Advertisement

ಚಿಣ್ಣರ ಬಿಂಬ ಮುಂಬಯಿ ಭಿವಂಡಿ ಶಿಬಿರದ ಪಾಲಕರ ಸಭೆ

03:29 PM Dec 06, 2017 | |

ಭಿವಂಡಿ: ಮಕ್ಕಳಲ್ಲಿ ನಾಗರಿಕತೆ ರೂಪಿಸುವಲ್ಲಿ ನಮ್ಮ ಮಾತೃಭಾಷೆಯ ಕೊಡುಗೆ ಮಹತ್ತರವಾಗಿದೆ. ಎಳೆಯ ಪ್ರಾಯದಲ್ಲೇ ಮಕ್ಕಳಿಗೆ ನಮ್ಮ ಸಂಸ್ಕಾರ, ಸಂಸ್ಕೃತಿಯ ಅರಿವು ಮೂಡಿಸಿದಾಗ ಅವರೆಲ್ಲ ಸತøಜೆಗಳಾಗಿ ಭವಿಷ್ಯದಲ್ಲಿ ಮನುಕುಲದ ವಿಶೇಷವಾಗಿ ನಮ್ಮ ದಕ್ಷಿಣೋತ್ತರ ಜಿಲ್ಲೆಯ ಸಂಸ್ಕಾರ ಉಳಿಸುವ ದೊಡ್ಡ ಕಾರ್ಯ ಅವರಿಂದ ಸಾಧ್ಯ. ಅಂತಹ ಕಾರ್ಯವನ್ನು ಚಿಣ್ಣರ ಬಿಂಬದ ಮೂಲಕ ನಮ್ಮೆಲ್ಲರ ಮಾರ್ಗದರ್ಶಕರು, ರೂವಾರಿಗಳು ಆದ ಪ್ರಕಾಶ್‌ ಭಂಡಾರಿ ಅವರ ನೇತೃತ್ವದಲ್ಲಿ ನಡೆಯುತ್ತಿದೆ ಎಂದು ಚಿಣ್ಣರ ಬಿಂಬದ ಮಾಧ್ಯಮ ವಕ್ತಾರ ರವಿ ಹೆಗ್ಡೆ ನುಡಿದರು.

Advertisement

ಇತ್ತೀಚೆಗೆ ಭಿವಂಡಿಯಲ್ಲಿ ಚಿಣ್ಣರ ಬಿಂಬ ಮುಂಬಯಿ ಇದರ ವತಿಯಿಂದ ನಡೆದ ಭಿವಂಡಿ ಶಿಬಿರದ ಪಾಲಕರ ಸಭೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದ ಅವರು, ಪ್ರಸ್ತುತ ವರ್ಷವು ಚಿಣ್ಣರ ಬಿಂಬವು ಡಿಸೆಂಬರ್‌ 24ರಂದು ಕುರ್ಲಾ ಪೂರ್ವದ ಬಂಟರ ಭವನದಲ್ಲಿ ಒಂದು ದಿನದ ಸಂಪೂರ್ಣ ಕಾರ್ಯಕ್ರಮವನ್ನು ಆಯೋಜಿಸಿದ್ದು, ಅದರ ಸಂಪೂರ್ಣ ವಿವರವನ್ನು ಸಭೆಗೆ ನೀಡಿದರು. ಕಳೆದ ಹದಿನೈದು ವರ್ಷಗಳಲ್ಲಿ ಚಿಣ್ಣರ ಬಿಂಬವು ಮುಂಬಯಿ ಹಾಗೂ ಉಪನಗರಗಳಲ್ಲಿ ಮಾಡಿದ ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ರಾಂತಿಯ ಬಗ್ಗೆ ವಿವರಿಸಿ, ಇಂದು ಚಿಣ್ಣರ ಬಿಂಬದ ಮೂಲಕ ವಿದ್ಯಾರ್ಥಿಗಳು ಏರಿದ ಎತ್ತರದ ಬಗ್ಗೆ ತಮ್ಮ ಪಾಲಕರಿಗೆ ಮನವರಿಕೆ ಮಾಡಿದರು. ಕನ್ನಡ ಕಲಿಕಾ ವರ್ಗಗಳ ಮಹತ್ವದ ಬಗ್ಗೆ ಪಾಲಕರಿಗೆ ಮನದಟ್ಟು ಮಾಡಿದ್ದರು. ಇದರ ಜತೆಗೆ ತರಗತಿಗಳಲ್ಲಿ ಕನ್ನಡೇತರರ ಚಟುವಟಿಕೆಗಳಾದ ಭಜನೆ, ಯಕ್ಷಗಾನದ ಅರಿವು, ಯೋಗ, ಚಿತ್ರಕಲೆ, ಭಾಷಣದ ಬಗ್ಗೆ ಜ್ಞಾನ ಅರಿವು ಮೂಡಿಸುವ ಕಾರ್ಯದಲ್ಲಿ ಚಿಣ್ಣರ ಬಿಂಬವು ತೊಡಗಿದೆ. ಒಂದು ಸರಕಾರ ಅಥವಾ ಅಕಾಡೆಮಿ ಮಾಡತಕ್ಕಂತಹ ಕಾರ್ಯವನ್ನು ಚಿಣ್ಣರ ಬಿಂಬವು ಮಾಡುತ್ತಿದೆ. ಇದರ ಸದುಪಯೋಗವನ್ನು ಎಲ್ಲಾ ಮಕ್ಕಳು ಪಡೆದುಕೊಳ್ಳುವಂತೆ ಅವರು ವಿನಂತಿಸಿದರು.

