Advertisement

ಚಿಣ್ಣರ ಬಿಂಬ ಮುಲುಂಡ್‌-ಥಾಣೆ-ವಿಕ್ರೋಲಿ:ಮಕ್ಕಳ ಉತ್ಸವ 

03:23 PM Oct 04, 2017 | |

ಮುಂಬಯಿ: ಚಿಣ್ಣರ ಬಿಂಬ ಎಂಬ ಬೃಹತ್‌ ಸಂಸ್ಥೆಯನ್ನು  ಮುನ್ನಡೆಸಲು ಓರ್ವನಿಂದ ಸಾಧ್ಯವಿಲ್ಲ, ಆದ್ದರಿಂದ ಪ್ರಕಾಶ್‌ ಭಂಡಾರಿ ಅವರಿಗೆ ನಾವೆಲ್ಲರೂ ಸಹಕರಿಸೋಣ. ಇಂದಿನ ಆಧುನಿಕ ಯುಗದಲ್ಲಿ ಇಂತಹ ಸಂಸ್ಥೆಗಳ ಅಗತ್ಯವಿದ್ದು, ಇದನ್ನು ಮತ್ತಷ್ಟು ಬಲಾಡ್ಯಗೊಳಿಸುವಲ್ಲಿ ನಾವೆಲರೂ ಒಂದಾಗಬೇಕು. ಪಾಲಕರು ಮಕ್ಕಳನ್ನು ಶಿಬಿರಗಳಿಗೆ ಸೇರಿಸಿಕೊಂಡು ಅವರಿಗೆ ನಾಡಿನ ಸಂಸ್ಕೃತಿ-ಸಂಸ್ಕಾರಗಳ  ಅರಿವು ಮೂಡಿಸಬೇಕು ಎಂದು ವಾಮಂಜೂರಿನ ಜಾನು ಶೆಟ್ಟಿ ಮೆಮೋರಿಯಲ್‌ ಟ್ರಸ್ಟ್‌ ಇದರ ಸ್ಥಾಪಕಾಧ್ಯಕ್ಷ ಸೀತಾರಾಮ ಶೆಟ್ಟಿ ಅವರು ನುಡಿದರು.

Advertisement

ಅ. 1ರಂದು ಥಾಣೆಯ ನವೋದಯ ಕಾಲೇಜ್‌ನ ಸಭಾಂಗಣದಲ್ಲಿ ನಡೆದ ಚಿಣ್ಣರ ಬಿಂಬ ಮುಂಬಯಿ ಇದರ ಮುಲುಂಡ್‌-ಥಾಣೆ-ವಿಕ್ರೋಲಿ ಶಿಬಿರಗಳ ಮಕ್ಕಳ ಉತ್ಸವ 2017 ಸಂಭ್ರಮದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇದೊಂದು ಮಕ್ಕಳ ಸ್ಪರ್ಧೆ ಎಂದು ಪರಿಗಣಿಸದೆ ಮಕ್ಕಳ  ಪ್ರತಿಭೆಯನ್ನುಅನಾವರಣಗೊಳಿಸಲಿರುವ ವೇದಿಕೆ ಎಂದುಪರಿಗಣಿಸಬೇಕು. ಇದರಿಂದ ವ್ಯಕ್ತಿತ್ವ ವಿಕಸನ ಗೊಳ್ಳಲು ಸಾಧ್ಯವಿದೆ ಎಂದು ನುಡಿದು ಸ್ಪರ್ಧಿಗಳಿಗೆ ಶುಭ ಹಾರೈಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನ್ಯಾಯವಾದಿ ಪದ್ಮನಾಭ ಶೆಟ್ಟಿ ಅವರು, ಇಂದು ನಾವು ನಮ್ಮ ದೇಶೀಯ ಸಂಸ್ಕೃತಿಯನ್ನು ಮರೆತು ವಿದೇಶಿ ಸಂಸ್ಕೃತಿಯನ್ನು ಮಕ್ಕಳಲ್ಲಿ ಕಾಣುತ್ತಿದ್ದೇವೆ. ಉದಾಹರಣೆಗಾಗಿ ಮಾತಾ-ಪಿತರನ್ನು ಮಮ್ಮಿ ಡ್ಯಾಡಿ ಎಂದು ಕರೆಯುತ್ತೇವೆ. ಇದು ನಮ್ಮ ಸಂಸ್ಕೃತಿ ಖಂಡಿತಾ ಅಲ್ಲ. ಆದರೆ ಮಗುವಿಗೆ ಬಾಲ್ಯದಿಂದಲೇ ಭಾರತೀಯ ಸಂಸ್ಕಾರವನ್ನು ಕಲಿಸಿದರೆ ಅದರಲ್ಲಾಗುವ ಬದಲಾವಣೆ ಎಷ್ಟರ ಮಟ್ಟಿನದ್ದು ಎನ್ನುವುದನ್ನು ನಾವಿಂದು ಕಾಣಬಹುದು. ಚಿಣ್ಣರ ಬಿಂಬದ ಮಕ್ಕಳು ಹಿರಿಯರನ್ನು ಪಾದ ಮುಟ್ಟಿ ಗೌರವಿಸುವ ಸಂಸ್ಕೃತಿಯನ್ನು ಕಂಡಾಗ ಚಿಣ್ಣರ ಬಿಂಬದ ಗರಿಮೆ ವ್ಯಕ್ತವಾಗುತ್ತದೆ ಎಂದು ನುಡಿದರು.

