Advertisement
ಹೌದು ಚೀನಾದ ಶಾನ್‌ವೇ ಮೃಗಾಲಯಕ್ಕೆ ಎರಡು ಪಾಂಡಾಗಳನ್ನು ತರಲಾಗಿದೆ ಎಂದು ಮೃಗಾಲಯದ ಅಧಿಕಾರಿಗಳು ಭಾರಿ ಪ್ರಚಾರ ಮಾಡಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯುವಂತೆ ಮಾಡಿದ್ದಾರೆ ಅದರಂತೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರೂ ಬಂದಿದ್ದಾರೆ ತಮ್ಮ ಮೊಬೈಲ್ ನಲ್ಲಿ ಪಾಂಡಾದ ಫೋಟೋ ಕ್ಲಿಕ್ಕಿಸಿದ್ದಾರೆ, ಆದರೆ ಅಲ್ಲೊಬ್ಬ ಪ್ರವಾಸಿಗನಿಗೆ ಅಲ್ಲಿರುವ ಪಾಂಡಾದ ಹಾವಭಾವದಲ್ಲಿ ಏನೋ ವ್ಯತ್ಯಾಸ ಕಾಣತೊಡಗಿದೆ. ಇದರಿಂದ ಅನುಮಾನಗೊಂಡ ಆತ ಮೃಗಾಲಯದ ಅಧಿಕಾರಿಗಳ ಬಳಿ ತೆರಳಿ ಪಾಂಡಾದ ಬಗ್ಗೆ ವಿಚಾರಿಸಿದ್ದಾನೆ. ಇದಕ್ಕೆ ಮೃಗಾಲಯದ ಅಧಿಕಾರಿಗಳು ಸಮರ್ಪಕವಾದ ಉತ್ತರವನ್ನು ಕೊಟ್ಟು ಕಳುಹಿಸಿದ್ದಾರೆ.
Related Articles
Advertisement
ಅಸಲಿಗೆ ಇದು ಉತ್ತರ ಚೀನಾದಿಂದ ಬಂದ ಸ್ಪಿಟ್ಜ್ ತಳಿಯ ನಾಯಿಗಳು ಎನ್ನಲಾಗಿದ್ದು ಇದನ್ನು ತಂದ ಮೃಗಾಲಯದ ಅಧಿಕಾರಿಗಳು ಇದಕ್ಕೆ ಪಾಂಡಾ ರೀತಿ ಬಣ್ಣ ಬಳಿದು ಮೃಗಾಲಯದಲ್ಲಿ ಇರಿಸಿ ಪ್ರವಾಸಿಗರಿಗೆ ಪಾಂಡಾ ಎಂದು ನಂಬಿಸಿ ಮೋಸ ಮಾಡಿದ್ದಾರೆ.
ಮೃಗಾಲಯದ ಅಧಿಕಾರಿಗಳ ಮೋಸ ಬಯಲಿಗೆ ಬರುತ್ತಿದ್ದಂತೆ ಪ್ರವಾಸಿಗರು ತಮ್ಮ ಹಣ ವಾಪಾಸ್ ನೀಡುವಂತೆ ಒತ್ತಾಯಿಸಿದ್ದಾರೆ.
ಸದ್ಯ ಚೀನಾ ಮೃಗಾಲಯದ ಮೋಸದಾಟ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.