Advertisement
ಪಟ್ಟಣದ ಎಪಿಎಂಸಿ ಆವರಣದಲ್ಲಿ ರವಿವಾರ ಆಯೋಜಿಸಿದ್ದ ‘ನಮ್ಮ ನಡಿಗೆ ಚನ್ನಮ್ಮನ ನಾಡಿಗೆ’ ಸದ್ಭಾವನಾ ಪಾದಯಾತ್ರೆಯ ಸಮಾರೋಪ ಸಮಾರಂಭ ಹಾಗೂ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಅವರು, ಚನ್ನಮ್ಮಾಜಿಯ ಕೋಟೆಯ ಕಟ್ಟಡವೂ ಹಾಳಾಗಿದ್ದು ಈಗ ಅದು ಪ್ರಾಚ್ಯವಸ್ತು ಇಲಾಖೆಯ ಅಧೀನದಲ್ಲಿದೆ. ಈ ಇಲಾಖೆ ಕಾನೂನಿನ ಅನುಸಾರ ಈಗಿರುವ ಕೋಟೆಯನ್ನು ಕಟ್ಟಲು ಅನುಮತಿ ಇಲ್ಲದಿದ್ದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಿತ್ತೂರಿನಲ್ಲಿರುವ ಸರ್ಕಾರಿ ಜಾಗೆಯಲ್ಲಿ ಕೋಟೆಯ ಕಟ್ಟಡದಂತೆ ಇನ್ನೊಂದು ಕಟ್ಟಡವನ್ನು ಕಟ್ಟುವ ಮುಖಾಂತರ ಚನ್ನಮ್ಮಾಜಿಗೆ ಗೌರವ ಸಲ್ಲಿಸಬೇಕು ಹಾಗೂ ಕಿತ್ತೂರನ್ನು ಪ್ರವಾಸಿ ತಾಣವನ್ನಾಗಿಸಬೇಕು ಎಂದರು.
Related Articles
Advertisement
ಶಾಸಕ ಮಹಾಂತೇಶ ದೊಡಗೌಡರ ಮಾತನಾಡಿ, ವಚನಾನಂದ ಶ್ರೀಗಳು ಎಲ್ಲರಿಗೂ ಒಳ್ಳೆಯ ಮಾರ್ಗದರ್ಶನ ನೀಡುತ್ತಿದ್ದು, ಎಲ್ಲರೂ ಇವರ ಸೂಚನೆಯಂತೆ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು. ಕಿತ್ತೂರು ಉತ್ಸವವನ್ನು ವಿಶೇಷವಾಗಿ ಹಾಗೂ ಜನೋತ್ಸವವಾಗಿ ಆಚರಿಸಲು ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು. ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗಿಂದ್ರ ಸ್ವಾಮೀಜಿ, ನಿಚ್ಚಣಕಿಯ ಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ವಾಮೀಜಿ, ಹಗರಿಬೊಮ್ಮನಹಳ್ಳಿ ಶಾಖಾಮಠದ ಮಹಾಂತ ಸ್ವಾಮೀಜಿ, ಸಂಗನಬಸವ ಸ್ವಾಮೀಜಿ, ಶಾಂತಮೂರ್ತಿ ಲಕ್ಷ್ಮಣ ಮುತ್ಯಾ ಸ್ವಾಮೀಜಿ, ಅಭಿನವ ಸಂಗನಬಸವ ಸ್ವಾಮೀಜಿ, ಮಲ್ಲಿಕಾರ್ಜುನ ಸ್ವಾಮೀಜಿ, ಯೋಗೇಶ್ವರ ತಾಯಿಗಳು ಸಾನ್ನಿಧ್ಯ ವಹಿಸಿದ್ದರು. ಶಾಸಕರಾದ ವಿರುಪಾಕ್ಷಪ್ಪ ಬಳ್ಳಾರಿ, ಸಿ.ಸಿ.ಪಾಟೀಲ, ಸಿದ್ದು ಸವದಿ, ಸಿ.ಎಂ. ನಿಂಬಣ್ಣವರ, ಮಾಜಿ ಸಂಸದ ಮಂಜುನಾಥ ಕುಣ್ಣೂರ, ಮಾಜಿ ಶಾಸಕ ಎಸ್.ವೈ. ಚಿಕ್ಕನಗೌಡ್ರ, ವಿಧಾನ ಪರಿಷತ್ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಇದ್ದರು.
ವೀರಶೈವ ಹಾಗೂ ಲಿಂಗಾಯತ ನಮ್ಮೆಲ್ಲರಿಗೂ ತಂದೆ ತಾಯಿಗಳಿದ್ದಂತೆ, ನಾವೆಲ್ಲರೂ ಕೂಡ ಬಸವಣ್ಣನವರ ಎಲ್ಲ ಆಚಾರ ವಿಚಾರಗಳನ್ನು ಪ್ರೀತಿಸುವ ಜೊತೆಗೆ ಜೀವನದಲ್ಲಿ ಅಳವಡಿಸಿಕೊಂಡಿದ್ದೇವೆ. ಸರ್ವ ಸಂಘ ಹಾಗೂ ಸಮಾಜದ ಜನರನ್ನು ಪ್ರೀತಿ ವಿಶ್ವಾಸದಿಂದ ಕಾಣುವುದರ ಜೊತೆಗೆ ಒಳ್ಳೆಯ ಸಮಾಜ ನಿರ್ಮಾಣ ಮಾಡಬೇಕಾಗಿದೆ. ಪಂಚಮಸಾಲಿ ಸಮಾಜ ಎಂದಿಗೂ ಜಗತ್ತಿಗೆ ಅನ್ನವನ್ನು ನೀಡುವ ಕಾರ್ಯದಲ್ಲಿ ತೊಡಗಿಕೊಂಡಿದೆ.ವಚನಾನಂದ ಸ್ವಾಮೀಜಿ, ಹರಿಹರ
ಪಂಚಮಸಾಲಿ ಪೀಠದ ಜಗದ್ಗುರು