Advertisement

ರಾಕೆಟ್ ಮಾಹಿತಿ ಮುಚ್ಚಿಡುತ್ತಿರುವ ಚೀನಾ !

12:33 PM Jul 31, 2022 | Team Udayavani |

ವಾಷಿಂಗ್ಟನ್‌: ಚೀನಾದ ರಾಕೆಟ್ ಶನಿವಾರ ಹಿಂದೂ ಮಹಾಸಾಗರದ ಮೇಲೆ ಬಿದ್ದಿದೆ. ಆದರೆ ಅದರ ಅವಶೇಷಗಳು ಎಲ್ಲಿ ಬಿದ್ದಿದೆ ಎಂಬುದನ್ನು ತಿಳಿಯಲು ಅಗತ್ಯವಾದ “ನಿರ್ದಿಷ್ಟ ಪಥದ ಮಾಹಿತಿಯನ್ನು”  ಹಂಚಿಕೊಂಡಿಲ್ಲ ಎಂದು ನಾಸಾ ಹೇಳಿದೆ.

Advertisement

ಲಾಂಗ್ ಮಾರ್ಚ್ 5 ಬಿ ರಾಕೆಟ್ ಶನಿವಾರ ಮಧ್ಯಾಹ್ನ 12:45 ಕ್ಕೆ ಹಿಂದೂ ಮಹಾಸಾಗರದಲ್ಲಿ ಪತನಗೊಂಡಿದೆ ಎಂದು ಯುಎಸ್ ಬಾಹ್ಯಾಕಾಶ ಕಮಾಂಡ್ ಹೇಳಿದೆ.

“ಬಾಹ್ಯಕಾಶ ಅಧ್ಯಯನದಲ್ಲಿ ತೊಡಗುವ ರಾಷ್ಟ್ರಗಳು ಸ್ಥಾಪಿತವಾದ ಉತ್ತಮ ನಡಾವಳಿಗಳನ್ನು ಅನುಸರಿಸಬೇಕು ಮತ್ತು ಸಂಭಾವ್ಯ ಅವಶೇಷಗಳ ಅಪಾಯದ ಪ್ರಭಾವದ ಮುನ್ಸೂಚನೆಗಳನ್ನು ಅನುಮತಿಸಲು ಮುಂಚಿತವಾಗಿ ಮಾಹಿತಿಯನ್ನು ಹಂಚಿಕೊಳ್ಳಬೇಕು” ಎಂದು ನಾಸಾ ನಿರ್ವಾಹಕ ಬಿಲ್ ನೆಲ್ಸನ್ ಹೇಳಿದ್ದಾರೆ. “ಹಾಗೆ ಮಾಡುವುದು ಬಾಹ್ಯಾಕಾಶದ ಜವಾಬ್ದಾರಿಯುತ ಬಳಕೆಗೆ ಮತ್ತು ಭೂಮಿಯ ಮೇಲಿನ ಜನರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನಿರ್ಣಾಯಕವಾಗಿದೆ.” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಹೊಸ ಶಿಕ್ಷಣ ನೀತಿಗೆ ತಕ್ಕಂತೆ ಸರ್ಕಾರಿ ಶಾಲೆಗಳಿಗೆ ಸೌಲಭ್ಯ: ಅಬಕಾರಿ ಸಚಿವ ಕೆ.ಗೋಪಾಲಯ್ಯ

ರಾಕೆಟ್ ಪತನಗೊಂಡ ಅವಶೇಷಗಳ ವಿಡಿಯೋವನ್ನು ಮಲೇಷ್ಯಾದ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.

Advertisement

22.5 ಟನ್‌ಗಳಷ್ಟು (ಸುಮಾರು 48,500 ಪೌಂಡ್) ತೂಕದ ರಾಕೆಟ್‌ನ ಮುಖ್ಯ ಭಾಗ ಅನಿಯಂತ್ರಿತವಾಗಿ ಭೂಮಿಗೆ ಬೀಳುವುದು ಅಜಾಗರೂಕತೆ ನಡೆ ಎಂದು ಲಾಸ್ ಏಂಜಲೀಸ್ ಬಳಿಯ ಸರ್ಕಾರಿ ಅನುದಾನಿತ ಸಂಶೋಧನಾ ಕೇಂದ್ರ ಏರೋಸ್ಪೇಸ್ ಕಾರ್ಪ್ ಹೇಳಿದೆ.

ಈ ಅಜಾಗರೂಕತೆಯ ನಡೆ ಬಗ್ಗೆ ವಾಷಿಂಗ್ಟನ್‌ನಲ್ಲಿರುವ ಚೀನಾ ರಾಯಭಾರ ಕಚೇರಿ ಈ ಬಗ್ಗೆ ತಕ್ಷಣಕ್ಕೆ ಪ್ರತಿಕ್ರಿಯಿಸಿಲ್ಲ ಎಂದು ತಿಳಿದುಬಂದಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next