ಪುರೋಹಿತ ರಾಜಶೇಖರ್‌ ಭಟ್‌ ಅವರು ಆಶೀರ್ವದಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಕ್ಕಳಿಗೆ ಶುಭ ಹಾರೈಸಿದರು. ಅತಿಥಿಯಾಗಿ ಪಾಲ್ಗೊಂಡನವೋದಯ ಕನ್ನಡ ಸೇವಾ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ದಯಾನಂದ ಶೆಟ್ಟಿ ಮಾತನಾಡಿ, ಇಂತಹ ಅರ್ಥವತ್ತಾದ ಕಾರ್ಯಕ್ರಮ ನಮ್ಮ ಆಡಳಿತದ ಶಾಲೆಯ ಸಭಾಗೃಹದಲ್ಲಿ ನಡೆಯುತ್ತಿರುವುದರಿಂದ ನಮಗೆ ಅತಿ ಸಂತೋಷವಾಗುತ್ತಿದೆ. ನಮ್ಮ ಸಂಘದ ಸಹಕಾರ ಹಾಗೂ ಬೆಂಬಲ ಸದಾಯಿದೆ ಎಂದರು.

Advertisement

ಭಾರತ್‌ ಬ್ಯಾಂಕಿನ ನಿರ್ದೇಶಕ ಚಂದ್ರಶೇಖರ್‌ ಪೂಜಾರಿ ಮಾತನಾಡಿ, ಇಂದಿನ ಉತ್ಸವಕ್ಕೆ ಓರ್ವ ಅತಿಥಿಯಾಗಿ ನಾನಿದ್ದರೂ ಇಲ್ಲಿ ಅನೇಕ ವಿಷಯಗಳನ್ನು ನಾನು
ಕಲಿತೆ. ಮಕ್ಕಳ ಶಿಸ್ತುಪಾಲನೆ, ಗೌರವ, ಪ್ರತಿಭೆಗಳಿಗೆ ಮಾರು ಹೋದೆ. ಈ ಸಂಸ್ಥೆ ಇನ್ನಷ್ಟು ಬೆಳೆಯಲಿ ಎಂದು ಶುಭ ಹಾರೈಸಿದರು. 

ವೇದಿಕೆಯಲ್ಲಿ ಚಿಣ್ಣರ ಬಿಂಬದ ಮಾರ್ಗದರ್ಶಕರಾದ ರಜಕ ಸಂಘದ ಅಧ್ಯಕ್ಷ ಸತೀಶ ಸಾಲ್ಯಾನ್‌, ಪೊವಾಯಿ ಕನ್ನಡ ಸಂಘದ ರಮೇಶ್‌ ರೈ, ಡಾ| ಪೂರ್ಣಿಮಾ ಸುಧಾಕರ ಶೆಟ್ಟಿ, ಕಲ್ವಾ ಶಿಬಿರದ ಮಾರ್ಗದರ್ಶಕ  ಜಯಪ್ರಕಾಶ್‌ ಶೆಟ್ಟಿ, ವಿಭಾಗದ ಮುಖ್ಯಸ್ಥೆ  ವಿನಯಾ ಶೆಟ್ಟಿ, ಶಿಬಿರಗಳ ಸಾಂಸ್ಕೃತಿಕ ಸಮಿತಿಯ ಮುಖ್ಯಸ್ಥೆಯರಾದ ಪ್ರವೀಣಿ ಶೆಟ್ಟಿ, ಸರಿತಾ ಪೂಜಾರಿ, ನವಿಮುಂಬಯಿ ಭಾಸ್ಕರ ಶೆಟ್ಟಿ ಅದ್ಯಪಾಡಿ, ಭಜನಾ ಶಿಕ್ಷಕಿ ಶೋಭಾ ಜೆ. ಶೆಟ್ಟಿ, ವಿಕ್ರೋಲಿ ಶಿಬಿರದ ಶಿಕ್ಷಕಿ ಮಲ್ಲಿಕಾ ಸಾಲ್ಯಾನ್‌ ಉಪಸ್ಥಿತರಿದ್ದರು.

