Advertisement
ಕೋವಿಡ್ ಸೋಂಕಿನ ಮೂಲವನ್ನು ಹುಡುಕಲು ಹೊರಟ ಜಾಗತಿಕ ಸಮುದಾಯಕ್ಕೆ ಇನ್ನೂ ಸ್ಪಷ್ಟ ಉತ್ತರ ದೊರಕಿಲ್ಲ. ಚೀನಾವೇ ಕೋವಿಡ್ ಸೋಂಕಿನ ಜನಕ ಎಂದು ಇಡೀ ಜಗತ್ತು ಆಡಿಕೊಳ್ಳುತ್ತಿದ್ದರೂ ಅದಕ್ಕೆ ಸ್ಪಷ್ಟ ಪುರಾವೆ ಇಲ್ಲ. ಅದಕ್ಕೆ ಪೂರಕವೆಂಬಂತೆ ವೀಕೆಂಡ್ ಆಸ್ಟ್ರೇಲಿಯನ್ ಎಂಬ ಒಂದು ನಿಯತಕಾಲಿಕೆ ಭಯಾನಕ ವರದಿಯೊಂದನ್ನು ಜಗತ್ತಿಗೆ ಬಹಿರಂಗಪಡಿಸಿದ್ದು, ಅದು ಭಾರಿ ಚರ್ಚೆಯನ್ನು ಸೃಷ್ಟಿ ಮಾಡಿದೆ.
Related Articles
Advertisement
ಕೋವಿಡ್ 19 ಸಾಂಕ್ರಾಮಿಕ ಸೋಂಕು ಬರುವ ಐದು ವರ್ಷಗಳ ಮೊದಲು ಚೀನಾದ ಮಿಲಿಟರಿ ವಿಜ್ಞಾನಿಗಳು ಸಾರ್ಸ್ ಕೊರೋನ ವೈರಸ್ ಗಳ ಶಸ್ತ್ರಾಸ್ತ್ರೀಕರಣದ ಬಗ್ಗೆ ಚರ್ಚಿಸಿರುವುದಾಗಿ ಈ ಸಂಶೋಧನಾ ಲೇಖನ ಬಹಿರಂಗಪಡಿಸಿದೆ.
ಇನ್ನು, ವೀಕೆಂಡ್ ಆಸ್ಟ್ರೇಲಿಯಾದ ವರದಿಯನ್ನು ನ್ಯೂಸ್. ಕಾಮ್ ನಲ್ಲಿ ಪ್ರಕಟಿಸಲಾಗಿದೆ. ನ್ಯೂಸ್.ಕಾಮ್ ಗೆ ಈ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಂಡ ಆಸ್ಟ್ರೇಲಿಯನ್ ಸ್ಟ್ರಾಟೆಜಿಕ್ ಪಾಲಿಸಿ ಇನ್ಸ್ಟಿಟ್ಯೂಟ್ (ಎಎಸ್ ಪಿ ಐ) ನ ಕಾರ್ಯನಿರ್ವಾಹಕ ನಿರ್ದೇಶಕ ಪೀಟರ್ ಜೆನ್ನಿಂಗ್ಸ್, ಇದು ಚೀನಾದವರಿಗೆ ಮಹತ್ವದ್ದಾಗಿದೆ ಎಂದು ನಾನು ಭಾವಿಸುತ್ತೇನೆ ಏಕೆಂದರೆ ಚೀನಾದ ವಿಜ್ಞಾನಿಗಳು ಕೊರೋನ ವೈರಸ್ ನ ವಿವಿಧ ತಳಿಗಳ ಬಗ್ಗೆ ಯೋಚಿಸುತ್ತಿದ್ದಾರೆ ಮತ್ತು ಅದನ್ನು ಹೇಗೆ ನಿಯೋಜಿಸಬಹುದು ಎಂಬುದರ ಬಗ್ಗೆ ಯೋಚಿಸುತ್ತಿದ್ದಾರೆ ಎಂದು ಸ್ಪಷ್ಟವಾಗಿ ತೋರಿಸುತ್ತದೆ” ಎಂದು ಹೇಳಿದ್ದಾರೆ.
ಜಾಗತಿಕ ಯುದ್ಧಕ್ಕಾಗಿ ಇಂತಹ ಸಾಂಕ್ರಾಮಿಕ ರೋಗಗಳನ್ನು ಹಬ್ಬಿಸಿರುವ ಸಾಧ್ಯತೆಯನ್ನು ಇದು ಸೂಚಿಸುತ್ತದೆ ಎಂದು ಅವರು ಆತಂಕ ವ್ಯಕ್ತ ಪಡಿಸಿದ್ದಾರೆ.
ಇನ್ನು, ಸೈಬರ್ ಸೆಕ್ಯುರಿಟಿ ತಜ್ಞ ರಾಬರ್ಟ್ ಪಾಟರ್, ಈ ಲೇಖನವನ್ನು ಪರಿಶೀಲಿಸಲು ಕೇಳಿಕೊಂಡರು, ಈ ದಾಖಲೆಗಳು ಖಂಡಿತವಾಗಿಯೂ ನಕಲಿ ಆಗಿರಲಿಕ್ಕಿಲ್ಲ. “ಇದು ನಿಜವೆಂದು ನಾವು ತೀರ್ಮಾನಕ್ಕೆ ಬಂದಿದ್ದೇವೆ … ಇದು ನಕಲಿ ಅಲ್ಲ. ಆದರೆ ಈ ಬಗ್ಗೆ ವಿಸ್ತೃತವಾಗಿ ಪರಿಶೀಲನೆಯಾಗಬೇಕು ಎಂದು ಹೇಳಿರುವುದಾಗಿ ನ್ಯೂಸ್ . ಕಾಮ್ ವರದಿ ಮಾಡಿದೆ.
ಒಟ್ಟಿನಲ್ಲಿ, “ಚೀನಾ ಮೇಡ್” ವೈರಸ್ ಇದು ಎನ್ನುವುದಕ್ಕೆ ಚೀನಾದ ವಿಜ್ಞಾನಿಗಳೇ ಬರೆದಿರುವ ಈ ಸಂಶೋಧನಾ ಲೇಖನ ಬಹುತೇಕ ಉತ್ತರ ನೀಡಿದೆ ಎಂಬಂತೆ ವೀಕೆಂಡ್ ಆಸ್ಟ್ರೇಲಿಯನ್ ವರದಿ ಮಾಡಿದೆ.
ಓದಿ : ಸಾಲ ಕಂತು ಪಾವತಿಗೆ ಕೃಷಿಕರಿಗೆ ನೋಟಿಸ್ : ಅವಧಿ ವಿಸ್ತರಿಸುವಂತೆ ಸಿಎಂ ಗೆ ಸಚಿವ ಕೋಟ ಮನವಿ