ಡೊಂಬಿವಲಿ ಶಿಬಿರದ ಮಾರ್ಗದರ್ಶಕಿ ಮಂಜುಳಾ ಶೆಟ್ಟಿ ಅವರು ಮಾತನಾಡಿ, ತಾನು ವೈಯಕ್ತಿಕವಾಗಿ ಯಾವ ರೀತಿಯ ಪ್ರಯೋಜನವನ್ನು ಚಿಣ್ಣರ ಬಿಂಬದಿಂದ ಪಡೆದಿರುವೆ, ಅದು ತನ್ನ ಮಕ್ಕಳ ಮೇಲೆ ಯಾವ ರೀತಿಯ ಪರಿಣಾಮ ಬೀರಿದೆ ಎನ್ನುವುದನ್ನು ಸಭೆಗೆ ತಿಳಿಸಿದರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ತಾವೆಲ್ಲರೂ ಸಮಾಜಮುಖೀಗಳಾಗಿ ಬಾಹ್ಯ ಪ್ರಪಂಚದಲ್ಲಿ ಸಮಸ್ಯೆಗಳನ್ನು ಎದುರಿಸುವ ಶಕ್ತಿಯನ್ನು ತಾವು ಮೈಗೂಡಿಸಿಕೊಳ್ಳಬೇಕು. ಅದಕ್ಕಾಗಿ ಒಂದೇ ಪರಿವಾರದ ಸದಸ್ಯರಂತೆ ಇರುವ ಚಿಣ್ಣರ ಬಿಂಬದ ಸದಸ್ಯರಾಗಬೇಕು ಎಂದು ನುಡಿದರು.

ಶಿಬಿರದ ಮುಖ್ಯಸ್ಥೆ ಶೈಲಜಾ ಶೆಟ್ಟಿ, ಸಾಂಸ್ಕೃತಿಕ ಸಮಿತಿಯ ಮುಖ್ಯಸ್ಥೆ ಪೂರ್ಣಿಮಾ ಎಂ. ಪೂಜಾರಿ, ಭಜನ ಶಿಕ್ಷಕಿ ಶೋಭಾ ಶಂಕರ್‌ ಪೂಜಾರಿ ಅವರು ಸಂದಭೋìಚಿತವಾಗಿ ಮಾತನಾಡಿದರು. ಭಾಸ್ಕರ್‌ ಶೆಟ್ಟಿ ಅವರು ಕಾರ್ಯಕ್ರಮ ನಿರ್ವಹಿಸಿದರು. ಜಯಂತ್‌ ಸಾಲ್ಯಾನ್‌, ಭಾಸ್ಕರ್‌ ಜಿ. ಶೆಟ್ಟಿ, ವನಿತಾ ಶೆಟ್ಟಿ, ಪುಷ್ಪಾ ಪೂಜಾರಿ, ಅನಿಪ್ರಿತಾ ಶೆಟ್ಟಿ, ವನಿತಾ ಶೆಟ್ಟಿ, ಕವಿತಾ ಶೆಟ್ಟಿ, ಮಹಾಬಲ ಶೆಟ್ಟಿ, ಸುಶಾಂತ್‌ ಶೆಟ್ಟಿ ಅವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
 

Advertisement

Udayavani is now on Telegram. Click here to join our channel and stay updated with the latest news.

Next