Advertisement
ಇತ್ತೀಚೆಗೆ ಆದಿಶಕ್ತಿ ಕನ್ನಡ ಶಾಲಾ ಸಭಾಗೃಹದಲ್ಲಿ ಚಿಣ್ಣರ ಬಿಂಬ ಮುಂಬಯಿ ಇದರ ಆದಿಶಕ್ತಿ ಮಾಜಿವಾಡಾ ಶಿಬಿರದ ಮಕ್ಕಳ ಪ್ರತಿಭಾ ಸ್ಪರ್ಧೆಯ ಸಮಾರೋಪ ಸಮಾರಂ ಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಕ್ಕಳ ಪ್ರತಿಭೆಯನ್ನು ಮೆಚ್ಚಿ, ಹಿತವಚನವನ್ನಿತ್ತು ಶುಭಹಾರೈಸಿದರು.
Related Articles
Advertisement
ಶಿಬಿರದ ಮುಖ್ಯಸ್ಥ ಬಾಲಕೃಷ್ಣ ಹೆಗ್ಡೆ ಮಾತನಾಡಿ, ನಮ್ಮ ಶಿಬಿರವು ಪ್ರಾರಂಭಗೊಂಡು ಕೇವಲ ಎರಡು ತಿಂಗಳಾಗಿದ್ದು, ಸ್ವಲ್ಪ ಸಮಯದಲ್ಲೇ ಇಷ್ಟೊಂದು ಚಂದದ ಕಾರ್ಯಕ್ರಮ ಸಂಪನ್ನಗೊಳಿಸುವುದಕ್ಕೆ ಇಲ್ಲಿನ ಪಾಲಕ, ಪೋಷಕರೇ ಕಾರಣ. ಜತೆಗೆ ಚಿಣ್ಣರ ಬಿಂಬದ ಎಲ್ಲರ ಮಾರ್ಗದರ್ಶನ ಕಾರಣವಾಗಿದೆ ಎಂದು ಹೇಳಿದರು.
ಘೋಡ್ ಬಂದರ್ ರೋಡ್ ಶ್ರೀ ಅಯ್ಯಪ್ಪ ಸೇವಾ ಟ್ರಸ್ಟ್ ಇದರ ಸ್ಥಾಪಕ ಪ್ರಶಾಂತ್ ನಾಯಕ್, ಶ್ರೀ ಅಯ್ಯಪ್ಪ ಭಜನಾ ಮಂಡಳಿಯ ಸೀತಾರಾಮ ಶೆಟ್ಟಿ, ಅಶೋಕ್ ಮೂಲ್ಯ, ನವೋದಯ ಕನ್ನಡ ಸೇವಾ ಸಂಘದ ಜತೆ ಕೋಶಾಧಿಕಾರಿ ದಯಾನಂದ ಹೆಗ್ಡೆ, ಥಾಣೆ ಶಿಬಿರದ ಶಿಕ್ಷಕಿ ಜ್ಯೋತಿ ಶೆಟ್ಟಿ, ಮಾಜಿವಾಡಾ ಥಾಣೆ, ವಿಕ್ರೋಲಿ ವಿಭಾಗದ ಮುಖ್ಯಸ್ಥೆ ವಿನಯಾ ಶೆಟ್ಟಿ, ಶಿಬಿರದ ಮುಖ್ಯಸ್ಥ ಬಾಲಕೃಷ್ಣ ಹೆಗ್ಡೆ, ಶಿಬಿರದ ಶಿಕ್ಷಕಿ ರೇಣುಕಾ ಬಿರಾದಾರ್, ಸಾಂಸ್ಕೃತಿಕ ಮುಖ್ಯಸ್ಥೆ ಸುನೀತಾ ಹೆಗ್ಡೆ, ಭಜನಾ ಶಿಕ್ಷಕಿ ಶೋಭಾ ಕೋಟ್ಯಾನ್ ಅವರು ಉಪಸ್ಥಿತರಿದ್ದರು.
ಸಾಂಸ್ಕೃತಿಕ ಸ್ಪರ್ಧೆಯನ್ನು ಚಿಣ್ಣರ ಬಿಂಬದ ರೂವಾರಿ ಪ್ರಕಾಶ್ ಭಂಡಾರಿ ಅವರು ದೀಪಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿ, ಇಂದು ಶಿಬಿರದ ಮಕ್ಕಳನ್ನು ಕಂಡಾಗ ಸಂತೋಷವಾಗುತ್ತಿದೆ. ಮಕ್ಕಳ ಉತ್ಸಾಹ, ಹುಮ್ಮಸ್ಸು, ಶ್ರದ್ಧೆ ಮನಸಿಗೆ ಆನಂದವನ್ನುಂಟು ಮಾಡುತ್ತಿದೆ. ಶಿಬಿರವು ಇನ್ನಷ್ಟು ಅಭಿವೃದ್ಧಿಯನ್ನು ಸಾಧಿಸಲಿ ಎಂದು ನುಡಿದು ಶುಭಹಾರೈಸಿದರು. ವಿವಿಧ ಸ್ಪರ್ಧೆಗಳ ವಿಜೇತರಿಗೆ ಗಣ್ಯರು ಬಹುಮಾನ ವಿತರಿಸಿ ಶುಭಹಾರೈಸಿದರು.