Advertisement
ಜು. 15ರಂದು ಐರೋಲಿಯ ಸೆಕ್ಟರ್-19ರಲ್ಲಿರುವ ಜ್ಞಾನ ವಿಕಾಸ ಮಂಡಳದ ಆಡಳಿತದಲ್ಲಿರುವ ಮೆಹ್ತಾ ಡಿಗ್ರಿ ಕಾಲೇಜ್ ಆಫ್ ಆರ್ಟ್ಸ್ ಮತ್ತು ಕಾಮರ್ಸ್‌ನ ಶಿಕ್ಷಣ ಸಂಕುಲದಲ್ಲಿ ನಡೆದ ಚಿಣ್ಣರ ಬಿಂಬ ಮುಂಬಯಿ ಇದರ 26 ನೇ ಕಲ್ವಾ ನ್ಯೂ ಇಂಗ್ಲಿಷ್ ಸ್ಕೂಲ್ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ನೂತನ ಶಿಬಿರದಲ್ಲಿ ಕನ್ನಡಿಗರ ಮಕ್ಕಳಲ್ಲದೆ, ಕನ್ನಡೇತರ ಮಕ್ಕಳು ಪಾಲ್ಗೊಂಡು ಚಿಣ್ಣರ ಬಿಂಬದ ಖ್ಯಾತಿ ಲೋಕ ವಿಖ್ಯಾತಗೊಳ್ಳಲಿ ಎಂದು ನುಡಿದು, ಮಕ್ಕಳಿಗೆ ಶುಭಹಾರೈಸಿದರು.
Related Articles
Advertisement
ಸಂಸ್ಥೆಯ ಗೌರವ ಪ್ರಧಾನ ಕಾರ್ಯದರ್ಶಿ ವಸಂತ್ ಹೊನ್ನೂರು ಇವರು ಮಾತನಾಡಿ, ಚಿಣ್ಣರ ಬಿಂಬ ಭಾಷೆ, ಸಂಸ್ಕೃತಿಯನ್ನು ಉಳಿಸುತ್ತದೆ ಎನ್ನುವುದನ್ನು ಅರಿತಿರುವ ನಮ್ಮ ಶಾಲಾಡಳಿತ ಮಂಡಳಿ ಕಲ್ವಾದ ಶಾಲೆಯಲ್ಲಿ ಶಿಬಿರ ಆರಂಭಿಸಲು ಮುಂದಾಗಿದೆ. ಎಲ್ಲಾ ವಿದ್ಯಾರ್ಥಿಗಳಿಗೆ ಸಂಸ್ಕೃತಿ ಮತ್ತು ಸಂಸ್ಕಾರಕ್ಕೆ ಈ ಶಿಬಿರ ಪೂರಕವಾಗಿರಲಿ. ಈ ಕಾಲೇಜಿನಲ್ಲಿ ಶೇ. 50 ರಷ್ಟು ಕನ್ನಡಿಗರಿಗೆ ಮೀಸಲಾತಿಯಿದೆ ಎಂದರು.ಸಂಸ್ಥೆಯ ಕೋಶಾಧಿಕಾರಿ ಬಿ. ಎನ್. ಹರಗಬಲ್ ಇವರು ಮಾತನಾಡಿ, ಮಕ್ಕಳಿಗೆ ಸಂಸ್ಕೃತಿ -ಸಂಸ್ಕಾರ ಕಲಿಸುವ ಚಿಣ್ಣರ ಬಿಂಬದ ಕಾರ್ಯ ಅಭಿನಂದನೀಯವಾಗಿದೆ ಎಂದರು. ಚಿಣ್ಣರ ಬಿಂಬದ ಮುಖ್ಯಸ್ಥರುಗಳಾದ ತಾಳಿಪಾಡಿಗುತ್ತು ಭಾಸ್ಕರ ಶೆಟ್ಟಿ, ಕಯ್ನಾರು ರಮೇಶ್ ರೈ, ವಿಜಯ ಕೋಟ್ಯಾನ್, ಉಷಾ ಬಿ. ಶೆಟ್ಟಿ, ನೀತಾ ರಮೇಶ್ ಶೆಟ್ಟಿ, ಜಯಪ್ರಕಾಶ್ ಶೆಟ್ಟಿ ಉಪಸ್ಥಿತರಿದ್ದರು. ಚಿಣ್ಣರ ಬಿಂಬದ ಟ್ರಸ್ಟಿ ಸುರೇಂದ್ರ ಕುಮಾರ್ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿ, 16 ವರ್ಷಗಳ ಹಿಂದೆ ಪ್ರಾರಂಭಗೊಂಡ ಚಿಣ್ಣರ ಬಿಂಬ ಪ್ರಸ್ತುತ ಕಲ್ವಾದ ಕನ್ನಡಿಗರ ಶಾಲೆಯಲ್ಲಿ ಶಿಬಿರವನ್ನು ಆರಂಭಿಸಿದೆ. ಇದು ಚಿಣ್ಣರ ಬಿಂಬಕ್ಕೆ ಸಿಕ್ಕ ಹಿರಿಮೆಯಾಗಿದೆ ಎಂದರು. ಕರ್ನೂರು ಮೋಹನ್ ರೈ ಮತ್ತು ವಿಕ್ರಂ ಪಾಟ್ಕರ್, ಪವಿತ್ರಾ ದೇವಾಡಿಗ ಇವರು ಕಾರ್ಯಕ್ರಮ ನಿರ್ವಹಿಸಿದರು. ಅತಿಥಿಗಳನ್ನು ಶಿಶಿಕಾ ಶೆಟ್ಟಿ, ಭೂಮಿಕಾ ಅಂಚನ್, ಮಿಂಥನ್ ಶೆಟ್ಟಿ, ಋಷಿ ಶೆಟ್ಟಿ ಅವರು ಪರಿಚಯಿಸಿದರು. ನೀತಾ ಆರ್. ಶೆಟ್ಟಿ ವಂದಿಸಿದರು. ಮಕ್ಕಳಲ್ಲಿರುವ ಪ್ರತಿಭೆ ಅನಾವರಣಗೊಳ್ಳಲು ಮಾತೆಯರು ಮಹತ್ತರವಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಚಿಣ್ಣರಲ್ಲಿರುವ ಅಭೂತಪೂರ್ವ ಪ್ರತಿಭೆ ಹೊರ ಬರಲು ಸಾಧ್ಯವಾಗುತ್ತದೆ. ಚಿಣ್ಣರ ಬಿಂಬವು ಇಷ್ಟೊಂದು ಎತ್ತರಕ್ಕೆ ಬೆಳೆಯಲು ಪಾಲಕರ ಪ್ರೋತ್ಸಾಹ ಕಾರಣವಾಗಿದೆ. 26 ನೇ ಶಿಬಿರ ಕಲ್ವಾದ ಕನ್ನಡಿಗರ ಶಾಲೆಯಲ್ಲಿ ಪ್ರಾರಂಭಿಸಲು ಅವಕಾಶ ದೊರೆತಿರುವುದರಿಂದ ಶಾಲೆಯಲ್ಲಿರುವ ಕನ್ನಡೇತರ ಮಕ್ಕಳಿಗೆ ನಾಡು-ನುಡಿ, ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವಂತಾಗಲು ಸಹಕಾರಿಯಾಗಿದೆ. ಚಿಣ್ಣರ ಬಿಂಬ ಶಿಸ್ತಿನ ಸಂಸ್ಥೆಯಾಗಿದೆ. ಈ ಹೊಸ ಶಿಬಿರದಲ್ಲಿ ಶನಿವಾರ ಮತ್ತು ರವಿವಾರ ಮಕ್ಕಳಿಗೆ ಕನ್ನಡದ ಪಾಠ ಕಲಿಕೆ ಪ್ರಾರಂಭಗೊಳ್ಳಲಿದೆ. ಸಾವಿರಾರು ಮಕ್ಕಳು ಚಿಣ್ಣರ ಬಿಂಬದ ಮಾರ್ಗದರ್ಶನದಿಂದ ಸುಸಂಸ್ಕೃತ ಪ್ರಜೆಗಳಾಗಿ ಉನ್ನತ ಉದ್ಯೋಗದಲ್ಲಿದ್ದು, ಆದರ್ಶ ಬದುಕು ಕಟ್ಟಿಕೊಂಡಿದ್ದಾರೆ
– ಪ್ರಕಾಶ್ ಭಂಡಾರಿ (ಚಿಣ್ಣರ ಬಿಂಬದ ರೂವಾರಿ).