗ, ಅನಿತಾ ಯು. ಶೆಟ್ಟಿ, ಶೋಭಾ ಜೆ. ಶೆಟ್ಟಿ, ಜ್ಯೋತಿ ಶೆಟ್ಟಿ, ಶಾಂತಿ ಶೆಟ್ಟಿ, ಕವಿತಾ ಶೆಟ್ಟಿ, ಬಾಲಕೃಷ್ಣ ಹೆಗ್ಡೆ, ಹೇಮಲತಾ ಪೂಜಾರಿ, ರಾಜವರ್ಮ ಜೈನ್ ಮೊದಲಾದವರು ಉಪಸ್ಥಿತರಿದ್ದರು.
ಚಿಣ್ಣರ ಬಿಂಬದ ಕನ್ನಡ ವಿಭಾಗದ ಸಂಚಾಲಕರಾದ ಡಾ| ಪೂರ್ಣಿಮಾ ಸುಧಾಕರ ಶೆಟ್ಟಿ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಆನಂತರ ಮಕ್ಕಳಿಗೆ ಭಜನೆ, ಭಾವಗೀತೆ, ಜಾನಪದ ಗೀತೆ, ಭಾಷಣ, ಏಕಪಾತ್ರಾಭಿನಯ, ಸಮೂಹ ಗಾಯನ ಇನ್ನಿತರ ಸ್ಪರ್ಧೆಗಳು ನಡೆದವು.
Advertisement
ಚಿಣ್ಣರ ಭಜನೆ ಸ್ಪರ್ಧೆಯ ತೀರ್ಪುಗಾರರಾಗಿ ಲತಾ ಸಂತೋಷ್ ಶೆಟ್ಟಿ, ಶಾಂತಾ ಎಂ. ಆಚಾರ್ಯ, ಶ್ರದ್ಧಾ ಬಂಗೇರ ಅವರು ಸಹಕರಿಸಿದರು. ಚಿಣ್ಣರಾದ ದರ್ಶನ್ ಶೆಟ್ಟಿ, ಶ್ರಾವ್ಯಾ ಶೆಟ್ಟಿ, ಶ್ರಾವ್ಯಾ ಹೆಗ್ಡೆ ಅವರು ಕಾರ್ಯಕ್ರಮ ನಿರೂಪಿಸಿದರು.
ಚಿಣ್ಣರ ಬಿಂಬದ ಮಕ್ಕಳ ಉತ್ಸವವನ್ನು ಕಂಡು ಬಹಳ ಖುಷಿಯಾಗಿದೆ. ಚಿಣ್ಣರ ಉತ್ಸಾಹಕ್ಕೆ ಕಾರಣಕರ್ತರಾದ ಪ್ರಕಾಶ್ ಭಂಡಾರಿ ಮತ್ತು ಅವರ ತಂಡದ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ. ಯಾವಾಗ ಮಕ್ಕಳಿಗೆ ಸ್ಫೂರ್ತಿ ಸಿಗುತ್ತದೋ ಆಗ ಮಕ್ಕಳು ಸಮಾಜದಲ್ಲಿ ಮುಂದೆ ಬರಲು ಸಾಧ್ಯವಾಗುತ್ತದೆ. ನಾವು ಶಾಲೆ ಕಾಲೇಜಿಗೆ ಹೋಗುತ್ತಿದ್ದಾಗ ನನಗೆ ಅಪರೂಪದಲ್ಲಿ ಯಾರಾದರೂ ಪ್ರೋತ್ಸಾಹ ನೀಡಿದಾಗ ಅದರಿಂದ ಹುರುಪುಗೊಂಡು ನಾನು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಮುಂದೆ ಬಂದೆ. ಅದೇ ರೀತಿ ಇಲ್ಲಿನ ಅದೆಷ್ಟೋ ಮಕ್ಕಳಿಗೆ ಶಾಲೆಯಲ್ಲಿ ಅವಕಾಶ ಸಿಗದೇ ಅವರ ಪ್ರತಿಭೆ ಮುರುಟಿ ಹೋಗುವ ಸಮಯದಲ್ಲಿ ಚಿಣ್ಣರಬಿಂಬ ಅವಕಾಶವನ್ನು ಕಲ್ಪಿಸಿ ಅವರ ಪ್ರತಿಭೆ ಅರಳುವಂತೆ ಮಾಡಿದೆ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ. ಆದ್ದರಿಂದ ಮಕ್ಕಳ ಬೆಳವಣಿಗೆಗೆ ಸ್ಫೂ³ರ್ತಿದಾಯಕ ಸಂಸ್ಥೆ ಚಿಣ್ಣರಬಿಂಬ ಎಂದು ಅಭಿಪ್ರಾಯಪಟ್ಟರು. ¤ ಚಿಣ್ಣರ ಬಿಂಬದಲ್ಲಿ ಕೇವಲ ಮಕ್ಕಳು ಮಾತ್ರವಲ್ಲ ಪಾಲಕರು ಕೂಡಾ ಬೆಳೆಯುತ್ತಿದ್ದಾರೆ. ಹೆಚ್ಚಿನವರು ತಮ್ಮಲ್ಲಿ ನಾಯಕತ್ವ ಗುಣವನ್ನು ಬೆಳೆಸಿಕೊಂಡು ಸಮಾಜಮುಖೀ ಕಾರ್ಯದಲ್ಲಿ ನಿರತರಾಗಿರುವ ಶ್ರೇಯಸ್ಸು ಈ ಸಂಸ್ಥೆಗೆ ಸಲ್ಲಬೇಕು– ರತ್ನಾಕರ ಶೆಟ್ಟಿ ಮುಂಡ್ಕೂರು,
ಕಾರ್ಯಾಧ್ಯಕ್ಷರು, ಮಾತೃಭೂಮಿ ಕೋ ಆಪರೇಟಿವ್ ಸೊಸೈಟಿ