ಚಿಣ್ಣರ ಬಿಂಬ ಥಾಣೆ ಶಿಬಿರದ ಧನ್ಯಾ  ಧನಂಜಯ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾ
ಡಿದರು. ವಿಕ್ರೋಲಿ ಶಿಬಿರದ ಶಿಕ್ಷಕಿ ಮಲ್ಲಿಕಾ ಸಾಲ್ಯಾನ್‌ ವಂದಿಸಿದರು. ರವಿ ಹೆಗ್ಡೆ ಹೆರ್ಮುಂಡೆ ಕಾರ್ಯಕ್ರಮ ನಿರ್ವಹಿಸಿದರು. ಅನಂತರ ಶಿಬಿರ ಗಳ ಮಕ್ಕಳಿಗೆ ಭಜನೆ, ಏಕಪಾತ್ರಾ ಭಿನಯ, ಭಾಷಣ, ಛದ್ಮವೇಷ ಸ್ಪರ್ಧೆ ನಡೆಯಿತು. ಸ್ಪರ್ಧೆಯ ತೀರ್ಪುಗಾರರಾಗಿ ನವೋದಯ ಶಾಲೆಯ ಶಿಕ್ಷಕಿ ಭಾಗ್ಯಶ್ರೀ ಮತ್ತು ವರ್ತಕ್‌ ನಗರ ಕನ್ನಡ ಸಂಘದ ಸದಸ್ಯೆ, ನಿವೃತ್ತ ಶಿಕ್ಷಕಿ ಯಶೋದಾ ಭಟ್ಟಪಾಡಾ ಸಹಕರಿಸಿದರು. ಸ್ಪರ್ಧೆಯನ್ನು ಶಿಬಿರದ ವಿದ್ಯಾರ್ಥಿಗಳಾದ ಅಮೃತಾ ಶೆಟ್ಟಿ, ಶ್ರೇಯಸ್‌ ಹೆಗ್ಡೆ, ಪ್ರಜ್ವಲ್‌ ಶೆಟ್ಟಿ ನಿರ್ವಹಿಸಿದರು.

ವಿಜಯ ಕೋಟ್ಯಾನ್‌, ದಯಾನಂದ ಹೆಗ್ಡೆ, ಸುನಿಲ್‌ ಶೆಟ್ಟಿ, ಶಶಿಧರ ಶೆಟ್ಟಿ, ಜಯಂತ್‌ ಕುಕ್ಯಾನ್‌, ಶೋಭಾ ಶೆಟ್ಟಿ, ಜ್ಯೋತಿ ಶೆಟ್ಟಿ, ಶೋಭಾ ಆರ್‌. ಶೆಟ್ಟಿ, ಹೇಮಂತ್‌ ಶೆಟ್ಟಿ, ಲತಾ ಆರ್‌. ಶೆಟ್ಟಿ, ಇಂದಿರಾ ಶೆಟ್ಟಿ, ಲತಾ ಆರ್‌. ಶೆಟ್ಟಿ, ಮಲ್ಲಿಕಾ ಹೆಗ್ಡೆ, ತೀರ್ಥಾ ಮ್ಹಾಡ, ಕೀರ್ತಿ ಶೆಟ್ಟಿ,  ಸಂಜೋತ್‌, ದೀಕ್ಷಾ ಶೆಟ್ಟಿ, ವಿಟuಲ್‌ ಶೆಟ್ಟಿ, ಕುಕ್ಕಿಂದಾರ್‌ ಜೋಶಿ, ಸುಭಾಷ್‌ ಸಾವಂತ್‌, ಚಿಣ್ಣರ ಬಿಂಬದ ಹಳೆ ವಿದ್ಯಾರ್ಥಿಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಮುಲುಂಡ್‌ನ‌ ಉದ್ಯಮಿ ಶಾಂತರಾಜ್‌ ಶೆಟ್ಟಿ ಅವರ ಪ್ರಾಯೋಜಕತ್ವದಲ್ಲಿ ಊಟೋಪಚಾರದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ಶ್ರಾವ್ಯ ಹೆಗ್ಡೆ, ದೃಶ್ಯ ಹೆಗ್ಡೆ ಮತ್ತು ಅನಸೂಯಾ ನೃತ್ಯ ನಿರ್ದೇಶನಗೈದರು. ವಿಕ್ರೋಲಿ, ಥಾಣೆ, ಮುಲುಂಡ್‌, ಕಲ್ವಾ, ಘೋಡ್‌ಬಂದರ್‌ ಶಿಬಿರಗಳ ಪಾಲಕರು, ಮಕ್ಕಳು, ಹಿತೈಷಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next