Advertisement

ಡೋಕ್ಲಾಂ ಬಳಿಕ ಉತ್ತರಾಖಂಡದಲ್ಲೂ ಚೀನ ಕಿರಿಕ್‌

10:04 AM Aug 01, 2017 | Team Udayavani |

ನವದೆಹಲಿ: ನಿರಂತರ ಗಡಿತಂಟೆಗಳನ್ನು ಮುಂದುವರಿಸುತ್ತಲೇ ಬಂದಿರುವ ಚೀನಾದ “ಪೀಪಲ್ಸ್‌ ಲಿಬರೇಷನ್‌ ಆರ್ಮಿ’ ಸೈನಿಕರು ಇದೀಗ ಉತ್ತರಾಖಂಡದಲ್ಲೂ ಇದನ್ನು ಮುಂದುವರಿಸಿದ್ದಾರೆ.

Advertisement

ಜು.25ರಂದು ಬೆಳಗ್ಗೆ ಉತ್ತರಾಖಂಡದ ಚಮೋಲಿ ಜಿಲ್ಲೆಯ ಬಾರಾಹೋತಿಯಲ್ಲೂ ಭಾರತದ ಗಡಿಯೊಳಕ್ಕೆ ಪಿಎಲ್‌ಎ ಸೈನಿಕರು ನುಗ್ಗಿದ್ದು ದನಗಾಹಿಗಳನ್ನು ಅಲ್ಲಿಂದ ತೆರಳುವಂತೆ ಬೆದರಿಸಿದ್ದಾರೆ ಎಂದು ಕೇಂದ್ರ ಗೃಹ ಇಲಾಖೆ ಮೂಲಗಳು ಹೇಳಿವೆ. ಅಚ್ಚರಿ ಎಂದರೆ ಭಾರತದ ರಕ್ಷಣಾ ಸಲಹೆಗಾರ ಅಜಿತ್‌ ದೋವಲ್‌ ಚೀನಾದಲ್ಲಿ ನಡೆಯುತ್ತಿರುವ ಬ್ರಿಕ್ಸ್‌ ರಕ್ಷಣಾ ಸಲಹೆಗಾರರ ಸಭೆಗೆ ಭೇಟಿ ನೀಡುವ ಮುನ್ನ ಈ ವಿದ್ಯಮಾನ ನಡೆದಿದೆ. ಈ ಮೂಲಕ ಚೀನಾ ಭಾರತದ ಗಡಿಯಾದ್ಯಂತ ಗಡಿ ಸಮಸ್ಯೆಗಳನ್ನು ಜೀವಂತವಾಗಿಡುವ ಪ್ರಯತ್ನಗಳನ್ನು ಮಾಡುತ್ತಿದೆ.

ಎಲ್ಲಿದೆ ಬಾರಾಹೋತಿ?: ಬಾರಾಹೋತಿ ಸುಮಾರು 80 ಕಿ.ಮೀ. ವಿಸ್ತಾರವಿದ್ದು, ಇಳಿಜಾರಿನ ಹುಲ್ಲುಗಾವಲಾಗಿದೆ. ಉತ್ತರಾಖಂಡದ ರಾಜಧಾನಿ ಡೆಹ್ರಾಡೂನ್‌ನಿಂದ 140 ಕಿ.ಮೀ. ದೂರವಿದ್ದು, ಉತ್ತರಪ್ರದೇಶ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ ಗಡಿ ಪೋಸ್ಟ್‌ಗಳ ಮಧ್ಯದ ವಲಯವಾಗಿದೆ. ಈ ಭಾಗ ಮಿಲಿಟರಿ ರಹಿತ ಪ್ರದೇಶ ವಾಗಿದ್ದು, ಇಂಡೋ-ಟಿಬೆಟಿಯನ್‌ ಪಡೆ (ಐಟಿಬಿಪಿ)ಗೂ ಬಂದೂಕು ತೆಗೆದುಕೊಂಡು ಹೋಗುವುದಕ್ಕೆ ಅನುಮತಿ ಇರುವುದಿಲ್ಲ. 1958ರಲ್ಲಿ ಇದನ್ನು ವಿವಾದಿತ ಪ್ರದೇಶ ಎಂದು ಗುರುತಿಸಿದ್ದು, ಎರಡೂ ದೇಶಗಳು ಅಲ್ಲಿ ಪಡೆಗಳನ್ನು ನಿಯೋಜಿಸದೇ ಇರುವ ಬಗ್ಗೆ ಒಪ್ಪಂದಕ್ಕೆ ಬಂದಿದ್ದವು. 1962ರ ಯುದ್ಧದ ಸಂದರ್ಭದಲ್ಲೂ ಚೀನಾದ ಸೇನೆ ಈ ಭಾಗಕ್ಕೆ ಪ್ರವೇಶಿಸಿರಲಿಲ್ಲ. 2000ರಲ್ಲಿ ಈ ಪ್ರದೇಶಗಳಲ್ಲಿ ಬಂದೂಕು ಒಯ್ಯದೇ ಇರುವ ಒಪ್ಪಂದಕ್ಕೆ ಬರಲಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next